ಗೋಕರ್ಣ ಭದ್ರಕಾಳಿಯಲ್ಲಿ ಎಸ್ಎಸ್ಎಲ್ ಸಿ ಓದುತ್ತಿರುವ ಅಂಕಿತಾ ಹೊಸ್ಕಟ್ಟಾ ಎನ್ನುವಾಕೆ ಉತ್ತರಕನ್ನಡಕ್ಕೆ ಸುಸಜ್ಜಿತ ಆಸ್ಪತ್ರೆಯ ಅಗತ್ಯತೆಯ ಕುರಿತು ನೃತ್ಯ ಪ್ರದರ್ಶಿಸಿ ಎಲ್ಲರ ಮನ ಗೆದ್ದಿದ್ದಾಳೆ.
ವರದಿ- ಭರತ್‌ರಾಜ್ ಕಲ್ಲಡ್ಕ, ಏಷ್ಯಾನೆಟ್ ಸುವರ್ಣ ನ್ಯೂಸ್
ಉತ್ತರ ಕನ್ನಡ (ಜ.18): ಜಿಲ್ಲೆಯಲ್ಲಿ ಸುಸಜ್ಜಿತ ಆಸ್ಪತ್ರೆಗಳಿಲ್ಲದ ಕಾರಣ ಗಾಯಾಳುಗಳು ರಸ್ತೆಯಲ್ಲೇ ಜೀವ ಚೆಲ್ಲುತ್ತಿದ್ದು, ಸುಸಜ್ಜಿತ ಆಸ್ಪತ್ರೆ ನಿರ್ಮಾಣವಾಗಬೇಕೆಂಬ ಕೂಗು ದಶಕಗಳಿಂದಲೂ ಇದೆ. ಎಷ್ಟೇ ಹೋರಾಟ, ಪ್ರತಿಭಟನೆ ನಡೆಸಿದರೂ ಈ ಬೇಡಿಕೆ ಮಾತ್ರ ಈಡೇರುವ ಲಕ್ಷಣ ಕಾಣುತ್ತಿಲ್ಲ. ಆದರೆ, ಉತ್ತರಕನ್ನಡಕ್ಕೆ ಸುಸಜ್ಜಿತ ಆಸ್ಪತ್ರೆಯ ಅಗತ್ಯತೆಯೇನು ಎಂಬುದನ್ನು ನೃತ್ಯ ತಂಡವೊಂದು ನೃತ್ಯ ಸಂಯೋಜಿಸಿ ಪ್ರದರ್ಶಿಸಿ ಮೆಚ್ಚುಗೆಗೆ ಪಾತ್ರವಾಗಿದೆ.
undefined
ಗಾಟ್ ಟ್ಯಾಲೆಂಟ್ ಸ್ಪರ್ಧೆಯಲ್ಲಿ ನೃತ್ಯ: ಹೌದು, ಗೋಕರ್ಣ ಭದ್ರಕಾಳಿಯಲ್ಲಿ ಎಸ್ಎಸ್ಎಲ್ ಸಿ ಓದುತ್ತಿರುವ ಅಂಕಿತಾ ಹೊಸ್ಕಟ್ಟಾ ಎನ್ನುವಾಕೆ ಉತ್ತರಕನ್ನಡಕ್ಕೆ ಸುಸಜ್ಜಿತ ಆಸ್ಪತ್ರೆಯ ಅಗತ್ಯತೆಯ ಕುರಿತು ನೃತ್ಯ ಪ್ರದರ್ಶಿಸಿ ಎಲ್ಲರ ಮನ ಗೆದ್ದಿದ್ದಾಳೆ. ವಿಕಾಸ್ ಹಾಗೂ ಪ್ರಮೋದ್ ಬಡಿಗೇರ್ ಸಂಯೋಜನೆಯ ಈ ನೃತ್ಯವನ್ನು ಖಾಸಗಿ ವಾಹಿನಿಯೊಂದು ಆಯೋಜಿಸಿದ್ದ ಉತ್ತರಕನ್ನಡ ಗಾಟ್ ಟ್ಯಾಲೆಂಟ್ ಸ್ಪರ್ಧೆಯಲ್ಲಿ ಪ್ರದರ್ಶಿಸಲಾಗಿದ್ದು, ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ. ಡ್ಯಾನ್ಸ್ ಮೂಲಕವೇ ಆಸ್ಪತ್ರೆ ಬೇಡಿಕೆಯನ್ನ ವಿಶೇಷವಾಗಿ ಮಂಡಿಸಿರುವ ನೃತ್ಯ ತಂಡಕ್ಕೆ ಉತ್ತರಕನ್ನಡದ ಜನತೆಗೆ ಶಬ್ಬಾಸ್ ಎಂದಿದ್ದು, ಸರ್ಕಾರ ಸುಸಜ್ಜಿತ ಆಸ್ಪತ್ರೆ ನಿರ್ಮಾಣಕ್ಕೆ ಇನ್ನಾದರೂ ಮನಸ್ಸು ಮಾಡಿ ಯೋಜನೆಯನ್ನು ಅನುಷ್ಠಾನಗೊಳಿಸುವ ಕಾರ್ಯ ಮಾಡಬೇಕಿದೆ.
ಗೋಕರ್ಣದಲ್ಲಿ ವಿದೇಶಿ ಮಹಿಳೆಯಿಂದ ಭಿಕ್ಷಾಟನೆ; ಉಪೇಂದ್ರರ ಕಲ್ಪನೆ ನಿಜವಾಯ್ತಾ?
ಉತ್ತರ ಕನ್ನಡ : ಜಿಲ್ಲೆಯ ಗೋಕರ್ಣಕ್ಕೆ ಪ್ರವಾಸಕ್ಕಾಗಿ ಭೇಟಿ ನೀಡುತ್ತಿದ್ದ ವಿದೇಶಿಯರು ಇದೀಗ ರಸ್ತೆಯ ಬದಿ ನಿಂತು ಬೇಡಲಾರಂಭಿಸಿದ್ದಾರೆ. ಕಳೆದ ಮೂರು ದಿನಗಳಿಂದ ವಿದೇಶಿ ಮಹಿಳೆಯೊಬ್ಬಳು ಚಿಕ್ಕ ವಯೋಲಿನ್ ನುಡಿಸುತ್ತಾ ಗೋಕರ್ಣ ರಸ್ತೆಯ ಅಲ್ಲಲ್ಲಿ ನಿಂತು ಹಣ ಬೇಡಲಾರಂಭಿಸಿದ್ದಾಳೆ. ವಿದೇಶಿಯರು ಇಲ್ಲಿಗೆ ಭಿಕ್ಷಾಟನೆ ಪ್ರಾರಂಭಿಸಿದ್ದಾರೆಯೇ ? ಎಂದು ಸ್ಥಳೀಯರು ಆಡಿಕೊಳ್ಳುತ್ತಿದ್ದಾರೆ.
ಸಾರ್ವಜನಿಕ ಸ್ಥಳದಲ್ಲಿ ನಿಂತು ತನ್ನ ಸಂಗೀತ ಉಪಕರಣದ ಪೆಟ್ಟಿಗೆಯನ್ನು ನೆಲದ ಮೇಲೆ ಇಟ್ಟು ತಾನೇ ಮೊದಲು ಹಣ ಹಾಕಿ ಜನರು ಹಣ ನೀಡುವಂತೆ ಈ ವಿದೇಶಿ ಮಹಿಳೆ ಸೂಚಿಸುತ್ತಾಳೆ. ವಿದೇಶಿ ಮಹಿಳೆ ವಯೋಲಿನ್ ನುಡಿಸುವುದನ್ನು ನೋಡಿದ ಪ್ರವಾಸಿಗರು ಕೂಡಾ ಆಕೆಯ ಪೆಟ್ಟಿಗೆಗೆ ಹಣ ಹಾಕಿ ತೆರಳುತ್ತಾರೆ. ಭಾರತದ ಜನರು ವಿದೇಶಕ್ಕೆ ಯಾವ ಉದ್ದೇಶದಿಂದ ತೆರಳುತ್ತಾರೋ ಅದನ್ನೇ ಮಾಡಬೇಕೇ ಹೊರತು ಇತರ ಯಾವುದೇ ಕೆಲಸಕ್ಕೆ ತೊಡಗಿಸಿಕೊಂಡ್ರೂ ಕ್ರಮ ತಪ್ಪಲ್ಲ. ಆದರೆ, ನಮ್ಮ ದೇಶಕ್ಕೆ ಪ್ರವಾಸಿ ವೀಸಾದಲ್ಲಿ ಬರುವ ವಿದೇಶಿಗರು ಬಿಂದಾಸ್ ಆಗಿ ಯಾವುದೇ ಚಟುವಟಿಕೆಯಲ್ಲಿ ತೊಡಗಿದರು ಯಾರು ಕೇಳುವವರೇ ಇಲ್ಲವಾಗಿದೆ. ಈ ಬಗ್ಗೆ ಸಂಬಂಧಿಸಿದ ಇಲಾಖೆ ನಿಗಾವಹಿಸಿ ಕ್ರಮ ತೆಗೆದುಕೊಳ್ಳಬೇಕು ಎಂಬುದು ಸಾರ್ವಜನಿಕರ ಆಗ್ರಹ ಆಗಿದೆ.
ಪಾಸಿಟಿವ್ ಅಥವಾ ನೆಗೆಟಿವ್ ಒಟ್ಟಾರೆ ಸುದ್ದಿಯಲ್ಲಿರುವೆ: ಟ್ರೋಲ್ ಮತ್ತು ಮದುವೆ ಬಗ್ಗೆ ರಚಿತಾ ರಾಮ್ ಉತ್ತರ
ಉಪೇಂದ್ರನ ಕನಸು ನನಸಾಯಿತೇ..?: ಇನ್ನು ಸ್ಯಾಂಡಲ್‌ವುಡ್ ನಟ ಮತ್ತು ನಿರ್ದೇಶಕ ರಿಯಲ್ ಸ್ಟಾರ್ ಉಪೇಂದ್ರ ಅವರು ನಿರ್ದೇಶಿಸಿ, ನಟಿಸಿದ್ದ ಸೂಪರ್ ಚಿತ್ರದಲ್ಲಿ ವಿದೇಶಿಗರು ನಮ್ಮ ದೇಶದ ಧಾರ್ಮಿಕ ಸ್ಥಳಗಳಲ್ಲಿ ಬಂದು ಭಿಕ್ಷೆ ಬೇಡುತ್ತಿದ್ದ ದೃಶ್ಯಗಳನ್ನು ಚಿತ್ರೀಕರಣ ಮಾಡಿದ್ದರು. ಭಾರತ ಹೀಗಾಗಲು ಸಾಧ್ಯವಿಲ್ಲ ಎಂದು ಸಿನಿಮಾ ವೀಕ್ಷಕರು ಹೇಳಿಕೊಂಡಿದ್ದರು. ಆದರೆ, ಈಗ ಉಪೇಂದ್ರ ಅವರ ಚಿತ್ರದಲ್ಲಿರುವ ದೃಶ್ಯದಂತೆ ಗೋಕರ್ಣದಲ್ಲಿ ವಿದೇಶಿ ಮಹಿಳೆಯೊಬ್ಬಳು ರಸ್ತೆ ಬದಿಯಲ್ಲಿ ನಿಂತು ಭಿಕ್ಷಾಟನೆ ಮಾಡುತ್ತಿರುವುದು ಕಂಡುಬಂದಿದೆ. ಇನ್ನು ಸಾರ್ವಜನಿಕರು ಮತ್ತು ಪ್ರವಾಸಿಗಳು ಯುವತಿಗೆ ಭಿಕ್ಷೆ ನೀಡುತ್ತಿದ್ದಾರೆ.