ಸಹಕಾರ ಸಚಿವ ರಾಜಣ್ಣ ಕ್ಷಮೆಗೆ ಆಗ್ರಹ

By Kannadaprabha News  |  First Published Jun 30, 2023, 8:57 AM IST

ಸಹಕಾರ ಸಚಿವ ಕೆ.ಎನ್‌. ರಾಜಣ್ಣ ಅವರು ಬ್ರಾಹ್ಮಣರ ಬಗ್ಗೆ ಹಾಸ್ಯಾಸ್ಪದವಾಗಿ ಮಾತನಾಡಿದ್ದಾರೆ ಎಂದು ಆರೋಪಿಸಿ ಅರ್ಚಕ, ಆಗಮಿಕರು ತುಮಕೂರಿನಲ್ಲಿ ಪ್ರತಿಭಟನೆ ನಡೆಸಿ ಕ್ಷಮೆ ಕೇಳಬೇಕೆಂದು ಆಗ್ರಹಿಸಿದರು.


  ತುಮಕೂರು :  ಸಹಕಾರ ಸಚಿವ ಕೆ.ಎನ್‌. ರಾಜಣ್ಣ ಅವರು ಬ್ರಾಹ್ಮಣರ ಬಗ್ಗೆ ಹಾಸ್ಯಾಸ್ಪದವಾಗಿ ಮಾತನಾಡಿದ್ದಾರೆ ಎಂದು ಆರೋಪಿಸಿ ಅರ್ಚಕ, ಆಗಮಿಕರು ತುಮಕೂರಿನಲ್ಲಿ ಪ್ರತಿಭಟನೆ ನಡೆಸಿ ಕ್ಷಮೆ ಕೇಳಬೇಕೆಂದು ಆಗ್ರಹಿಸಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ರಾಜ್ಯ ಧಾರ್ಮಿಕ ದತ್ತಿ ಅರ್ಚಕರು ಮತ್ತುಆಗಮಿಕರ ಸಂಘದ ವತಿಯಿಂದ ಸಚಿವ ರಾಜಣ್ಣ ಅವರು ಕ್ಷಮೆ ಕೋರುವಂತೆ ಪ್ರತಿಭಟನೆ ನಡೆಸಲಾಯಿತು.

Tap to resize

Latest Videos

ರಾಜ್ಯಧಾರ್ಮಿಕ ದತ್ತಿ ದೇವಾಲಯ ಅರ್ಚಕರ ಮತ್ತುಆಗಮಿಕರ ಸಂಘದ ರಾಜ್ಯಾಧ್ಯಕ್ಷ ಎಂ ಎಸ್‌ ವೆಂಕಟಚಾಲಯ್ಯ ಮಾತನಾಡಿ, ಅರ್ಚಕರನ್ನ ಅವಮಾನಿಸಿದ ಸಚಿವರಿಗೆ ಸಾಮಾನ್ಯ ಜ್ಞಾನವೂ ಇಲ್ಲ. ಪುರಾತನ ಕಾಲದಿಂದಲೂ ಭಾರತದೇಶದಲ್ಲಿ ದೇವಾಲಯಗಳಲ್ಲಿ, ಸರ್ವಜನಾಂಗದವರು ಪೂಜಾ ಕೈಂಕರ್ಯ ಮಾಡುತ್ತಿದ್ದು, ಸಾರ್ವಜನಿಕರು ಕೊಡಲಿ, ಬಿಡಲಿ, ಪ್ರತಿನಿತ್ಯ ಪೂಜೆ ನಡೆಸಿಕೊಂಡು ಬರುತ್ತಿರುವ ನಮಗೆ ಸಚಿವರು ಮಾಡಿದ ಅವಮಾನ ಘಾಸಿಯಾಗಿದ್ದು ಈ ಕೂಡಲೇ ಕ್ಷಮೆಯಾಚನೆ ಮಾಡಬೇಕೆಂದು ಒತ್ತಾಯಿಸಿದರು.

ರಾಜ್ಯದೇವಾಲಯಗಳ ಅರ್ಚಕ ಮತ್ತುಆಗಮಿಕರ ಸಂಘದ ಉಪಾಧ್ಯಕ್ಷ ಜಾನಕಿರಾಮ್‌ ಮಾತನಾಡಿ, ಸಚಿವ ಕೆ.ಎನ್‌ ರಾಜಣ್ಣ ಅವರು ಕೂಡಲೇ ಅರ್ಚಕರು ಮತ್ತು ಬ್ರಾಹ್ಮಣರಲ್ಲಿ ಕ್ಷಮೆಯಾಚಿಸಬೇಕು ಎಂದರು.

ಚಿಕ್ಕನಾಯಕನಹಳ್ಳಿ ರಂಗನಾಥಸ್ವಾಮಿ ದೇವಾಲಯದ ಅರ್ಚಕ ಶ್ರೀನಿವಾಸ್‌ ಮಾತನಾಡಿ, ಬಡ ಅರ್ಚಕರ ಮೇಲೆ ದರ್ಪತೋರಿ ಚಪ್ಪಾಳೆ ಗಿಟ್ಟಿಸುವ ಬರದಲ್ಲಿ ನಮ್ಮಗಳನ್ನು ಹೀಯಾಳಿಸಿ ಮಾತನಾಡಿದ್ದಾರೆ ಎಂದರು.

ಸಂಘಟನಾ ಕಾರ್ಯದರ್ಶಿ ಶ್ರೀನಿವಾಸ್‌ ಮಾತನಾಡಿ, ರಾಜಣ್ಣ ನವರು ಯಾವುದಾದರೂ ಒಂದು ದೇವಾಲಯ ದತ್ತು ಪಡೆದು ಪೂಜೆ ಪುನಸ್ಕಾರ ನಡೆಸಿದ್ದರೆ ಅದರ ಅನುಭವ ಗೊತ್ತಿರುತ್ತಿತು. ಸಿಎಂ ಸಿದ್ದರಾಮಯ್ಯನವರನ್ನು ಮೆಚ್ಚಿಸಲು ದರ್ಪ ಮಾತುಗಳನ್ನಾಡಿರುವುದು ಖಂಡನೀಯ ಎಂದರು.

ಪ್ರತಿಭಟನೆ ವೇಳೆ ಅಪಾರಜಿಲ್ಲಾಧಿಕಾರಿ ಶಿವಾನಂದ ಬಿ ಕರಾಳೆ ಅವರಿಗೆ ಮನವಿ ಸಲ್ಲಿಕೆ ಮಾಡಲಾಯಿತು. ಮನವಿ ಸ್ವೀಕರಿಸಿದ ಅಪರ ಜಿಲ್ಲಾಧಿಕಾರಿ ಮನವಿಯನ್ನು ರಾಜ್ಯಪಾಲರು ಮತ್ತು ವಿಧಾನಸಭಾಧ್ಯಕ್ಷರಿಗೆ ಕಳುಹಿಸಿ ಕೊಡಲಾಗುವುದು ಎಂದರು.

ಪ್ರತಿಭಟನೆ ಸಂದರ್ಭದಲ್ಲಿ ಅರ್ಚಕ ಆಗಮಿಕ ಸಂಘಟನೆಯ ಗೋಪಿನಾಥ್‌, ಗೌರಿಬಿದನೂರು ಪ್ರಕಾಶ್‌, ಗುಂಡ್ಲುಪೇಟೆ ಸೋಮಶೇಖರ್‌, ಮದ್ದೂರು ಬಸವರಾಜು, ಹಲಗೂರು ಪ್ರಸಾದ್‌, ಸಾಸಲಕಟ್ಟೆಶ್ರೀನಿವಾಸ್‌, ಮಧುಗಿರಿಯ ರಘುನಂದನ್‌, ನೆಲಮಂಗಲ ವಸಂತ್‌, ಅಣ್ಣಯ್ಯ ಸ್ವಾಮಿ ಸೇರಿದಂತೆ ನೂರಾರು ಅರ್ಚಕರು ಆಗಮಿಕರು ಉಪಸ್ಥಿತರಿದ್ದರು.

click me!