ಬೆಲೆ ಏರಿಕೆ ನಡುವೆಯೂ ಗದಗ ಜಿಲ್ಲೆಯಲ್ಲಿ ಬರೋಬ್ಬರಿ ₹340 ಕೋಟಿ ಮೊತ್ತದ ಮದ್ಯ ಬಿಕರಿ

Published : Mar 24, 2026, 05:40 AM IST
Liquor sales

ಸಾರಾಂಶ

2025-26ನೇ ಆರ್ಥಿಕ ವರ್ಷದಲ್ಲಿ, ಸರ್ಕಾರದ ಬೆಲೆ ಏರಿಕೆಯ ಹೊರತಾಗಿಯೂ ಗದಗ ಜಿಲ್ಲೆಯಲ್ಲಿ ಮದ್ಯ ಮಾರಾಟದಿಂದ ದಾಖಲೆಯ ಆದಾಯ ಸಂಗ್ರಹವಾಗಿದೆ. ಲಿಕ್ಕರ್ ಮಾರಾಟದ ಪ್ರಮಾಣ ಸ್ವಲ್ಪ ಕುಸಿದರೂ ಆದಾಯದಲ್ಲಿ ₹35 ಕೋಟಿ ಹೆಚ್ಚಳವಾಗಿದ್ದರೆ, ಬಿಯರ್ ಮಾರಾಟ ಮತ್ತು ಆದಾಯ ಎರಡರಲ್ಲೂ ಕುಸಿತ ಕಂಡುಬಂದಿದೆ. 

ಶಿವಕುಮಾರ ಕುಷ್ಟಗಿ

ಗದಗ: ಸರ್ಕಾರದ ಪ್ರಮುಖ ಆದಾಯದ ಮೂಲವಾದ ಅಬಕಾರಿ ಇಲಾಖೆಯಲ್ಲಿ 2025- 26ನೇ ಆರ್ಥಿಕ ವರ್ಷದಲ್ಲಿ ದಾಖಲೆ ಪ್ರಮಾಣದ ಮದ್ಯ ವಹಿವಾಟು ನಡೆದಿದ್ದು, ಶಾಶ್ವತ ಬರಪೀಡಿತ ಜಿಲ್ಲೆಯಿಂದಲೇ ಸುಮಾರು ₹400 ಕೋಟಿ ಮದ್ಯ ಮಾರಾಟವಾಗಿದೆ.

2025ರ ಏಪ್ರಿಲ್‌ನಿಂದ ಅನೇಕ ಮದ್ಯಗಳ ಮತ್ತು ಬಿಯರ್‌ಗಳ ಬೆಲೆಯನ್ನು ರಾಜ್ಯ ಸರ್ಕಾರ ಏರಿಕೆ ಮಾಡಿದ್ದರೂ ಜಿಲ್ಲೆಯ ಮದ್ಯಪ್ರಿಯರು ಮಾತ್ರ ಇದ್ಯಾವುದಕ್ಕೂ ತಲೆಬಿಸಿ ಮಾಡಿಕೊಳ್ಳದೇ ಹೆಚ್ಚೆಚ್ಚು ಖರೀದಿ ಮಾಡಿದ ಹಿನ್ನೆಲೆ 2024- 25ನೇ ಸಾಲಿಗಿಂತ 2025- 26ನೇ ಸಾಲಿನಲ್ಲಿ ಲಿಕ್ಕರ್ ಮತ್ತು ಬಿಯರ್ (ಬಾಕ್ಸ್‌ಗಳ ಲೆಕ್ಕದಲ್ಲಿ) ಮಾರಾಟದಲ್ಲಿ ಸ್ವಲ್ಪ ಕುಸಿತ ಕಂಡಿದ್ದರೂ ಬೆಲೆಗಳಲ್ಲಿ ಭಾರಿ ಏರಿಕೆಯಿಂದಾಗಿ ಅಬಕಾರಿ ಆದಾಯ ಅಧಿಕವಾಗಿದೆ.

ಮಾರಾಟ ವಿವರ

B2024- 25ನೇ ಸಾಲಿನಲ್ಲಿ ಐಎಂಎಲ್ (ಇಂಡಿಯನ್ ಮೇಡ್ ಲಿಕ್ಕರ್) 8.40 ಲಕ್ಷ ಬಾಕ್ಸ್ ಮಾರಾಟದಿಂದ ₹306.34 ಕೋಟಿ ವ್ಯವಹಾರ ನಡೆದಿತ್ತು. 2025- 26ನೇ ಸಾಲಿನಲ್ಲಿ ಬೆಲೆ ಏರಿಕೆ ಹಾಗೂ ನಾನಾ ಕಾರಣದಿಂದ 8.35 ಲಕ್ಷ ಬಾಕ್ಸ್ (ಕಳೆದ ಬಾರಿಗಿಂತ 5 ಲಕ್ಷ ಕಡಿಮೆ) ಮಾರಾಟವಾಗಿದೆ. ಆದರೆ, ₹340.54 ಕೋಟಿ ಮೊತ್ತದ ವ್ಯವಹಾರ ದಾಖಲಾಗಿದೆ. ಕಳೆದ ಬಾರಿಗಿಂತ ಲಿಕ್ಕರ್ ಮಾರಾಟದಲ್ಲಿ ₹35 ಕೋಟಿ ಮೊತ್ತದ ವ್ಯವಹಾರ ಅಧಿಕವಾಗಿದೆ.

ಬೆಲೆ ಏರಿಕೆ ಬಿಸಿ ಬಿಯರ್‌ಗೆ

ಬಿಯರ್ ಮಾರಾಟದಲ್ಲಿ ಅಬಕಾರಿ ಇಲಾಖೆ ಕಳೆದ ಬಾರಿಗಿಂತ ಪ್ರಸಕ್ತ ಸಾಲಿನಲ್ಲಿ ₹3 ಕೋಟಿ ಮೊತ್ತದ ಕಡಿಮೆ ಪ್ರಗತಿ ಸಾಧಿಸಿದೆ. ಬಿಯರ್ ದರದಲ್ಲಿ ಸರ್ಕಾರ ಮಾಡಿರುವ ಭಾರಿ ಪ್ರಮಾಣದ ಹೆಚ್ಚಳವೇ ಇದಕ್ಕೆ ಪ್ರಮುಖ ಕಾರಣವಾಗಿದೆ. 2024- 25ನೇ ಸಾಲಿನಲ್ಲಿ 4.09 ಲಕ್ಷ ಬಾಕ್ಸ್ ಮಾರಾಟವಾಗಿ, 50.05 ಕೋಟಿ ಆರ್ಥಿಕ ಸಂಪನ್ಮೂಲ ಹರಿದು ಬಂದಿತ್ತು. 2025- 26ನೇ ಸಾಲಿನಲ್ಲಿ 3.38 ಲಕ್ಷ ಬಾಕ್ಸ್(ಕಳೆದ ಬಾರಿಗಿಂತ 71 ಸಾವಿರ ಬಾಕ್ಸ್ ಕಡಿಮೆ) ಮಾರಾಟವಾಗಿ ₹47.05 ಕೋಟಿ ಮೊತ್ತದ ವಹಿವಾಟು ಬಿಯರ್ ಮಾರಾಟದಿಂದ ನಡೆದಿದೆ.

ಅಲ್ಪ ಕುಸಿತ: ಜಿಲ್ಲೆಯಲ್ಲಿ ಇಲಾಖೆ ನಿಗದಿ ಮಾಡಿದ ಗುರಿ ಸಾಧಿಸಲಾಗಿದೆ. ಮದ್ಯ ಮಾರಾಟದಲ್ಲಿ ಅಲ್ಪ ಕುಸಿತವಾಗಿದೆ. ಆದರೆ ಉತ್ತಮ ಆರ್ಥಿಕ ವಹಿವಾಟು ನಡೆದಿದ್ದು ಸಂಪನ್ಮೂಲವೂ ಹರಿದು ಬಂದಿದೆ ಎಂದು ಅಬಕಾರಿ ಡಿಸಿ ಲಕ್ಷ್ಮಿ ಎನ್. ತಿಳಿಸಿದ್ದಾರೆ.

ಮದ್ಯ ಮಾರಾಟದ ವಿವರ(ಬಾಕ್ಸ್‌ಗಳ ಲೆಕ್ಕದಲ್ಲಿ)

ವಲಯ- 2025- 26 -2024-25

ಗದಗ-  293535 -294012

ಮುಂಡರಗಿ -104099- 106798

ನರಗುಂದ -97085- 98484

ರೋಣ -173831- 171667

ಶಿರಹಟ್ಟಿ- 166109 -169667

ಬಿಯರ್ ಮಾರಾಟ(ಬಾಕ್ಸ್‌ಗಳಲ್ಲಿ)

ವಲಯ -2025-26 - 2024- 25

ಗದಗ- 141172- 170509

ಮುಂಡರಗಿ- 30782-36198

ನರಗುಂದ- 28748- 34537

ರೋಣ-79671- 96839

ಶಿರಹಟ್ಟಿ- 62433- 73635

PREV
Read more Articles on
click me!

Recommended Stories

ದಾವಣಗೆರೆ ದಕ್ಷಿಣ -ಬಾಗಲಕೋಟೆ ಉಪ ಚುನಾವಣೆ ಕಣ: ತೆರೆಮರೆಯಲ್ಲಿ ಶುರುವಾದ ಅಸಲಿ ಆಟ?
ಅಪ್ಪನಿಗೆ ಅನಾರೋಗ್ಯ ಮನೆಯಲ್ಲಿ ಬಡತನ SSLC ಪರೀಕ್ಷೆ ಬಿಟ್ಟು ಕೂಲಿಗೆ ಹೋದ ಬಾಲಕಿ: ಆಮೇಲಾಗಿದ್ದೇನು?