ಹುಣಸೂರು ತಾಲೂಕಿನ ಬಿಳಿಕೆರೆಯಿಂದ ಹೊಳೆ ನರಸೀಪುರ ತಾಲೂಕಿನ ಯಡೇಗೌಡನಹಳ್ಳಿ ಗ್ರಾಮದವರೆಗೆ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಮಾಡಲು ಕೇಂದ್ರ ಸರ್ಕಾರದಿಂದ 800 ಕೋಟಿ ಹಣ ಮಂಜೂರಾಗಿವುದರಿಂದ ಈ ರಸ್ತೆಯು ಪಟ್ಟಣದ ಹೃದಯ ಭಾಗದಲ್ಲಿ ಹಾದು ಹೋಗಬೇಕೆಂದು ವರ್ತಕರು ಮತ್ತು ಸಾರ್ವಜನಿಕರು ಮನವಿ ಮಾಡಿದರು.
ಕೆ.ಆರ್. ನಗರ (ನ.05): ಹುಣಸೂರು ತಾಲೂಕಿನ ಬಿಳಿಕೆರೆಯಿಂದ ಹೊಳೆ ನರಸೀಪುರ ತಾಲೂಕಿನ ಯಡೇಗೌಡನಹಳ್ಳಿ ಗ್ರಾಮದವರೆಗೆ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಮಾಡಲು ಕೇಂದ್ರ ಸರ್ಕಾರದಿಂದ 800 ಕೋಟಿ ಹಣ ಮಂಜೂರಾಗಿವುದರಿಂದ ಈ ರಸ್ತೆಯು ಪಟ್ಟಣದ ಹೃದಯ ಭಾಗದಲ್ಲಿ ಹಾದು ಹೋಗಬೇಕೆಂದು ವರ್ತಕರು ಮತ್ತು ಸಾರ್ವಜನಿಕರು ಮನವಿ ಮಾಡಿದರು.
ಶಾಸಕ (Sa Ra mahesh) ಅವರ ಅಧ್ಯಕ್ಷತೆಯಲ್ಲಿ ಪಟ್ಟಣದ ವಾಸವಿ ಮಂದಿರದಲ್ಲಿ ನಡೆದ National Highway) ಪ್ರಾಧಿಕಾರದ, ಕಂದಾಯ ಇಲಾಖೆ ಹಾಗೂ ಪುರಸಭೆಯ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಎಲ್ಲ ವರ್ತಕರು ಮತ್ತು ನಾಗರಿಕರು ಒಕ್ಕೊರಲ ಅಭಿಪ್ರಾಯ ವ್ಯಕ್ತಪಡಿಸಿ, ಅಭಿವೃದ್ಧಿಯ ಹಿತದೃಷ್ಟಿಯಿಂದ ರಸ್ತೆ ನಿರ್ಮಾಣವಾಗಬೇಕು ಎಂದರು.
undefined
ರಸ್ತೆ ನಿರ್ಮಾಣದಿಂದ ಕೆಲವರಿಗೆ ತೊಂದರೆಯಾದರೂ ಸಾವಿರಾರು ಮಂದಿಗೆ ಅನುಕೂಲವಾಗುವುದರ ಜತೆಗೆ ಆರ್ಥಿಕವಾಗಿಯೂ ಅಭಿವೃದ್ಧಿ ಹೊಂದಲಿದ್ದು, ಈ ವಿಚಾರದಲ್ಲಿ ಶಾಸಕರು ದೃಢ ನಿರ್ಧಾರ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.
ವರ್ತಕರು ಮತ್ತು ನಾಗರಿಕರ ಮನವಿ ಆಲಿಸಿ ಸಲಹೆ ಪಡೆದ ನಂತರ ಮಾತನಾಡಿದ ಸಾ. ರಾ. ಮಹೇಶ್, ಕೆ.ಆರ್. ನಗರ ಪಟ್ಟಣ ದೇಶದಲ್ಲಿಯೇ ಮಾದರಿಯಾಗಿದ್ದು, ಇದರ ಸೌಂದರ್ಯಕ್ಕೆ ಯಾವುದೇ ಧಕ್ಕೆಯಾಗದ ರೀತಿಯಲ್ಲಿ ರಸ್ತೆ ನಿರ್ಮಾಣ ಸೇರಿದಂತೆ ಇತರ ಅಭಿವೃದ್ಧಿ ಕಾರ್ಯಗಳನ್ನು ಮಾಡಬೇಕೆಂದರು.
ಇಂದಿನ ಸಭೆಯಲ್ಲಿ ಸರ್ವರೂ ನೀಡುವ ಸಲಹೆ ಮತ್ತು ಸೂಚನೆಗಳನ್ನು ಮನನ ಮಾಡಿಕೊಂಡು ಮತ್ತೆರಡು ಸಭೆ ಕರೆದು ಅಂತಿಮವಾಗಿ ಹೊರ ವರ್ತುಲ ರಸ್ತೆ ನಿರ್ಮಾಣ ಮಾಡಬೇಕು ಅಥವಾ ಪಟ್ಟಣದ ಮಧ್ಯ ಭಾಗದಲ್ಲಿಯೇ ರಸ್ತೆ ಕಾಮಗಾರಿ ನಡೆಸಬೇಕೋ ಎಂಬ ಬಗ್ಗೆ ಅಂತಿಮವಾಗಿ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ಅವರು ಮಾಹಿತಿ ನೀಡಿದರು.
ಮಾಜಿ ಪ್ರಧಾನಮಂತ್ರಿಗಳಾದ ಎಚ್.ಡಿ. ದೇವೇಗೌಡ, ಮೈಸೂರು, ಕೊಡಗು ಸಂಸದ ಪ್ರತಾಪ್ ಸಿಂಹ ಮತ್ತು ಮಾಜಿ ಸಚಿವ ಎಚ್.ಡಿ. ರೇವಣ್ಣ ಅವರ ಮನವಿಯ ಮೇರೆಗೆ ಕೇಂದ್ರ ಭೂ ಹೆದ್ದಾರಿ ಸಚಿವರಾದ ನಿತಿನ್ ಗಡ್ಕರಿ ಅವರು ಸದರಿ ರಸ್ತೆಗೆ ಅನುದಾನ ಮಂಜೂರು ಮಾಡಿದ್ದು, ಇದಕ್ಕಾಗಿ ನಾನು ಅವರನ್ನು ಮತ್ತು ಕೇಂದ್ರ ಸರ್ಕಾರವನ್ನು ಎಲ್ಲರ ಪರವಾಗಿ ಅಭಿನಂದಿಸುತ್ತೇನೆ ಎಂದರು. ನಾನು ಶಾಸಕನಾಗಿ ಆಯ್ಕೆಯಾದ ನಂತರ ಶಿಕ್ಷಣ ಆರೋಗ್ಯ ರಸ್ತೆ ಸೇರಿದಂತೆ ಇತರ ಎಲ್ಲ ಮೂಲ ಸೌಲಭ್ಯಗಳಿಗೆ ಪ್ರಥಮ ಆದ್ಯತೆ ನೀಡುತ್ತಿದ್ದು, ಮುಂದಿನ ದಿನಗಳಲ್ಲಿಯೂ ಅಭಿವೃದ್ಧಿ ವಿಚಾರದಲ್ಲಿ ಯಾವುದೇ ರಾಜಿಯಾಗದೆ ಜನರ ಅಭಿಪ್ರಾಯದಂತೆ ಕೆಲಸ ಮಾಡುತ್ತೇನೆ ಎಂದವರು ಪ್ರಕಟಿಸಿದರು.
ತಹಸೀಲ್ದಾರ್ ಎಂ.ಎಸ್. ಯದುಗಿರೀಶ್, ಪುರಸಭೆ ಮುಖ್ಯಾಧಿಕಾರಿ ಡಾ. ಜಯಣ್ಣ, ಪೊಲೀಸ್ ಇನ್ಸ್‌ಪೆಕ್ಟರ್ ಎಂ.ಆರ್. ಲವ, ಪಿಎಸ್‌ಐ ಚಂದ್ರಹಾಸ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಹರೀಶ್, ತಾಪಂ ಇಒ ಎಚ್.ಕೆ. ಸತೀಶ್, ಪುರಸಭೆ ಸದಸ್ಯರಾದ ಕೆ.ಪಿ. ಪ್ರಭುಶಂಕರ್, ಸಂತೋಷ್‌ಗೌಡ, ನಗರ ಬಿಜೆಪಿ ಅಧ್ಯಕ್ಷ ಯು. ಕೃಷ್ಣಭಟ್, ತಾಲೂಕು ಜೆಡಿಎಸ್ ಅಧ್ಯಕ್ಷ ಎಚ್.ಸಿ. ಕುಮಾರ್, ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಜೆ. ಅರುಣ…ಕುಮಾರ್, ಉದ್ಯಮಿಗಳಾದ ಎಸ್‌ವಿಎಸ್ ಸುರೇಶ್, ಪಂಚಾಕ್ಷರಿ, ಲೋಹಿತ್ ಪಂಚಾಕ್ಷರಿ, ಚಂದ್ರಶೇಖರ್ ಸೇರಿದಂತೆ ವರ್ತಕರು ಮತ್ತು ನಾಗರಿಕರು ಇದ್ದರು.
ಹುಣಸೂರು ತಾಲೂಕಿನ ಬಿಳಿಕೆರೆಯಿಂದ ಹೊಳೆ ನರಸೀಪುರ ತಾಲೂಕಿನ ಯಡೇಗೌಡನಹಳ್ಳಿ ಗ್ರಾಮದವರೆಗೆ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ
ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಮಾಡಲು ಕೇಂದ್ರ ಸರ್ಕಾರದಿಂದ 800 ಕೋಟಿ ಹಣ ಮಂಜೂರಾಗಿವುದರಿಂದ ಈ ರಸ್ತೆಯು ಪಟ್ಟಣದ ಹೃದಯ ಭಾಗದಲ್ಲಿ ಹಾದು ಹೋಗಬೇಕೆಂದು ವರ್ತಕರು ಮತ್ತು ಸಾರ್ವಜನಿಕರು ಮನವಿ