ಬಾಗಲಕೋಟೆ ಜಿಲ್ಲೆಯಲ್ಲಿ HIV ಸೋಂಕಿತರ ಪ್ರಮಾಣ ಇಳಿಕೆ

By Web Desk  |  First Published Nov 30, 2019, 11:56 AM IST

ಪ್ರಸಕ್ತ ಸಾಲಿಗೆ ಸಾಮಾನ್ಯರಲ್ಲಿ ಶೇ.2.5 ರಿಂದ ಶೇ.2.2ಕ್ಕೆ ಇಳಿಮುಖ| ಜಿಲ್ಲೆಯಲ್ಲಿ 3 ಲೈಂಗಿಕ ರೋಗ ಪತ್ತೆ ಕೇಂದ್ರ| ಸೋಂಕಿತರ ತಡೆಗೆ ಸಮಗ್ರ ಅಭಿಯಾನ|ವಿಶ್ವ ಏಡ್ಸ್‌ ದಿನದ ಅಂಗವಾಗಿ ಜಾಗೃತಿ ಜಾಥಾ|


ಬಾಗಲಕೋಟೆ(ನ.30): ಜಿಲ್ಲೆಯಲ್ಲಿ ವರ್ಷದಿಂದ ವರ್ಷಕ್ಕೆ ಎಚ್‌.ಐ.ವಿ ಸೋಂಕಿತರ ಪ್ರಮಾಣದಲ್ಲಿ ಗಣನೀಯವಾಗಿ ಇಳಿಮುಖವಾಗುತ್ತಿದೆ ಎಂದು ಜಿಪಂ ಸಿಇಒ ಗಂಗೂಬಾಯಿ ಮಾನಕರ ಅವರು ಹೇಳಿದ್ದಾರೆ. 

ಜಿ.ಪಂ ಸಿಇಒ ಕಚೇರಿಯಲ್ಲಿ ಶುಕ್ರವಾರ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಕಳೆದ ಸಾಲಿನಿಂದ ಪ್ರಸಕ್ತ ಸಾಲಿಗೆ ಸಾಮಾನ್ಯರಲ್ಲಿ ಶೇ.2.5 ರಿಂದ ಶೇ.2.2ಕ್ಕೆ ಇಳಿಮುಖವಾದರೆ, ಗರ್ಭಿಣಿಯರಲ್ಲಿ ಶೇ.0.085 ರಿಂದ ಶೇ.0.082 ಕ್ಕೆ ಇಳಿಮುಖವಾಗಿರುವುದು ಕಂಡು ಬಂದಿರುತ್ತದೆ. ವಯಸ್ಸುವಾರು ನೋಡಲಾಗಿ ಏಪ್ರಿಲ್‌ 2017 ರಿಂದ ಮಾಚ್‌ರ್‍ 2019ರ ವರೆಗೆ 35 ರಿಂದ 49 ವರ್ಷದೊಳಗಿನ ಪುರುಷರಲ್ಲಿ 317 ರಿಂದ 268 ಮಹಿಳೆಯರಲ್ಲಿ 329 ರಿಂದ 319ಕ್ಕೆ ಇಳಿಮುಖವಾಗಿರುವುದು ಕಂಡುಬಂದಿದೆ ಎಂದು ತಿಳಿಸಿದರು.

Tap to resize

Latest Videos

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಜಿಲ್ಲೆಯಲ್ಲಿ ಒಟ್ಟು 12 ಐಸಿಟಿಸಿ ಕೇಂದ್ರಗಳು, 4 ಏ.ಆರ್‌.ಟಿ ಕೇಂದ್ರಗಳು ಮತ್ತು 9 ಲಿಂಕ್‌ ಏ.ಆರ್‌.ಟಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿದ್ದು, ಈ ಕೇಂದ್ರಗಳ ಅಡಿಯಲ್ಲಿ ಪ್ರಾರಂಭದಿಂದ 2019ರ ಅಕ್ಟೋಬರ್‌ ಅಂತ್ಯದ ವರೆಗೆ 31921 ಸೋಂಕಿತರನ್ನು ನೋಂದಣಿ ಮಾಡಿಕೊಳ್ಳಲಾಗಿದ್ದು, ಇದರಲ್ಲಿ 16299 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಲ್ಲದೇ ಎಚ್‌.ಐವಿ/ಏಡ್ಸ್‌ ರೋಗಕ್ಕೆ ತುತ್ತಾದವರು ಚಿಕಿತ್ಸೆ ಪಡೆದಲ್ಲಿ 20 ವರ್ಷಕ್ಕೂ ಹೆಚ್ಚು ಕಾಲ ಬದುಕಬಹುದಾಗಿದೆ ಎಂದರು.
ಜಿಲ್ಲೆಯಲ್ಲಿರುವ ಒಟ್ಟು 3 ಲೈಂಗಿಕ ರೋಗ ಪತ್ತೆ ಕೇಂದ್ರಗಳಿದ್ದು (ಸುರಕ್ಷಾ ಕ್ಲಿನಿಕ್‌) ಇವುಗಳ ಅಡಿಯಲ್ಲಿ ಏಪ್ರಿಲ್‌ ನಿಂದ ಅಕ್ಟೋಬರ್‌-2019 ವರೆಗೆ ಒಟ್ಟು 6810 ಪರೀಕ್ಷೆ ಮಾಡಲಾಗಿ ಶೇ.62 ರಷ್ಟುಪ್ರಗತಿ ಸಾ​ಧಿಸಲಾಗಿದೆ. ಅಲ್ಲದೇ ಜಿಲ್ಲೆಯಲ್ಲಿ 8 ರಕ್ತನಿಧಿ ​ಕೇಂದ್ರಗಳಿದ್ದು, ಅದರಲ್ಲಿ 3 ನ್ಯಾಕೋ ಅನುದಾನಿತ ಕೇಂದ್ರಗಳಿದ್ದು, ಅದರಲ್ಲಿ ಒಂದು ಸರ್ಕಾರಿ ರಕ್ತನಿಧಿ ​ಕೇಂದ್ರವಿದೆ. ಉಳಿದ 5 ಖಾಸಗಿ ರಕ್ತನಿಧಿ ​ಕೇಂದ್ರಗಳಾಗಿವೆ. 2019-20ನೇ ಸಾಲಿನ ಏಪ್ರಿಲ್‌ ನಿಂದ ಅಕ್ಟೋಬರ್‌ವರೆಗೆ 10277 ರಕ್ತದ ಯುನಿಟ್‌ಗಳನ್ನು ಸಂಗ್ರಹಿಸಲಾಗಿದೆ ಎಂದು ತಿಳಿಸಿದರು.

ಸೋಂಕಿತರ ತಡೆಗೆ ಸಮಗ್ರ ಅಭಿಯಾನ :

ರಾಜ್ಯದಲ್ಲಿಯೇ ಸೋಂಕಿತರ ಪ್ರಮಾಣ ಕಂಡು ಬರುವ 7 ಜಿಲ್ಲೆಗಳಲ್ಲಿ ಬಾಗಲಕೋಟೆ ಜಿಲ್ಲೆ ಒಂದಾಗಿದ್ದು, ವಿವಿಧ ಮಾಧ್ಯಮಗಳ ಮೂಲಕ ಎಚ್‌.ಐ.ವಿ ಸೋಂಕನ್ನು ತಡೆ ಹಿಡಿಯಲು ಜಿಲ್ಲೆಯಲ್ಲಿ ಡಿಸೆಂಬರ್‌ 2 ಮತ್ತು 3 ರಂದು ಸಮಗ್ರ ಅಭಿಯಾನವನ್ನು ಹಮ್ಮಿಕೊಳ್ಳಲಾಗುತ್ತಿದೆ. ಈ ಅಭಿಯಾನದಡಿ ಆಶಾ ಕಾರ್ಯಕರ್ತೆಯರ ಮುಖಾಂತರ ಜಿಲ್ಲೆಯ 285165 ಮನೆ ಮನೆಗಳಿಗೆ ಭೇಟಿ ನೀಡಿ ಎಚ್‌.ಐ.ವಿ/ಏಡ್ಸ್‌ ಕುರಿತಾದ ಕರಪತ್ರ ನೀಡುವುದರೊಂದಿಗೆ ಮಾಹಿತಿ ನೀಡಲಿದ್ದಾರೆ. ಜಿಲ್ಲಾ ಉಪ ಆರೋಗ್ಯ ಶಿಕ್ಷಣಾಧಿ​ಕಾರಿ, ತಾಲೂಕು ಆರೋಗ್ಯ ಅ​ಧಿಕಾರಿಗಳು, ಆರೋಗ್ಯ ಶಿಕ್ಷಣಾಧಿ​ಕಾರಿಗಳು, ಪ್ರಾಥಮಿಕ ಆರೋಗ್ಯ ಕೇಂದ್ರದ ಮೇಲ್ವಿಚಾರಕರು, ಜಿಲ್ಲಾ ಮೇಲ್ವಿಚಾರಕರು, ಆಪ್ತ ಸಮಾಲೋಚಕರು ಈ ಕಾರ್ಯಕ್ರಮದ ಮೇಲ್ವಿಚಾರಣೆ ಮಾಡಲಿದ್ದಾರೆಂದರು.

ವಿವಿಧ ರೀತಿ ಪ್ರಚಾರ:

ಜನದಟ್ಟಣೆ ಇರುವ ಸ್ಥಳಗಳಲ್ಲಿ ಪ್ರತಿ ತಾಲೂಕಿನಲ್ಲಿ 10ರಂತೆ ಎಚ್‌.ಐ.ವಿ/ಏಡ್ಸ್‌ ನಿಯಂತ್ರಣ ಕುರಿತು ಗೋಡೆ ಬರಹ, ನಗರ ಪ್ರದೇಶದಲ್ಲಿ ಆಟೋಗಳಲ್ಲಿ ಧ್ವನಿವರ್ಧಕ ಮೂಲಕ ಪ್ರಚಾರ, ಕಾಲೇಜು ಮಟ್ಟದಲ್ಲಿ ಎಚ್‌.ಐ.ವಿ/ಏಡ್ಸ್‌ ನಿಯಂತ್ರಣ ಕುರಿತು ಕ್ವಿಜ್‌ ಸ್ಪರ್ಧೆ, ರಾಜ್ಯಮಟ್ಟದಿಂದ ಬಸ್‌ ಬ್ರಾಂಡಿಂಗ್‌ ಮುಖಾಂತರ ಪ್ರಚಾರ ಕಾರ್ಯ ಕೈಗೊಳ್ಳಲಾಗುತ್ತಿದೆ. ಈ ಸಮಗ್ರ ಅಭಿಯಾನದ ಮೂಲಕ ಗ್ರಾಮೀಣ ಪ್ರದೇಶದಲ್ಲಿ ಎಚ್‌.ಐ.ವಿ ಸೋಂಕಿನ ಸರಿಯಾದ ತಿಳಿವಳಿಕೆ ಮತ್ತು ಜ್ಞಾನವನ್ನು ಹೆಚ್ಚಿಸುವುದು, ಹೆಚ್ಚು ಹೆಚ್ಚು ಜನರು ಐಸಿಟಿಸಿ ಕೇಂದ್ರಗಳಿಗೆ ಭೇಟಿ ನೀಡಿ ಎಚ್‌ಐವಿ ಪರೀಕ್ಷೆ ಮಾಡಿಸಿಕೊಳ್ಳುವಂತೆ ಪ್ರೇರೆಪಿಸುವ ಕೆಲಸ ಮಾಡಲಾಗುತ್ತಿದೆ ಎಂದರು.

ರಾಜ್ಯ ಏಡ್ಸ್‌ ಪ್ರಿವೆನ್‌ಷನ್‌ ಸೊಸೈಟಿಯು ಈಗಾಗಲೇ ವಿವಿಧ ಮಾಧ್ಯಮಗಳ ಮೂಲಕ ಜನ ಸಾಮಾಜ್ಯರಲ್ಲಿ ಎಚ್‌.ಐ.ವಿ/ಏಡ್ಸ್‌ ನಿಯಂತ್ರಣ, ಕಳಂಕ ತಾರತಮ್ಯ, ಸಾಮಾಜಿಕ ಸವಲತ್ತು ಇತ್ಯಾದಿಗಳ ಬಗ್ಗೆ ಅರಿವು ಮೂಡಿಸಲಾಗುತ್ತಿರುವುದರಿಂದ ಇತ್ತೀಚಿನ ವರ್ಷಗಳಲ್ಲಿ ಎಚ್‌.ಐ.ವಿ ಸೋಂಕಿನ ಪ್ರಮಾಣ ಗಣನೀಯವಾಗಿ ಕಡಿಮೆಯಾಗುತ್ತಿದೆ. ಆದಾಗ್ಯೂ ಎಚ್‌.ಐ.ವಿ ಸೋಂಕನ್ನು ಸೊನ್ನೆಗೆ ತರಲು ಸಮಗ್ರ ಅಭಿಯಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

ವಿಶ್ವ ಏಡ್ಸ್‌ ದಿನದ ಅಂಗವಾಗಿ ಜಾಗೃತಿ ಜಾಥಾ

ಡಿ.1 ರಂದು ಏಡ್ಸ್‌ ದಿನಾಚರಣೆ ಅಂಗವಾಗಿ ಸಮುದಾಯಗಳು ವ್ಯತ್ಯಾಸವನ್ನುಂಟು ಮಾಡುತ್ತವೆ ಎಂಬ ಘೋಷವಾಖ್ಯದೊಂದಿಗೆ ಜನಜಾಗೃತಿ ಜಾಥಾ ಕಾರ್ಯಕ್ರಮವನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್‌ ಪ್ರತಿಬಂಧಕ, ನಿಯಂತ್ರಣ ಘಟಕ ಹಾಗೂ ಭಾರತೀಯ ರೆಡ್‌ಕ್ರಾಸ್‌ ಸಂಸ್ಥೆ ಜಿಲ್ಲಾ ಘಟಕದ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದೆ. ಅಂದು ಬೆಳಗ್ಗೆ 10 ಗಂಟೆಗೆ ಜಾಗೃತಿ ಜಾಥಾ ಜಿಲ್ಲಾಸ್ಪತ್ರೆ ಆವರಣದ ಮುಂಭಾಗದಿಂದ ಪ್ರಾರಂಭವಾಗಿ ಮುಖ್ಯರಸ್ತೆ ಮುಖಾಂತರ ಸಾಗಿ ನಗರಸಭೆ, ಎಸ್‌.ಬಿ.ಐ ಬ್ಯಾಂಕ್‌, ಎಲ್‌ಐಸಿ ವೃತ್ತ, ಪೊಲೀಸ್‌ ಪ್ಯಾಲೇಸ್‌, ನವನಗರ ಬಸ್‌ ನಿಲ್ದಾಣ ಮಾರ್ಗವಾಗಿ ಸಂಚರಿಸಿ ಜಿಲ್ಲಾಡಳಿತ ಭವನಕ್ಕೆ ಮುಕ್ತಾಯಗೊಳ್ಳಲಿದೆ. ಜಾಗೃತಿ ಜಾಥಾದಲ್ಲಿ ವಿವಿಧ ಜನಪ್ರತಿನಿ​ಗಳು, ಅ​ಕಾರಿಗಳು ಹಾಗೂ ಕಾಲೇಜು ವಿದ್ಯಾರ್ಥಿಗಳು ಪಾಲ್ಗೊಳ್ಳಲಿದ್ದಾರೆ.
 

click me!