ತುಮಕೂರು : ‘ದೇವೇಗೌಡರನ್ನು ಕರೆದು ಸೋಲಿಸಿ ಮರ್ಯಾದೆ ಕಳೆದುಕೊಂಡೆವು!’

Published : Sep 11, 2019, 01:29 PM ISTUpdated : Sep 11, 2019, 01:32 PM IST
ತುಮಕೂರು :  ‘ದೇವೇಗೌಡರನ್ನು ಕರೆದು ಸೋಲಿಸಿ ಮರ್ಯಾದೆ ಕಳೆದುಕೊಂಡೆವು!’

ಸಾರಾಂಶ

ತುಮಕೂರಿಗೆ  ದೇವೇಗೌಡರನ್ನು ನಾವೇ ಕರೆತಂದು ಚುನಾವಣೆಯಲ್ಲಿ ಸೋಲಿಸಿ ನಮ್ಮ ಮರ್ಯಾದೆ ಕಳೆದುಕೊಂಡೆವು ಎಂದು ಮುಖಂಡರೋರ್ವರು ಹೇಳಿದ್ದಾರೆ. 

ತುಮಕೂರು [ಸೆ.11]:  ಕೌಶಲ್ಯಾಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಮುರುಳೀಧರ ಹಾಲಪ್ಪ ಮಾತನಾಡಿ, ಗೌರವಯುತವಾಗಿದ್ದ ಮಾಜಿ ಪ್ರಧಾನಿ ದೇವೇಗೌಡರನ್ನು ಜಿಲ್ಲೆಗೆ ಕರೆತಂದು ನಾವೆಲ್ಲರೂ ಒಟ್ಟಾಗಿ ಸೋಲಿಸಿದೆವು ಎಂದು ವಿಷಾದಿಸಿದರು.

ತುಮಕೂರಿನ ಕುಂಚಿಟಿಗರ ಸಮುದಾಯ ಭವನದಲ್ಲಿ ನಡೆದ ಜಿಲ್ಲಾ ಒಕ್ಕಲಿಗ ನೌಕರರ ವೇದಿಕೆ ಏರ್ಪಡಿಸಿದ್ದ 11ನೇ ವರ್ಷದ ಪ್ರತಿಭಾ ಪುರಸ್ಕಾರ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿ ಜೆಡಿಎಸ್ ಸೋಲಿನ ವಿಚಾರ ಪ್ರಸ್ತಾಪಿಸಿದರು.

ಅವರನ್ನು ಸೋಲಿಸಿ ನಮ್ಮ ಮರ್ಯಾದೆಯನ್ನು ನಾವೇ ತೆಗೆದುಕೊಂಡೆವು, ಜಿಲ್ಲೆಯಲ್ಲಿ ಒಕ್ಕಲಿಗ ಸಮುದಾಯದ ಅಧಿಕಾರಿಗಳಿಗೆ ಪ್ರಾತಿನಿಧ್ಯವಿಲ್ಲದಂತಹ ಸ್ಥಿತಿಯುಂಟಾಗಿದೆ. ಒಕ್ಕಲಿಗ ಸಮುದಾಯದವರಿಗೆ ಮೀಟರ್‌ ಇಲ್ಲ ಎಂದೇ ದೆಹಲಿಯಲ್ಲಿ ಕುಳಿತಿರುವವರು ನಮ್ಮ ಸಮಾಜವನ್ನು ತುಳಿಯುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಸಮುದಾಯಕ್ಕೆ ಎದುರಾಗಿರುವ ಗಂಡಾಂತರದಿಂದ ಪಾರಾಗಬೇಕಾದರೆ, ಪಂಗಡಗಳನ್ನು ಮರೆತು ಒಂದಾಗಬೇಕಿದೆ. ವಿದ್ಯಾರ್ಥಿಗಳು ಉನ್ನತ ಆಡಳಿತಾಧಿಕಾರ ಪಡೆಯುವ ನಿಟ್ಟಿನಲ್ಲಿ ಅಗತ್ಯ ತರಬೇತಿ ಪಡೆಯುವ ಮೂಲಕ ಅಧಿಕಾರಿಗಳಾಗುವ ಗುರಿ ಹೊಂದಬೇಕಿದ್ದು, ಒಕ್ಕಲಿಗ ಸಮುದಾಯದ ಸಹ ಸಂಸ್ಥೆಗಳು ವಿದ್ಯಾರ್ಥಿಗಳಿಗೆ ಅಗತ್ಯ ಸಹಕಾರ ನೀಡುತ್ತಿದ್ದು, ದೆಹಲಿಯಲ್ಲಿ ವ್ಯಾಸಂಗ ಮಾಡಲು ಹೋಗುವ ವಿದ್ಯಾರ್ಥಿಗಳಿಗೆ ಆದಿಚುಂಚನಗಿರಿ ಮಠದಲ್ಲಿ ಉಳಿದುಕೊಂಡು ವ್ಯಾಸಂಗ ಮಾಡುವ ಅವಕಾಶ ಕಲ್ಪಿಸಲಾಗಿದ್ದು, ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಳ್ಳುವಂತೆ ತಿಳಿಸಿದರು.

PREV
click me!

Recommended Stories

ಪುಟಿನ್‌ಗೆ ಇಲ್ಲೇ ಎಲೆಕ್ಷನ್‌ ನಿಲ್ಲೋಕೆ ಟಿಕೆಟ್‌ ಕೊಡ್ತಾರೆ ಅಂದ್ಕೊಂಡಿದ್ದೆ.. ಸಂತೋಷ್‌ ಲಾಡ್‌ ಲೇವಡಿ
ಗಡುವು ಮೀರಿಸಿದರೆ ಮುಂದೆ ಕೆಲಸವಿಲ್ಲ: ಮೆಟ್ರೋ ಗುತ್ತಿಗೆದಾರರಿಗೆ ಡಿ.ಕೆ.ಶಿವಕುಮಾರ್‌ ಎಚ್ಚರಿಕೆ