ಒಳ ಮೀಸಲಾತಿ ಜಾರಿಗೆ ಆಗ್ರಹ: ಚಾಮರಾಜನಗರದಲ್ಲಿ ಬೃಹತ್ ಪಾದಯಾತ್ರೆ

By Govindaraj S  |  First Published Oct 16, 2024, 10:08 AM IST

ರಾಜ್ಯದಲ್ಲಿ ಜಾತಿಗಣತಿ ರಿವೀಲ್ ಸಾಧ್ಯತೆ ನಡುವೆ ಇದೀಗಾ ಮತ್ತೇ ಒಳ ಮೀಸಲಾತಿ ಕೂಗು ಮುನ್ನಡೆಗೆ ಬಂದಿದೆ. ಒಳ ಮೀಸಲಾತಿ ಜಾರಿಗೆ ಆಗ್ರಹಿಸಿ 10 ಕಿಮೀ ಪಾದಯಾತ್ರೆಯ ಮೂಲಕ ಡಿಸಿ ಕಚೇರಿಗೆ ಹೋಗಿ ಮನವಿ ಸಲ್ಲಿಸಿದ್ದಾರೆ. 


ವರದಿ: ಪುಟ್ಟರಾಜು.ಆರ್.ಸಿ.ಏಷಿಯಾನೆಟ್ ಸುವರ್ಣ ನ್ಯೂಸ್, ಚಾಮರಾಜನಗರ

ಚಾಮರಾಜನಗರ (ಅ.16): ರಾಜ್ಯದಲ್ಲಿ ಜಾತಿಗಣತಿ ರಿವೀಲ್ ಸಾಧ್ಯತೆ ನಡುವೆ ಇದೀಗಾ ಮತ್ತೇ ಒಳ ಮೀಸಲಾತಿ ಕೂಗು ಮುನ್ನಡೆಗೆ ಬಂದಿದೆ. ಒಳ ಮೀಸಲಾತಿ ಜಾರಿಗೆ ಆಗ್ರಹಿಸಿ 10 ಕಿಮೀ ಪಾದಯಾತ್ರೆಯ ಮೂಲಕ ಡಿಸಿ ಕಚೇರಿಗೆ ಹೋಗಿ ಮನವಿ ಸಲ್ಲಿಸಿದ್ದಾರೆ. ಒಳ ಮೀಸಲಾತಿ ಕೂಗು ಮತ್ತೇ ಮುನ್ನಲೆಗೆ ಬಂದಿದೆ.ಮಾದಿಗ ಸೇರಿ 101 ದಲಿತ ಉಪ ಜಾತಿ ವತಿಯಿಂದ ಬೃಹತ್ ಪ್ರತಿಭಟನೆ ನಡೆಸಿದರು.

Latest Videos

undefined

ಚಾಮರಾಜನಗರ ತಾಲೂಕಿನ ಮಾದಾಪುರದಿಂದ ಜಿಲ್ಲಾಧಿಕಾರಿ ಕಚೇರಿ ವರೆಗೂ ಪ್ರತಿಭಟನಾ ರ್ಯಾಲಿ ನಡೆಸಲಾಯಿತು. ಈ ವೇಳೆ 3 ಸಾವಿರಕ್ಕೂ ಅಧಿಕ ಮಂದಿ ಭಾಗವಹಿಸಿದ್ದರು.ರಾಜ್ಯ ಸರ್ಕಾರಕ್ಕೆ ಒಳ ಮೀಸಲು ಜಾರಿಗೆ 30 ದಿನಗಳ ಡೆಡ್ ಲೈನ್ ನೀಡಿದ್ದಾರೆ.30 ದಿನಗಳ ಒಳಗೆ ಒಳ ಮೀಸಲಾತಿ ಜಾರಿಗೆ ತರದೆ ಇದ್ರೆ ಉಗ್ರ ಹೋರಾಟದ ಎಚ್ಚರಿಕೆ ಕೊಟ್ಟಿದ್ದಾರೆ. ಚಾಮರಾಜನಗರದಿಂದ ಬೆಂಗಳೂರಿನವರೆಗೂ ಕೂಡ ಪಾದಯಾತ್ರೆ ಮಾಡಿ ವಿಧಾನಸೌಧಕ್ಕೆ ಮುತ್ತಿಗೆ ಹಾಕುವ ಎಚ್ಚರಿಕೆ ಕೊಟ್ಟರು. 

ಇನ್ನೂ ರಾಜ್ಯ ಸರ್ಕಾರ ದಲಿತರ ಪರ ಎಂದು ಹೇಳುತ್ತೆ ಆ ಮಾತಿಗೆ ಬದ್ದವಾಗಿರಲಿ. ಒಳ ಮೀಸಲಾತಿ ಜಾರಿ ಮಾಡಿ ಇಲ್ಲ ಖುರ್ಚಿ ಖಾಲಿ ಮಾಡಿ ಎಂದು ಘೋಷಣೆ ಕೂಗಿದರು.ಒಳ ಮೀಸಲಾತಿ ಜಾರಿ ಆಗದೆ ಇದ್ರೆ ಕಾಂಗ್ರೆಸ್ ಗೆ ಮತ ಹಾಕಲ್ಲವೆಂದು ಸಮುದಾಯದ ಮುಖಂಡರು ತಿಳಿಸಿದ್ದಾರೆ. ರಸ್ತೆಯುದ್ದಕ್ಕೂ ಕೂಡ ಜೈ ಮಾದಿಗ ಕೂಗು ಜೋರಾಗಿತ್ತು.ಒಂದು ಗಂಟೆಗೂ ಹೆಚ್ಚು ಕಾಲ ಡಿಸಿ ಕಚೇರಿ ಬಳಿ ಕುಳಿತು ಮಾದಿಗ ಸಮುದಾಯಕ್ಕೆ ಈ ಬಾರಿ ಒಳ ಮೀಸಲಾತಿ ಕೊಡುವಂತೆ ಮನವಿ ಮಾಡಿದರು. 

ದೋಸ್ತಿಗೆ ಚನ್ನಪಟ್ಟಣ ಅಭ್ಯರ್ಥಿ ಆಯ್ಕೆ ತೊಡಕು: ಯೋಗಿಯೋ? ನಿಖಿಲ್ಲೋ?

ಒಟ್ನಲ್ಲಿ ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಒಳ ಮೀಸಲಾತಿ ಕೊಡುವಂತೆ ಮಾದಿಗರು ಬೀದಿಗಳಿದಿದ್ದಾರೆ. ಸರ್ಕಾರ ಎಚ್ಚೆತ್ತುಕೊಳ್ಳದಿದ್ರೆ ಮುಂದಿನ ದಿನಗಳಲ್ಲಿ ಬೆಂಗಳೂರು ಚಲೋ ಅಥವಾ ವಿಧಾನಸೌಧಕ್ಕೆ ಮುತ್ತಿಗೆ ಹಾಕುವ ಮೂಲಕ ಸರ್ಕಾರಕ್ಕೆ ಬಿಸಿ ಮುಟ್ಟಿಸುವ ಮಾತುಗಳನ್ನಾಡಿದ್ದಾರೆ.

click me!