ಕರಗ ಕುರಿತು ಅವಹೇಳನಕಾರಿ ಮಾತು: ತಿಗಳ ಜನಾಂಗದ ಕ್ಷಮೆ ಕೇಳಿದ ಶಾಸಕ ಹ್ಯಾರಿಸ್

By Govindaraj SFirst Published Mar 13, 2023, 9:10 AM IST
Highlights

ವಿಶ್ವವಿಖ್ಯಾತ ಬೆಂಗಳೂರು ಕರಗ ಕುರಿತು ಶಾಸಕ ಎನ್​.ಎ.ಹ್ಯಾರಿಸ್ ಅವಹೇಳನಕಾರಿಯಾಗಿ ಮಾತನಾಡಿದ್ದಕ್ಕೆ ಇಂದು ನಡೆಯಬೇಕಿದ್ದ ಸುದ್ದಿಗೋಷ್ಠಿ ರದ್ದು ಮಾಡಿ ವಹ್ನಿಕುಲ ಕ್ಷತ್ರಿಯ(ತಿಗಳ) ಜನಾಂಗದ ಕ್ಷಮೆಯನ್ನು ಶಾಸಕ ಹ್ಯಾರಿಸ್ ಕೇಳಿದ್ದಾರೆ. 

ಬೆಂಗಳೂರು (ಮಾ.13): ವಿಶ್ವವಿಖ್ಯಾತ ಬೆಂಗಳೂರು ಕರಗ ಕುರಿತು ಶಾಸಕ ಎನ್​.ಎ.ಹ್ಯಾರಿಸ್ ಅವಹೇಳನಕಾರಿಯಾಗಿ ಮಾತನಾಡಿದ್ದಕ್ಕೆ ಇಂದು ನಡೆಯಬೇಕಿದ್ದ ಸುದ್ದಿಗೋಷ್ಠಿ ರದ್ದು ಮಾಡಿ ವಹ್ನಿಕುಲ ಕ್ಷತ್ರಿಯ(ತಿಗಳ) ಜನಾಂಗದ ಕ್ಷಮೆಯನ್ನು ಶಾಸಕ ಹ್ಯಾರಿಸ್ ಕೇಳಿದ್ದಾರೆ. ಮಾತಿನ ಭರಾಟೆಯಲ್ಲಿ ಈ ರೀತಿ ಮಾತನಾಡಿದ್ದೇನೆ. ತನ್ನ ಮಾತಿನ ತಪ್ಪು ಅರಿವಾಗಿದೆ. ವಹ್ನಿಕುಲ ಕ್ಷತ್ರಿಯ,(ತಿಗಳ) ಸಮುದಾಯದ ಹಲವು ಸ್ನೇಹಿತರು ನನ್ನ ಅತ್ಮಿಯರು. ದಯವಿಟ್ಟು ವಹ್ನಿಕುಲ ಕ್ಷತ್ರಿಯ(ತಿಗಳ)  ಸಮುದಾಯದ ಯಾರಿಗದ್ರು ಮನಸ್ಸು ನೋವಗಿದ್ರೆ ಕ್ಷಮೆ ಇರಲಿ ಎಂದು  ಸಾಮಾಜಿಕ ಜಾಲತಾಣದ ಮೂಲಕ ಶಾಸಕ ಹ್ಯಾರಿಸ್ ಕ್ಷಮೆಯಾಚಿಸಿದ್ದಾರೆ.

ಏನಿದು ಘಟನೆ: ಸಾರ್ವಜನಿಕರನ್ನು ಉದ್ದೇಶಿಸಿ ರಾಜಕೀಯವಾಗಿ ಮಾತನಾಡುತ್ತಿದ್ದ ಹ್ಯಾರಿಸ್​, ಬಿಜೆಪಿ ವಿರುದ್ಧ ಹರಿಹಾಯ್ದಿದ್ದರು. ಆ ವೇಳೆ ಆಡಳಿತ ಪಕ್ಷದವನ್ನು ಟೀಕಿಸುವ ಭರದಲ್ಲಿ 'ಅವರು ನಾಟಕ ಮಾಡುತ್ತಿದ್ದಾರೆ, ಇದೊಂದು ಎರಡು ತಿಂಗಳು ನಾಟಕದ ಸಮಯ, ಹಬ್ಬಕ್ಕೆ ಕರಗ ಟೈಮ್​ನಲ್ಲೆಲ್ಲ ಹಾಕೊಂಡು ಬರ್ತಾರಲ್ಲ, ಅದೇ ಥರ ಇವರೆಲ್ಲ ಈಗ ಓಡಾಡುತ್ತಿರೋದು' ಎಂಬುದಾಗಿ ಹೇಳಿದ್ದರು. ಹೀಗಾಗಿ ಹ್ಯಾರಿಸ್ ಹೇಳಿಕೆಯನ್ನು ಖಂಡಿಸಿ ಇಂದು ಭಾರಿ ಪ್ರತಿಭಟನೆ ನಡೆಸಲು ಕರಗ ಉತ್ಸವ ಮಂಡಳಿ ಸಿದ್ಧತೆ ಮಾಡಿಕೊಂಡಿತ್ತು. ಇತ್ತ ಇದರ ಸುಳಿವು ಸಿಗುತ್ತಿದ್ದಂತೆ ಹ್ಯಾರಿಸ್ ಕ್ಷಮೆಯಾಚಿಸಿ, ಇಂದು ನಡೆಯಬೇಕಿದ್ದ ಸುದ್ದಿಗೋಷ್ಠಿ ರದ್ದು ಮಾಡಿದ್ದಾರೆ.

ಬೆಂಗಳೂರು-ಪುಣೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಡಾಂಬರ್ ಕಾಮಗಾರಿ: ನಾಲ್ಕೈದು ಕಿ.ಮೀ.ವರೆಗೂ ಸಾಲುಗಟ್ಟಿ ನಿಂತ ವಾಹನಗಳು

‘ತಿಗಳ ಕ್ಷತ್ರಿಯರ ನಡೆ, ಕಾಂಗ್ರೆಸ್‌ ಕಡೆ’: ಎಲ್ಲಾ ಸಮುದಾಯಗಳಿಗೂ ಪ್ರತ್ಯೇಕ ನಿಗಮ-ಮಂಡಳಿ ಸ್ಥಾಪನೆ ಮಾಡಿರುವ ರಾಜ್ಯ ಬಿಜೆಪಿ ಸರ್ಕಾರವು ತಿಗಳ ಕ್ಷತ್ರಿಯ ಸಮುದಾಯವನ್ನು ಕಡೆಗಣಿಸಿದೆ. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ರೂಪಿಸಿದ್ದ ಕಾರ್ಯಕ್ರಮಗಳನ್ನೂ ರದ್ದುಗೊಳಿಸಿದೆ. ಹೀಗಾಗಿ ಮಾ.14ರಂದು ಬೆಳಗ್ಗೆ 10 ಗಂಟೆಗೆ ಮೈಸೂರು ರಸ್ತೆಯ ಪೂರ್ಣಿಮಾ ಪ್ಯಾಲೇಸ್‌ನಲ್ಲಿ ‘ತಿಗಳ ಕ್ಷತ್ರಿಯರ ನಡೆ, ಕಾಂಗ್ರೆಸ್‌ ಕಡೆ’ ಹೆಸರಿನಲ್ಲಿ ಜಾಗೃತಿ ಸಮಾವೇಶ ಹಮ್ಮಿಕೊಂಡಿದ್ದೇವೆ ಎಂದು ವಿಧಾನಪರಿಷತ್ತಿನ ಕಾಂಗ್ರೆಸ್‌ ಸದಸ್ಯ ಪಿ.ಆರ್‌.ರಮೇಶ್‌ ಹೇಳಿದ್ದಾರೆ.

ನಗರದ ಖಾಸಗಿ ಹೋಟೆಲ್‌ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ತಿಗಳ ಕ್ಷತ್ರಿಯ ಸಮಾಜದ ವಹ್ನಿಕುಲ ಕ್ಷತ್ರಿಯ, ಅಗ್ನಿಕುಲ ಕ್ಷತ್ರಿಯ, ಶಂಭುಕುಲ ಕ್ಷತ್ರಿಯ, ವನ್ನಿಯಾರ್‌, ಧರ್ಮರಾಜು ಕಾಪು, ಪಳ್ಳಿ, ವನ್ನಿ ಗೌಂಡರ್‌, ಪಡೆಯಾಚ್ಚಿ, ಕಂಧರ್‌, ಮಾಲಗಾರ್‌, ಅಗ್ನಿ-ವನ್ನಿ, ವನ್ನಿ ರೆಡ್ಡಿ, ಅಗ್ನಿ ರೆಡ್ಡಿ ಸೇರಿ ಎಲ್ಲಾ ಉಪ ಪಂಗಡಗಳ ಕಾಂಗ್ರೆಸ್‌ ಬೆಂಬಲಿಗರು ‘ಕರ್ನಾಟಕ ರಾಜ್ಯ ತಿಗಳ ಕ್ಷತ್ರಿಯ ಕಾಂಗ್ರೆಸ್‌ ಮುಖಂಡರ ಹಾಗೂ ಕಾರ್ಯಕರ್ತರ ಜಾಗೃತಿ ಸಮಾವೇಶ’ ಹಮ್ಮಿಕೊಂಡಿದ್ದೇವೆ ಎಂದು ಹೇಳಿದರು.

ಮಂಡ್ಯದಲ್ಲಿ ಮೋದಿ ಪರ ಅಲೆ ಎದ್ದಿದೆ: ನಳಿನ್‌ ಕುಮಾರ್‌ ಕಟೀಲ್‌

ರಾಜ್ಯ ಸರ್ಕಾರವು ರಾಜ್ಯಾದ್ಯಂತ ಇರುವ ತಿಗಳ ಕ್ಷತ್ರಿಯ ಜನಾಂಗವನ್ನು ಸಂಪೂರ್ಣವಾಗಿ ಕಡೆಗಣಿಸಿದೆ. ಈಗಾಗಲೇ ಸರ್ಕಾರದಿಂದ ರಾಜ್ಯದಲ್ಲಿರುವ ಎಲ್ಲಾ ಜಾತಿಗಳು ಹಾಗೂ ಸಮುದಾಯಗಳನ್ನು ಅಭಿವೃದ್ಧಿ ಮಾಡಲು ನಿಗಮ ಮಂಡಳಿ ಮಾಡಲಾಗಿದೆ. ಆದರೆ ತಿಗಳ ಕ್ಷತ್ರಿಯ ಸಮುದಾಯಕ್ಕೆ ಯಾವುದೇ ನಿಗಮ ಮಂಡಳಿಯನ್ನು ಸ್ಥಾಪಿಸದೆ ಕಡೆಗಣಿಸಾಗಿದೆ. ಬೊಮ್ಮಾಯಿ ಸರ್ಕಾರ ಸಮುದಾಯಕ್ಕೆ ಬಜೆಟ್‌ನಲ್ಲಿ ಕಾಯ್ದಿರಿಸಿದ್ದ ಹಣದ ಪೈಕಿ ಒಂದು ರುಪಾಯಿ ಕೂಡ ಖರ್ಚು ಮಾಡಿಲ್ಲ ಎಂದರು.

click me!