
ಬೆಂಗಳೂರು (ಏ.04): ಬೆಂಗಳೂರಿಗೆ ಅತಿ ಕಡಿಮೆ ಮತದಾನ ಆಗುವ ನಗರವೆಂಬ ಅಪಖ್ಯಾತಿಯಿದ್ದು, ಅದನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಎಲ್ಲ ನಿವಾಸಿಗಳು ಮತದಾನ ಮಾಡಬೇಕು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಮನವಿ ಮಾಡಿದರು.
ಬೊಮ್ಮನಹಳ್ಳಿ ವಲಯದ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳ (RWAs) ಪದಾಧಿಕಾರಿಗಳೊಂದಿಗೆ ಬನ್ನೇರುಘಟ್ಟ ಮುಖ್ಯ ರಸ್ತೆಯ ಕ್ರೈಸ್ಟ್ ವಿದ್ಯಾಲಯದಲ್ಲಿ ಇಂದು ಬೆಂಗಳೂರು ಜಿಲ್ಲಾ ಚುನಾವಣಾಧಿಕಾರಿ ತುಷಾರ್ ಗಿರಿನಾಥ್ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದೊಂದಿಗೆ ಸಭೆ ನಡೆಸಿದರು. ಮತದಾನ ಮಾಡುವ ಪ್ರಮಾಣವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಚುನಾವಣಾ ಆಯೋಗವು ಸಾಕಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಈ ಸಂಬಂಧ ಎಲ್ಲರೂ ಮತದಾನದ ಪ್ರಾಮುಖ್ಯತೆಯನ್ನು ಅರಿತು ತಪ್ಪದೆ ಮತ ಚಲಾಯಿಸಬೇಕೆಂದು ತಿಳಿಸಿದರು ಈ ವೇಳೆ ಮನವಿ ಮಾಡಿದರು.
ಶೃಂಗೇರಿ ಶಾಸಕ ಟಿ.ಡಿ. ರಾಜೇಗೌಡ ಹಂಚಿದ್ದ ಕುಕ್ಕರ್ ಬ್ಲಾಸ್ಟ್: ಮತದಾರರಲ್ಲಿ ಆತಂಕ
ನಗರದಲ್ಲಿ 95,13,830 ಲಕ್ಷ ಮತದಾರರಿದ್ದಾರೆ. ಆದರೆ ಮತದಾನ ಮಾಡುವ ಪ್ರಮಾಣ ಮಾತ್ರ ಕಡಿಮೆಯಿದೆ. ಅದನ್ನು ನಾವೆಲ್ಲರೂ ಸೇರಿ ಬದಲಾಯಿಸಬೇಕಿದೆ. ಮತಗಟ್ಟೆಗಳ ಬಳಿಯಿರುವ ಸೌಲಭ್ಯಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಕೆಲಸ ಮಾಡಬೇಕು. ಜೊತೆಗೆ 80 ವರ್ಷ ಮೇಲ್ಪಟ್ಟವರು ಹಾಗೂ ವಿಕಲಚೇತನರು ಮನೆಯಿಂದಲೇ ಮತದಾನ ಮಾಡುವ ಅವಕಾಶ ಕಲ್ಪಿಸಿರುವ ಬಗ್ಗೆಯೂ ಜನರಲ್ಲಿ ತಿಳುವಳಿಕೆ ನೀಡುವಂತೆ ಕ್ಷೇಮಾಭಿವೃದ್ಧಿ ಸಂಘದ ಸದಸ್ಯರಿಗೆ ತಿಳಿಸಿದರು.
ದೂರು ಸ್ವೀಕರಿಸಲು ಕಂಟ್ರೋಲ್ ರೂಂ: ನಗರ ವ್ಯಾಪ್ತಿಯಲ್ಲಿ ಬರುವ ಹೊಸ ಮತದಾರರು, ತಿದ್ದುಪಡಿ, ಸ್ಥಳ ಬದಾವಣೆ ಸೇರಿದಂತೆ ಇನ್ನಿತರೆ ಹೊಸ ಮತದಾನ ಗುರುತಿನ ಚೀಟಿಗಳನ್ನು ಸ್ಪೀಡ್ ಪೋಸ್ಟ್ ಮೂಲಕ ಕಳುಹಿಸುವ ವ್ಯವಸ್ಥೆ ಮಾಡಲಾಗುತ್ತಿದೆ. ಆಯಾ 28 ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಚುನಾವಣೆಗೆ ಸಂಬಂಧಿಸಿದ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಮತ್ತು ಇನ್ನಿತರೆ ಚುನಾವಣಾ ದೂರುಗಳನ್ನು ಸ್ವೀಕರಿಸಲು ಕಂಟ್ರೋಲ್ ರೂಂಗಳನ್ನು ಸ್ಥಾಪಿಸಲಾಗಿದ್ದು, ಸಾರ್ವಜನಿಕರು ದೂರವಾಣಿ ಸಂಖ್ಯೆಗಳಿಗೆ ಕರೆ ಮಾಡಿ ದೂರುಗಳನ್ನು ಸಲ್ಲಿಸಬಹುದು ಎಂದು ತಿಳಿಸಿದರು.
"ಮತದಾನ ಸಂಕಲ್ಪ" ಜಾಗೃತಿ ನಾಟಕ ಪ್ರದರ್ಶನ: ಬೊಮ್ಮನಹಳ್ಳಿ ವಲಯ ವ್ಯಾಪ್ತಿಯಲ್ಲಿ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳ ಜೊತೆ ನಡೆದ ಸಭೆಯಲ್ಲಿ ನಾಟಕ ನಿರ್ದೇಶಕರಾದ ಟಿ.ಎನ್.ಬಾಲಕೃಷ್ಣ ಅವರ ನೇತೃತ್ವದಲ್ಲಿ ಬಿ.ಎಂ.ಟಿ.ಸಿ-ಕೆ.ಎಸ್.ಆರ್.ಟಿ.ಸಿಯ ನಾಟಕ ತಂಡವು “ಮತದಾನ ಸಂಕಲ್ಪ” ಎಂಬ ಜಾಗೃತಿ ನಾಟಕವನ್ನು ಪ್ರದರ್ಶಿಸಿದರು. ಈ ವೇಳೆ ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷಾದ ಸಂಗಪ್ಪ, ಸ್ವೀಪ್ ನೋಡಲ್ ಅಧಿಕಾರಿ ಸಿದ್ದೇಶ್ವರ, ವಲಯ ಜಂಟಿ ಆಯುಕ್ತರಾದ ಕೃಷ್ಣಮೂರ್ತಿ ಹಾಗೂ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.
ಬಿಬಿಎಂಪಿ ಕಾರ್ಪೋರೇಟರ್‌ಗೆ ಕೆಜಿಎಫ್ ಬಿಜೆಪಿ ಟಿಕೆಟ್ ..!
ಚುನಾವಣಾ ದೂರು ವಿಲೇವಾರಿ ಮಾರ್ಗಸೂಚಿ ಪ್ರಕಟ: ಬೆಂಗಳೂರು ನಗರ ಜಿಲ್ಲಾ ಚುನಾವಣಾಧಿಕಾರಿ ವ್ಯಾಪ್ತಿಯಲ್ಲಿ ಬರುವ 28 ವಿಧಾನಸಭಾ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಚುನಾವಣಾ ದೂರುಗಳ ನಿರ್ವಹಣೆ, ಮೇಲ್ವಿಚಾರಣೆ ಮತ್ತು ಗುಣಮಟ್ಟದ ವಿಲೇವಾರಿ ಕುರಿತು ಜಿಲ್ಲಾ ದೂರುಗಳ ಮೇಲ್ವಿಚಾರಣಾ ಕೋಶದ ದೂರು ಪರಿಹಾರ ಹಾಗೂ ಮತದಾರ ಸಹಾಯವಾಣಿ ಸಂಖ್ಯೆಯ ನೋಡಲ್ ಅಧಿಕಾರಿಯಾದ ಪ್ರತೀಕ್ ಬಾಯಲ್ ರವರು ಮಾರ್ಗಸೂಚಿಗಳನ್ನು ಹೊರಡಿಸಲಾಗಿರುತ್ತದೆ. ಈ ಮೂಲಕ ಚುನಾವಾಣ ಸಂಬಂಧಿತ ದೂರುಗಳ ನಿರ್ವಹಣೆ, ಮೇಲ್ವಿಚಾರಣೆ, ಪರಿಶೀಲನೆ ಹಾಗೂ ವಿಲೇವಾರಿ ಕ್ರಮದ ಬಗ್ಗೆ ಸೂಚಿಸಲಾಗಿದೆ.