ದಸರಾ 2021 : ಅನುಭವಸ್ಥ ಪಶು ವೈದ್ಯ ಡಾ. ನಾಗರಾಜ್ ವರ್ಗಾವಣೆ ರದ್ದಿಗೆ ಮನವಿ

Suvarna News   | Asianet News
Published : Sep 19, 2021, 10:53 AM IST
ದಸರಾ 2021 : ಅನುಭವಸ್ಥ ಪಶು ವೈದ್ಯ ಡಾ. ನಾಗರಾಜ್ ವರ್ಗಾವಣೆ ರದ್ದಿಗೆ ಮನವಿ

ಸಾರಾಂಶ

 ಮೈಸೂರು ಪಶುವೈದ್ಯ ಡಾ.ನಾಗರಾಜ್ ವರ್ಗಾವಣೆ ಹಿನ್ನೆಲೆ ವರ್ಗಾವಣೆ ರದ್ದು ಮಾಡಿ ಮತ್ತೆ ಮರುನೇಮಕಕ್ಕೆ ಒತ್ತಾಯ   ಅರಣ್ಯಾಧಿಕಾರಿಗಳಿಗೆ ಅರಮನೆ ಸಿಬ್ಬಂದಿ ಪ್ಯಾಲೆಸ್ ಬಾಬು ಮನವಿ   

ಬೆಂಗಳೂರು (ಸೆ.19): ಮೈಸೂರು ಪಶುವೈದ್ಯ ಡಾ.ನಾಗರಾಜ್ ವರ್ಗಾವಣೆ ಹಿನ್ನೆಲೆ ವರ್ಗಾವಣೆ ರದ್ದು ಮಾಡಿ ಮತ್ತೆ ಮರುನೇಮಕಕ್ಕೆ ಒತ್ತಾಯ ಮಾಡಲಾಗಿದೆ.

ಅರಣ್ಯಾಧಿಕಾರಿಗಳಿಗೆ ಅರಮನೆ ಸಿಬ್ಬಂದಿ ಪ್ಯಾಲೆಸ್ ಬಾಬು ಮನವಿ ಮಾಡಿದ್ದಾರೆ.  ಕಳೆದ 20ವರ್ಷಗಳಿಂದ ಡಾ.ನಾಗರಾಜ್ ದಸರಾ ಮಹೋತ್ಸವದಲ್ಲಿ ಭಾಗಿಯಾಗುತ್ತಿದ್ದಾರೆ. ಅಂಬಾರಿ ಕಟ್ಟುವ ಕೆಲಸದಲ್ಲಿ ಡಾ‌.ನಾಗರಾಜ್ ಅನುಭವಸ್ಥರು. ಪ್ರತೀ ವರ್ಷ ತಾಲೀಮು, ಜಂಬೂಸವಾರಿ ಮೆರವಣಿಗೆಯನ್ನ ಯಶಸ್ವಿಯಾಗಿ ನಡೆಸಿದ್ದಾರೆ ಎಂದರು. 

ಮೈಸೂರು ದಸರೆಗೆ ದುಬಾರೆಯಿಂದ ಮೂರು ಆನೆಗಳ ಆಗಮನ

ಹತ್ತಾರು ವರ್ಷಗಳಿಂದ ಆನೆಗಳ ಸ್ವಭಾವ, ಗುಣಲಕ್ಷಣಗಳ ತಿಳುವಳಿಕೆ ಹೊಂದಿದ್ದಾರೆ. ಆದರೆ ಇದೀಗ ಅವರನ್ನ ಕೆ.ಆರ್.ನಗರಕ್ಕೆ ವರ್ಗಾವಣೆ ಮಾಡಲಾಗಿದೆ. ಹೊಸದಾಗಿ ಬಂದಿರುವ ಪಶುವೈದ್ಯರಿಗೆ ಅಂಬಾರಿ ಕಟ್ಟುವುದು ಹಾಗೂ ತಾಲೀಮು ನೀಡುವ ಬಗ್ಗೆ ಅನುಭವ ಇಲ್ಲ. ಹಾಗಾಗಿ ಡಾ.ನಾಗರಾಜ್ ರವರ ವರ್ಗಾವಣೆ ರದ್ದು ಮಾಡಬೇಕೆಂದು ಮನವಿ ಮಾಡಿದ್ದಾರೆ. 

ದಸರಾ ಕಾರ್ಯಕ್ರಮ ಯಶಸ್ವಿಯಾಗಿ ನಡೆಸಲು ಡಾ‌.ನಾಗರಾಜ್ ಅವಶ್ಯಕರಾಗಿದ್ದಾರೆ ಎಮದು ಅರಮನೆ ಸಿಬ್ಬಂದಿ ಪ್ಯಾಲೆಸ್ ಬಾಬು ಒತ್ತಾಯ ಮಾಡಿದ್ದಾರೆ. 

PREV
click me!

Recommended Stories

ಧರ್ಮಸ್ಥಳ ನೂರಾರು ಶವ ಹೂಳಿದ ಕೇಸ್: ಬುರುಡೆ ಗ್ಯಾಂಗ್ ಷಡ್ಯಂತ್ರ ಬಯಲು - SIT ವರದಿಯಲ್ಲಿ ಒಬ್ಬರಿಗೆ ಕ್ಲೀನ್ ಚಿಟ್!
ಚಿಕ್ಕಬಳ್ಳಾಪುರದಲ್ಲಿ ಮಾನವ ಹಕ್ಕುಗಳ ದಿನಾಚರಣೆ: ಸಾವಿರಾರು ಜನರಲ್ಲಿ ನಾಯಕತ್ವ ಬಿತ್ತಿದ ನವಶಕ್ತಿ ನಾಟಕ