ಕುಷ್ಟಗಿ: ದೇವಸ್ಥಾನಗಳ ಕಟ್ಟೆ ನೆಲಸಮ: ಭಕ್ತರಿಂದ ಭಾರೀ ವಿರೋಧ

By Kannadaprabha News  |  First Published Mar 2, 2020, 8:41 AM IST

19 ದೇವಸ್ಥಾನಗಳ ಕಟ್ಟೆ ನೆಲಸಮ| ಸುಪ್ರೀಂಕೋರ್ಟ್ ಆದೇಶ ಪಾಲಿಸಿದ ಪುರಸಭೆಯ ಅಧಿಕಾರಿಗಳು| ಕೊಪ್ಪಳ ಜಿಲ್ಲೆ ಕುಷ್ಟಗಿ ಪಟ್ಟಣದಲ್ಲಿ ನಡೆದ ತೆರವು ಕಾರ್ಯಾಚರಣೆ|


ಕುಷ್ಟಗಿ[ಮಾ.02]: ಸಾರ್ವಜನಿಕರ ಮತ್ತು ಬಡಾವಣೆಗಳ ನಿವಾಸಿಗಳ ವಿರೋಧದ ನಡುವೆ ಪಟ್ಟಣದ 19 ಕಡೆಗಳ ರಸ್ತೆಗೆ ಅಡ್ಡಲಾಗಿದ್ದ ಹಾಗೂ ಅಕ್ಕಪಕ್ಕದಲ್ಲಿದ್ದ ವಿವಿಧ ದೇವಸ್ಥಾನಗಳ ಕಟ್ಟೆಗಳನ್ನು ಪುರಸಭೆಯ ಅಧಿಕಾರಿಗಳು ನೆಲಸಮಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ. 

ಇನ್ನು ಸಾರ್ವಜನಿಕ ಸ್ಥಳಗಳಲ್ಲಿ ಮತ್ತು ರಸ್ತೆ ಸಂಚಾರಕ್ಕೆ ತೊಂದರೆಯಾಗುತ್ತಿದ್ದ ಪಟ್ಟಣದ ಕೆಲ ಬಡಾವಣೆ ಹಾಗೂ ರಸ್ತೆ ಅಕ್ಕಪಕ್ಕದಲ್ಲಿದ್ದ ದೇವಸ್ಥಾನದ ಕಟ್ಟೆಗಳನ್ನು ಪುರಸಭೆಯ ಅಧಿಕಾರಿಗಳು ತಮ್ಮ ಕಚೇರಿಯ ಜೆಸಿಬಿ ಯಂತ್ರದ ಮೂಲಕ ನೆಲಸಮಗೊಳಿಸಿದ್ದಾರೆ. 

Tap to resize

Latest Videos

ವಿರೋಧ: 

ಪಟ್ಟಣದ 4ನೇ ವಾರ್ಡಿನಲ್ಲಿರುವ ಬನ್ನಿಕಟ್ಟೆ ಮತ್ತು ಇತರೆ ಕಡೆಗಳಲ್ಲಿ ಕೆಲ ಸಾರ್ವಜನಿಕರು ದೇವಸ್ಥಾನದ ಕಟ್ಟೆಗಳನ್ನು ತೆರವುಗೊಳಿಸುವುದಕ್ಕೆ ವಿರೋಧ ವ್ಯಕ್ತಪಡಿಸಿದ ಘಟನೆಗಳು ನಡೆದವು. ಆದರೆ ಪುರಸಭೆಯ ಮುಖ್ಯಾಧಿಕಾರಿ ಅಶೋಕ ಪಾಟೀಲ ಮತ್ತು ಕೆಲ ಸಿಬ್ಬಂದಿ ಸಾರ್ವಜನಿಕರಿಗೆ ಮತ್ತು ಬಡಾವಣೆಗಳ ನಿವಾಸಿಗರಿಗೆ ಇದೋ ಸುಪ್ರಿಂಕೋರ್ಟ್ ಆದೇಶವಿರುವುದರಿಂದ ಇವುಗಳನ್ನು ತೆರವು ಗೊಳಿಸಬೇಕಾಗಿರುವುದು ಅನಿವಾರ್ಯವಾಗಿದೆ. ಹಾಗಾಗಿ ನೀವುಗಳು ನಮಗೆ ಸಹಕಾರ ನೀಡಿ ಎಂದು ಸಾರ್ವಜನಿಕರ ಮತ್ತು ಬಡಾವಣೆಯ ನಿವಾಸಿಗರ ಮನವೊಲಿಸಿ ಸುಮಾರು 19 ಕಡೆಗಳಲ್ಲಿದ್ದ ಮಸೀದಿ ಕಟ್ಟೆಗಳು ಹಾಗೂ ವಿವಿಧ ದೇವಸ್ಥಾನಗಳ ಕಟ್ಟೆಗಳನ್ನು ನೆಲಸಮ ಮಾಡಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಇನ್ನು ಬಸ್ ನಿಲ್ದಾಣದ ಮುಂಭಾಗದಲ್ಲಿರುವ ಬನ್ನಿಕಟ್ಟೆಯನ್ನು ಪುರಸಭೆಯ ಅಧಿಕಾರಿಗಳು ನೆಲಸಮ ಮಾಡುವುದಕ್ಕೆ ಆಗಮಿಸಿದ್ದಾಗ ಅಲ್ಲಿನ ಕೆಲ ನಿವಾಸಿಗರು ಕೆಲಕಾಲ ವಿರೋಧ ವ್ಯಕ್ತ ಪಡಿಸಿದ್ದಕ್ಕೆ ಅಧಿಕಾರಿಗಳು ಯಂತ್ರದ ಮೂಲಕ ಕಟ್ಟೆಯನ್ನು ನೆಲಸಮ ಮಾಡಿರುವುದನ್ನು ಅಲ್ಲಿಯೇ ಬಿಟ್ಟು ಹೋಗಿರುವ ಘಟನೆ ನಡೆದಿದೆ.

click me!