ಯಾದಗಿರಿ ತಾಲೂಕಿನ ಯಡ್ಡಳ್ಳಿ ಗ್ರಾಮದ ವಿದ್ಯಾರ್ಥಿ ಲಾಕ್‌ಡೌನ್ ಆರಂಭ ದಿನಗಳಲ್ಲಿ ಮಹಾರಾಷ್ಟ್ರ ರಾಜ್ಯದ ಪುಣೆ ನಗರಕ್ಕೆ ಸಂಬಂಧಕರ ಮನೆಗೆ ತೆರಳಿದ್ದ| ಪರೀಕ್ಷೆ ನಿಮಿತ್ತ ಒಂದು ವಾರದ ಹಿಂದೆ ಜಿಲ್ಲೆಗೆ ಆಗಮಿಸಿದ ಅವನನ್ನು ಜಿಲ್ಲೆಯ ವಡಗೇರಾ ಕ್ವಾರೆಂಟೈನ್ ಕೇಂದ್ರದಲ್ಲಿ ಇರಿಸಾಗಿತ್ತು|
ಯಾದಗಿರಿ(ಜೂ.26): ನಿನ್ನೆ(ಗುರುವಾರ)ಯಿಂದ ಆರಂಭವಾದ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯಬೇಕಿದ್ದ ವಿದ್ಯಾರ್ಥಿಗೆ ಕೊರೋನಾ ವೈರಸ್ ಪಾಸಿಟಿವ್ ಕಂಡು ಬಂದಿರುವುದರಿಂದ ಗುರುವಾರ ನಸುಕಿನ ಜಾವ ಆತನನ್ನು ನಗರದ ಜಿಲ್ಲಾ ಆಸ್ಪತ್ರಗೆ ಚಿಕಿತ್ಸೆಗೆ ದಾಖಲಿಸಲಾಗಿದೆ. ಹೀಗಾಗಿ ವಿದ್ಯಾರ್ಥಿ ಪರೀಕ್ಷೆಗೆ ಹಾಜರಾಗುವುದು ಆಗಲಿಲ್ಲ ಎಂದು ತಿಳಿದು ಬಂದಿದೆ.
ಯಾದಗಿರಿ ತಾಲೂಕಿನ ಯಡ್ಡಳ್ಳಿ ಗ್ರಾಮದ ವಿದ್ಯಾರ್ಥಿ ಲಾಕ್‌ಡೌನ್ ಆರಂಭ ದಿನಗಳಲ್ಲಿ ಮಹಾರಾಷ್ಟ್ರ ರಾಜ್ಯದ ಪುಣೆ ನಗರಕ್ಕೆ ಸಂಬಂಧಕರ ಮನೆಗೆ ತೆರಳಿದ್ದ. ಪರೀಕ್ಷೆ ನಿಮಿತ್ತ ಒಂದು ವಾರದ ಹಿಂದೆ ಜಿಲ್ಲೆಗೆ ಆಗಮಿಸಿದ ಅವನನ್ನು ಜಿಲ್ಲೆಯ ವಡಗೇರಾ ಕ್ವಾರೆಂಟೈನ್ ಕೇಂದ್ರದಲ್ಲಿ ಇರಿಸಾಗಿತ್ತು.
undefined
SSLC ಎಕ್ಸಾಂ: 10 ಕಿ.ಮೀ ನಡೆದು ಬಂದು ಪರೀಕ್ಷೆ ಬರೆದ ವಿದ್ಯಾರ್ಥಿಗಳು..!
ಆತನ ವೈದ್ಯಕೀಯ ವರದಿ ಬುಧವಾರ ಪಾಸಿಟಿವ್ ಎಂದು ಬರುತ್ತಿದಂತೆಯೇ ಮುಂಜಾಗೃತಾ ಕ್ರಮವಾಗಿ ಕಂದಾಯ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳು ಗುರುವಾರ ಬೆಳಿಗ್ಗೆ ಹೆಚ್ಚಿನ ಚಿಕಿತ್ಸೆ ಗಾಗಿ ಆತನ್ನು ನಗರದ ಹೊಸ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದಾರೆ.