
ತುಮಕೂರು (ಅ.05): ಜಿಂಕೆ ಬೇಟೆಯಾಡಲು ಬಂದೂಕು ಹಿಡಿದು ಓಡಾಡುತ್ತಿದ್ದ 6 ಆರೋಪಿಗಳನ್ನು ಬಂಧಿಸಿರುವ ಘಟನೆ ತುಮಕೂರು ಜಿಲ್ಲೆ ಶಿರಾ ತಾಲೂಕು ಪೂಜಾರ ಮುದ್ದನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ರೈತರೊಬ್ಬರು ಕಡಲೇಕಾಯಿ ಬೆಳೆ ಕಾಯುವ ಸಲುವಾಗಿ ಹೊಲದಲ್ಲೇ ರಾತ್ರಿ ಕಾವಲು ಕಾಯುತ್ತಿದ್ದರು.
ಬೆಳಗಿನ ಜಾವ 3.35ರ ವೇಳೆ ಟಾರ್ಚ್ ಲೈಟ್ ಬೆಳಕಿನಲ್ಲಿ ಕೆಲವರು ಓಡಾಡುತ್ತಿದ್ದನ್ನು ಕಂಡ ರೈತ ಕೂಡಲೇ ಪಟ್ಟನಾಯಕನಹಳ್ಳಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಕಲಬುರಗಿ ತಾಂಡಾ ಕಾಮುಕರು... ಗಂಡ-ಹೆಂಡತಿ ಕೊಲೆ ನೋಡಿದ ಮಗು ಮಾಡಿದ್ದೇನು? ...
ಮಾಹಿತಿ ಹಿನ್ನೆಲೆಯಲ್ಲಿ ತಮ್ಮ ಸಿಬ್ಬಂದಿಯೊಂದಿಗೆ ಆಗಮಿಸಿದ ಪಟ್ಟನಾಯಕನಹಳ್ಳಿ ಪಿಎಸ್‌ಐ ಅವರು 6 ಮಂದಿ ಬಂದೂಕು ಹಿಡಿದು ಓಡಾಡುತ್ತಿದ್ದವರನ್ನು ತಡೆದು ವಿಚಾರಣೆಗೆ ಒಳಪಡಿಸಿದಾಗ ಜಿಂಕೆ ಬೇಟೆಯಾಡಲು ಬಂದಿರುವುದಾಗಿ ಒಪ್ಪಿಕೊಂಡರು.