ಮೈಸೂರು- ಕಾರವಾರ ರೈಲಿಗಾಗಿ ಶೋಭಾ ಕರಂದ್ಲಾಜೆಗೆ ಮನವಿ

Kannadaprabha News   | Asianet News
Published : Aug 18, 2021, 10:26 AM IST
ಮೈಸೂರು- ಕಾರವಾರ ರೈಲಿಗಾಗಿ ಶೋಭಾ ಕರಂದ್ಲಾಜೆಗೆ ಮನವಿ

ಸಾರಾಂಶ

ಮೈಸೂರು ರೈಲು ಹೋರಾಟ ಸಮಿತಿಯವರು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆಗೆ ಮನವಿ ಮೈಸೂರು- ಕಾರವಾರ ರೈಲು ಆರಂಭಿಸಲು ಮನವಿ ಪತ್ರ 

ಮೈಸೂರು (ಆ.18): ಮೈಸೂರು ರೈಲು ಹೋರಾಟ ಸಮಿತಿಯವರು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರನ್ನು ಭೇಟಿ ಮಾಡಿ, ಮೈಸೂರು- ಕಾರವಾರ ರೈಲು ಆರಂಭಿಸಲು ಮನವಿ ಪತ್ರ ಸಲ್ಲಿಸಿದರು. ಬಹಳಷ್ಟುಜನ ಉತ್ತರ ಕನ್ನಡ ಹಾಗೂ ಕರಾವಳಿ ಮೂಲದ ಜನ ಹಾಗೂ ಉದ್ಯಮಿಗಳು ಮೈಸೂರಿನಲ್ಲಿ ನೆಲೆಸಿದ್ದಾರೆ. 

ಅಲ್ಲದೇ ಪ್ರವಾಸೋದ್ಯಮದ ದೃಷ್ಟಿಯಿಂದಲೂ, ಮೈಸೂರು ಜಿಲ್ಲೆಯ ಪ್ರಯಾಣಿಕರಿಗೆ ಮೈಸೂರು- ಕಾರವಾರ- ಗೋವಾ ರೈಲು ಬಹಳ ಉಪಯುಕ್ತವಾಗಿದೆ. ಸುಬ್ರಹ್ಮಣ್ಯ, ಧರ್ಮಸ್ಥಳ, ಮಂಗಳೂರು, ಉಡುಪಿ, ಕೊಲ್ಲೂರು, ಗೋಕರ್ಣ ಸೇರಿದಂತೆ ಅನೇಕ ಧಾರ್ಮಿಕ ಕೇಂದ್ರಗಳಿಗೆ ಈ ಮೂಲಕ ಸಂಪರ್ಕವಿದೆ.

ಕಾರವಾರಕ್ಕೆ ಬಂತು ವಿಸ್ಟಾಡೋಮ್‌ ರೈಲು..!

ಈಗಿರುವ ರೈಲಿನಲ್ಲಿ ಎಲ್ಲಾ ಆಸನಗಳು ಬೆಂಗಳೂರಿನಲ್ಲಿಯೇ ಭರ್ತಿಯಾಗಿರುತ್ತದೆ. ಅದು ಸಹ ವಾರದಲ್ಲಿ 3 ದಿನ ಮಾತ್ರವೇ ಇದೆ. ಹೀಗಾಗಿ ಅನೇಕ ವರ್ಷಗಳಿಂದ ಮೈಸೂರಿನಿಂದ ಕಾರವಾರ/ ಗೋವಾಗೆ ನೇರ ರೈಲು ಬೇಕೆಂಬ ಬೇಡಿಕೆ ಇದೆ. ಈಗ ಹೋರಾಟ ಸಮಿತಿಯು ಅಸ್ತಿತ್ವಕ್ಕೆ ಬಂದಿದ್ದು, ಮೊದಲ ಭಾಗವಾಗಿ ಮೈಸೂರು- ಕಾರವಾರ ನಡುವಿನ ಎಲ್ಲಾ ಜನಪ್ರತಿನಿಧಿಗಳನ್ನು ಭೇಟಿಯಾಗಿ ಸದರಿ ಬೇಡಿಕೆಯ ಸಾಧಕಗಳ ಬಗ್ಗೆ ಮನವರಿಕೆ ಮಾಡಿಕೊಡಲಾಗುತ್ತಿದೆ ಎಂದು ಸಚಿವರಿಗೆ ಮನವಿ ಸಲ್ಲಿಸಿದರು.

ಸಮಿತಿಯ ಮಹೇಶ್‌ ಕಾಮತ್‌, ಜಗದೀಶ್‌ ಹೆಬ್ಬಾರ್‌, ರಾಕೇಶ್‌ ಭಚ್‌, ರವಿಶಾಸ್ತ್ರಿ, ಎಂ.ಆರ್‌. ಪುರಾಣಿಕ್‌ ಇದ್ದರು.

PREV
click me!

Recommended Stories

ತುಮಕೂರಿನಲ್ಲಿ ಉದ್ಯಮಿಗೆ ಲಂಚಕ್ಕೆ ಬೇಡಿಕೆ; ಇಬ್ಬರು ಭ್ರಷ್ಟ ಅಧಿಕಾರಿಗಳು ಲೋಕಾಯುಕ್ತ ಬಲೆಗೆ!
ಮಂಡ್ಯಕ್ಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ರಾಜಕೀಯ ಹೊಸ ದಾಳ ಉರುಳಿಸಿದ ದಳಪತಿ!