ವೇದಾವತಿ ನದಿಗೆ ಹರಿಸುತ್ತಿರುವ ವಾಣಿವಿಲಾಸ ಸಾಗರದ ನೀರನ್ನು ತಕ್ಷಣವೇ ನಿಲ್ಲಿಸಲು ಆಗ್ರಹ

Published : Oct 02, 2026, 07:23 AM IST
Vani vilasa Sagar Dam

ಸಾರಾಂಶ

ಇತ್ತೀಚೆಗೆ ಉತ್ತಮ ಮಳೆಯಾಗಿ ವೇದಾವತಿ ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿದೆ. ಹೀಗಾಗಿ ವಿವಿ ಸಾಗರ ಜಲಾಶಯದಿಂದ ನದಿಗೆ ಹರಿಸುತ್ತಿರುವ ನೀರನ್ನು ತಾತ್ಕಾಲಿಕವಾಗಿ ನಿಲ್ಲಿಸುವಂತೆ ವಂದೇ ಮಾತರಂ ಜಾಗೃತಿ ವೇದಿಕೆ ಆಗ್ರಹಿಸಿದೆ. ಬೇಡಿಕೆ ಈಡೇರದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟದ ಎಚ್ಚರಿಕೆ ನೀಡಲಾಗಿದೆ.

ಚಿತ್ರದುರ್ಗ: ವಿವಿ ಸಾಗರ ಜಲಾಶಯದಿಂದ ವೇದಾವತಿ ನದಿಗೆ ಹರಿಸುತ್ತಿರುವ ನೀರನ್ನು ತಾತ್ಕಾಲಿಕವಾಗಿ ನಿಲ್ಲಿಸಬೇಕೆಂದು ವಂದೇ ಮಾತರಂ ಜಾಗೃತಿ ವೇದಿಕೆ ರೈತ ಘಟಕದಿಂದ ನೀರಾವರಿ ಇಲಾಖೆಯ ಮುಖ್ಯ ಅಭಿಯಂತರರಿಗೆ ಮನವಿ ಸಲ್ಲಿಸಲಾಯಿತು.

ತಾಲೂಕಿನಲ್ಲಿ ಇತ್ತೀಚೆಗೆ ಉತ್ತಮ ಮಳೆಯಾಗಿದ್ದು ವೇದಾವತಿ ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿದೆ. ಇದರಿಂದಾಗಿ ನದಿ ಜೀವಕಳೆ ಪಡೆದುಕೊಂಡಿದ್ದು ನದಿಯಲ್ಲಿ ನೀರಿನ ಲಭ್ಯತೆ ಉತ್ತಮವಾಗಿದೆ.

ನೀರು ಹರಿಯುವಿಕೆಯನ್ನು ನಿಲ್ಲಿಸುವಂತೆ ಆಗ್ರಹ

ಈ ಹಿನ್ನೆಲೆಯಲ್ಲಿ ಪ್ರಸ್ತುತ ವಾಣಿವಿಲಾಸ ಸಾಗರ ಜಲಾಶಯದಿಂದ ವೇದಾವತಿ ನದಿಗೆ ಹರಿಸಲಾಗುತ್ತಿರುವ ನೀರನ್ನು ಕೂಡಲೇ ತಾತ್ಕಾಲಿಕವಾಗಿ ನಿಲ್ಲಿಸಬೇಕು. ನೀರಿನ ಲಭ್ಯತೆ ಹಾಗೂ ಮಳೆಯ ಪರಿಸ್ಥಿತಿಯನ್ನು ಪರಿಗಣಿಸಿ ಜಲಾಶಯದಲ್ಲಿರುವ ನೀರನ್ನು ಮುಂದಿನ ದಿನಗಳಲ್ಲಿ ಅಗತ್ಯವಿರುವ ಸಂದರ್ಭದಲ್ಲಿ ರೈತರ ಹಾಗೂ ಕುಡಿಯುವ ನೀರಿನ ಉದ್ದೇಶಗಳಿಗೆ ಬಳಸಿಕೊಳ್ಳುವ ನಿಟ್ಟಿನಲ್ಲಿ ಸಂರಕ್ಷಿಸುವುದು ಅಗತ್ಯವಾಗಿದೆ. ಆದ್ದರಿಂದ ಈ ಮನವಿಯನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತಲುಪಿಸಿ ವಾಣಿವಿಲಾಸ ಸಾಗರದಿಂದ ವೇದಾವತಿ ನದಿಗೆ ಹರಿಸುತ್ತಿರುವ ನೀರನ್ನು ತಕ್ಷಣವೇ ನಿಲ್ಲಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು.

ಹೋರಾಟದ ಎಚ್ಚರಿಕೆ

ಈ ಕುರಿತು ಶೀಘ್ರವಾಗಿ ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ ರೈತರ ಹಿತದೃಷ್ಟಿಯಿಂದ ವಂದೇ ಮಾತರಂ ಜಾಗೃತಿ ವೇದಿಕೆ ರೈತ ಘಟಕದ ವತಿಯಿಂದ ಮುಂದಿನ ದಿನಗಳಲ್ಲಿ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂಬುದನ್ನು ತಮ್ಮ ಗಮನಕ್ಕೆ ತರಲು ಬಯಸುತ್ತೇವೆ ಎಂದು ಪದಾಧಿಕಾರಿಗಳು ಎಚ್ಚರಿಸಿದ್ದಾರೆ.

ಈ ಸಂದರ್ಭದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ವಿ.ಅರುಣ್ ಕುಮಾರ್, ರಾಜ್ಯ ರೈತ ಘಟಕ ಅಧ್ಯಕ್ಷ ದೇವರಾಜ್ ನಾಗಣ್ಣ, ರಾಜ್ಯ ನಿರ್ದೇಶಕ ಮಸ್ಕಲ್ ನಾಗರಾಜ್, ರಾಜ್ಯ ಸಂಚಾಲಕ ಕೋಟ್ರೇಶ್ ಎಸ್.ಎಂ, ನಿರ್ದೇಶಕ

ವಿನಯ್, ರೈತ ಘಟಕ ತಾಲೂಕು ಅಧ್ಯಕ್ಷ ಮಂಜುನಾಥ, ಅವಿನಾಶ್, ಪರಮೇಶ್ ಮುಂತಾದವರು ಹಾಜರಿದ್ದರು

PREV
Read more Articles on
click me!

Recommended Stories

SIR: ಚುನಾವಣಾ ಆಯೋಗದ ಮುಂದೆ ಸಿಎಂ ಧರಣಿ, ಎಫ್‌ಐಆರ್‌ಗೆ ಪಟ್ಟು ಹಿಡಿದಿರೋದಕ್ಕೆ ಅಸಲಿ ಕಾರಣವೇನು?
ಖೋಟಾ ನೋಟು ಮುದ್ರಣಕ್ಕೆ 6 ತಿಂಗಳು ಪ್ರಯೋಗ: ಚಾಮರಾಜಪೇಟೆಯಲ್ಲಿ ನಕಲಿ ಹಣ ಚಲಾವಣೆಗೆ ಯತ್ನ