ಬಾಳೆಹೊನ್ನೂರು: ಹಿಂದೂ ರುದ್ರಭೂಮಿ ಅಭಿವೃದ್ಧಿಗೆ ನಿರ್ಧಾರ

By Kannadaprabha News  |  First Published Jun 8, 2020, 11:13 AM IST

ಬಾಳೆಹೊನ್ನೂರಿನ ಅಕ್ಷರನಗರ, ಇಳಾಲ್‌ಗದ್ದೆ, ಮೆಣಸುಕುಡಿಗೆ, ರೇಣುಕನಗರ, ಮಸೀದಿಕೆರೆ, ಮಾಗೋಡು, ವೀರಭದ್ರೇಶ್ವರನಗರ ಸೇರಿ ಸುತ್ತಮುತ್ತಲು ಸಾವಿರಾರು ಮನೆಗಳಿವೆ. ಏನಾದರೂ ಈ ಪ್ರದೇಶಗಳಲ್ಲಿ ಸಾರ್ವಜನಿಕರು ನಿಧನ ಹೊಂದಿದರೆ ಅಂತ್ಯಕ್ರಿಯೆಗೆ ಹಿಂದೂ ರುದ್ರಭೂಮಿ ಅವಶ್ಯಕತೆ ಇದೆ ಎನ್ನುವ ನಿರ್ಧಾರಕ್ಕೆ ಬರಲಾಗಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.


ಬಾಳೆಹೊನ್ನೂರು(ಜೂ.08): ಬಿ.ಕಣಬೂರು ಗ್ರಾಮ ಪಂಚಾಯಿತಿ ವ್ಯಾಪ್ತಿ ಅಕ್ಷರ ನಗರದಲ್ಲಿ 2 ಎಕರೆ ಪ್ರದೇಶವನ್ನು ಹಿಂದೂ ರುದ್ರಭೂಮಿಗಾಗಿ ಮೀಸಲಿರಿಸಲಾಗಿದೆ. ಪ್ರಸ್ತುತ ಆ ಜಾಗದಲ್ಲಿ ಗಿಡಗಳು ಬೆಳೆದ ಹಿನ್ನೆಲೆ ಆ ಪ್ರದೇಶವನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಅಕ್ಷರನಗರ ಹಿಂದೂ ರುದ್ರಭೂಮಿ ಸಮಿತಿ ಅಧ್ಯಕ್ಷ ಎಂ.ಎಸ್‌.ಜಯಪ್ರಕಾಶ್‌ ಹೇಳಿದರು.

ಅಕ್ಷರ ನಗರದ ಅಂಬೇಡ್ಕರ್‌ ಸಮುದಾಯ ಭವನದಲ್ಲಿ ನಡೆದ ಹಿಂದೂ ರುದ್ರಭೂಮಿ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಅಕ್ಷರನಗರ, ಇಳಾಲ್‌ಗದ್ದೆ, ಮೆಣಸುಕುಡಿಗೆ, ರೇಣುಕನಗರ, ಮಸೀದಿಕೆರೆ, ಮಾಗೋಡು, ವೀರಭದ್ರೇಶ್ವರನಗರ ಸೇರಿ ಸುತ್ತಮುತ್ತಲು ಸಾವಿರಾರು ಮನೆಗಳಿವೆ. ಏನಾದರೂ ಈ ಪ್ರದೇಶಗಳಲ್ಲಿ ಸಾರ್ವಜನಿಕರು ನಿಧನ ಹೊಂದಿದರೆ ಅಂತ್ಯಕ್ರಿಯೆಗೆ ಹಿಂದೂ ರುದ್ರಭೂಮಿ ಅವಶ್ಯಕತೆ ಇದೆ. ಈ ಹಿನ್ನೆಲೆ ಹಲವಾರು ವರ್ಷಗಳ ಹಿಂದೆಯೇ ಎರಡು ಎಕರೆಯಷ್ಟುಜಾಗವನ್ನು ಮೀಸಲಿಡಲಾಗಿತ್ತು ಎಂದರು.

Tap to resize

Latest Videos

ಕಾರಣಾಂತರದಿಂದ ಈ ಪ್ರದೇಶಕ್ಕೆ ಬೇಲಿ ನಿರ್ಮಿಸಿರಲಿಲ್ಲ. ಇದನ್ನೇ ಉದ್ದೇಶವಾಗಿಟ್ಟುಕೊಂಡು ಕೆಲವರು ಈ ಪ್ರದೇಶದಲ್ಲಿ ಕಸವನ್ನು ಎಸೆದು ಪರಿಸರ ಹಾಳುಮಾಡುವುದಲ್ಲದೆ, ಅಕ್ರಮವಾಗಿ ಶೆಡ್‌ ನಿರ್ಮಿಸಿಕೊಂಡು ರುದ್ರಭೂಮಿ ಜಾಗವನ್ನು ಅತಿಕ್ರಮಣಕ್ಕೆ ಪ್ರಯತ್ನವೂ ನಡೆದಿದ್ದ ಹಿನ್ನೆಲೆ ಅಕ್ರಮ ಶೆಡ್‌ಗಳನ್ನು ತೆರವು ಮಾಡಿಸಲಾಗಿದೆ. ಇನ್ನು ಮುಂದೆ ರುದ್ರಭೂಮಿ ಪ್ರದೇಶವನ್ನು ಅತಿಕ್ರಮಣ ಮಾಡದಂತೆ ಹಾಗೂ ಕಸ, ತ್ಯಾಜ್ಯ ವಸ್ತುಗಳನ್ನು ಎಸೆಯಬಾರದು ಎಂದು ಕ್ರಮ ಕೈಗೊಂಡು ಹಿಂದೂ ರುದ್ರಭೂಮಿಗೆ ಸೂಚನಾ ಫಲಕ ಅಳವಡಿಸಲಾಗಿದೆ. ಹಿಂದೂ ರುದ್ರಭೂಮಿ ಪ್ರದೇಶದ ಸುತ್ತಲೂ ತಂತಿಬೇಲಿ ನಿರ್ಮಾಣ, ಶೌಚಾಲಯದ ವ್ಯವಸ್ಥೆ, ನೀರಿನ ವ್ಯವಸ್ಥೆ ಹಾಗೂ ಅಂತ್ಯಕ್ರಿಯೆಗೆ ಬೇಕಾಗುವ ವ್ಯವಸ್ಥೆಯನ್ನು ಸುಸಜ್ಜಿತವಾಗಿ ಮಾಡಲು ಈಗಾಗಲೇ ನೀಲಿನಕ್ಷೆ ತಯಾರಿಸಿದೆ. ಈ ಬಗ್ಗೆ ಶಾಸಕ ಟಿ.ಡಿ. ರಾಜೇಗೌಡ ಹಾಗೂ ಧರ್ಮಸ್ಥಳಕ್ಕೆ ಪತ್ರ ಬರೆಯಲಾಗುವುದು. ಶೀಘ್ರದಲ್ಲಿ ರುದ್ರಭೂಮಿ ಅಭಿವೃದ್ಧಿ ಕೆಲಸ ಆರಂಭಿಸಲಾಗುವುದು ಎಂದು ಹೇಳಿದರು.

ಭದ್ರಾವತಿ ಕಾಗದ ಕಾರ್ಖಾನೆಗೆ ಹೊಸ ಕಾಯಕಲ್ಪ; ಸಿಎಂ BSY ಮಹತ್ವದ ನಿರ್ಧಾರ

ಸಮಿತಿ ಖಜಾಂಚಿ ಎಂ.ಜೆ. ಮಹೇಶಾಚಾರ್‌, ಕಾರ್ಯದರ್ಶಿ ಸುನಿಲ್‌ರಾಜ್‌ ಭಂಡಾರಿ, ಸದಸ್ಯರಾದ ಹಿರಿಯಣ್ಣ ಭಂಡಾರಿ, ಬಿ.ಸಿ. ಸಂತೋಷ್‌ಕುಮಾರ್‌, ಅಶೋಕ್‌, ಮಾಗೋಡು ರವಿಗೌಡ, ರಾಮಣ್ಣ ಪೂಜಾರಿ, ಶರಣು, ನಾಗೇಂದ್ರ, ಮುರುಗೇಶ್‌, ನಾಗರಾಜ್‌, ಎಲ್‌.ಪಿ. ಜಗದೀಶ್‌ ಮತ್ತಿತರರಿದ್ದರು.
 

click me!