ದೋಷಯುಕ್ತ ವಾಷಿಂಗ್ ಮಷೀನ್ ಸರಬರಾಜು ಮಾಡಿದ ಅಮೆಜಾನ್ ಕಂಪನಿಗೆ ದಂಡ ಮತ್ತು ಪರಿಹಾರ ನೀಡಲು ಜಿಲ್ಲಾ ಗ್ರಾಹಕರ ಆಯೋಗವು ಆದೇಶಿಸಿದೆ.
ಧಾರವಾಡ (ಜು.27) : ದೋಷಯುಕ್ತ ವಾಷಿಂಗ್ ಮಷೀನ್ ಸರಬರಾಜು ಮಾಡಿದ ಅಮೆಜಾನ್ ಕಂಪನಿಗೆ ದಂಡ ಮತ್ತು ಪರಿಹಾರ ನೀಡಲು ಜಿಲ್ಲಾ ಗ್ರಾಹಕರ ಆಯೋಗವು ಆದೇಶಿಸಿದೆ.
ಧಾರವಾಡ ಸಪ್ತಾಪುರದ ನಿವಾಸಿ ಗಿರೀಶ ಜೋಶಿ ತಮ್ಮ ಮನೆ ಬಳಕೆಗಾಗಿ ಅಮೆಜಾನ್ ವೆಬ್‌ಸೈಟ್‌ನಿಂದ 2020ರ ಆಗಸ್ಟ7ರಂದು .15,499ಗಳ ಸಂದಾಯ ಮಾಡಿ ವಾಷಿಂಗ್ ಮಶೀನ್ ಖರೀದಿಸಿದ್ದರು. ಖರೀದಿಸಿದ ಕೆಲವೇ ತಿಂಗಳಲ್ಲಿ ಮಶೀನಿನಲ್ಲಿ ದೋಷ ಉಂಟಾಗಿತ್ತು. ಆ ವಿಷಯವನ್ನು ಕಂಪನಿಗೆ ತಿಳಿಸಿದ್ದರು. ಕಂಪನಿಯವರು ಮೂರು ತಿಂಗಳ ನಂತರ ಮಶೀನಿನ ಸಮಸ್ಯೆಯನ್ನು ನಿವಾರಿಸಿದ್ದರು.
ಆದರೆ, ಮಶೀನಿನಲ್ಲಿ ಮತ್ತೇ ದೋಷ ಉಂಟಾಗಿ ತೊಂದರೆಯಾಯಿತು. ಈ ಸಂಗತಿಯನ್ನು ಎದುರುದಾರ ಕಂಪನಿಯವರಿಗ ತಿಳಿಸಿದರೂ ಸಕಾಲದಲ್ಲಿ ದುರಸ್ತಿ ಮಾಡಿರಲಿಲ್ಲ. ಹೀಗಾಗಿ ಗಿರೀಶ ಅವರು ಗ್ರಾಹಕರ ಆಯೋಗದಲ್ಲಿ ದೂರು ದಾಖಲು ಮಾಡಿದ್ದರು.
ಪ್ಲ್ಯಾಟ್ ಕೊಡದ ಡೆವಲಪರ್ಸ್‍ಗೆ ಬಡ್ಡಿ ಜತೆ ರೂ.65 ಲಕ್ಷ ಹಿಂದಿರುಗಿಸಲು ಧಾರವಾಡ ಗ್ರಾಹಕರ ಆಯೋಗ ಆದೇಶ
ಈ ದೂರಿನ ಬಗ್ಗೆ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷ ಈಶಪ್ಪ ಭೂತೆ, ಸದಸ್ಯರಾದ ವಿಶಾಲಾಕ್ಷಿ ಬೋಳಶೆಟ್ಟಿಹಾಗೂ ಪ್ರಭು ಹಿರೇಮಠ, ವಾಷಿಂಗ ಮಶಿನ್ ಅನ್ನು ಖರೀದಿಸಿದ ಒಂದು ವರ್ಷದ ಒಳಗಡೆಯೇ ಅದರಲ್ಲಿ ದೋಷ ಕಂಡುಬಂದಿದ್ದರಿಂದ ಮತ್ತು ಆ ಬಗ್ಗೆ ದೂರಿದರೂ ಸೇವಾ ನ್ಯೂನ್ಯತೆ ಎಸಲಾಗಿದೆ ಎಂದು ಆಯೋಗ ಅಭಿಪ್ರಾಯಪಟ್ಟಿದೆ.
ಕಂಪನಿಯವರು ತೀರ್ಪು ನೀಡಿದ ಒಂದು ತಿಂಗಳ ಒಳಗಾಗಿ ಹೊಸ ವಾಶೀಂಗ್ ಮಷಿನ್ ದೂರುದಾರರಿಗೆ ಬದಲಾಯಿಸಿ ಕೊಡಬೇಕು. ತಪ್ಪಿದ್ದಲ್ಲಿ ಆ ವಾಶಿಂಗ್ ಮಶಿನಿನ ಪೂರ್ತಿ ಹಣ .15,499 ಹಾಗೂ ಮೇಲೆ ಶೇ. 8ರಂತೆ ಬಡ್ಡಿಯನ್ನು ಸಂದಾಯ ಮಾಡುವಂತೆ ಆದೇಶಿಸಿದೆ. ದೂರುದಾರರಿಗೆ ಆಗಿರುವ ಅನಾನುಕೂಲ ಮತ್ತು ಮಾನಸಿಕ ತೊಂದರೆಗಾಗಿ ಎದುರುದಾರ ಕಂಪನಿಯವರು .10,000 ಪರಿಹಾರ ಹಾಗೂ .3,000 ಪ್ರಕರಣದ ಖರ್ಚು ವೆಚ್ಚ ನೀಡುವಂತೆ ಆಯೋಗ ನಿರ್ದೇಶಿಸಿದೆ.
ಮಸಾಲೆ ದೋಸೆಗೆ ಸಾಂಬಾರ್ ಕೊಡದ್ದಕ್ಕೆ ವ್ಯಕ್ತಿಯಿಂದ ದೂರು, ಕೋರ್ಟ್ ತೀರ್ಪಿಗೆ ರೆಸ್ಟೋರೆಂಟ್ ಮಾಲೀಕ ಕಕ್ಕಾಬಿಕ್ಕಿ