ವ್ಯಕ್ತಿಯೋರ್ವನನ್ನು ಕೊಲೆ ಮಾಡಿ ಆತನ ಶವವನ್ನು ಟಾಟಾ ಏಸ್ ಡ್ರೈವರ್ ಸೀಟಲ್ಲಿ ಕೂರಿಸಿ ಪರಾರಿಯಾದ ಘಟನೆ ನಡೆದಿದೆ. ರಾತ್ರಿ ಹೇಳಿ ಹೋದವ ಬೆಳಗ್ಗೆಯಷ್ಟರಲ್ಲಿ ಶವವಾದ
ದಾಬಸ್‌ಪೇಟೆ (ನ.24): ದುಷ್ಕರ್ಮಿಗಳು 40 ವರ್ಷದ ವ್ಯಕ್ತಿಯನ್ನು ಕೊಲೆಗೈದು ದೇಹವನ್ನು ಟಾಟಾ ಏಸ್ ವಾಹನದಲ್ಲಿ ಹಾಕಿ ಪರಾರಿಯಾಗಿರುವ ಘಟನೆ ತ್ಯಾಮಗೊಂಡ್ಲು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ತ್ಯಾಮಗೊಂಡ್ಲು ಗಡಿಭಾಗದ ಅಪ್ಪಗೊಂಡನಹಳ್ಲಿ ರಸ್ತೆಯಲ್ಲಿ ಸಾಗುವಾಗ ಟಾಟಾ ಏಸ್ ಗಾಡಿ ರಸ್ತೆಯ ಪಕ್ಕದಲ್ಲಿನ ಜಲ್ಲಿಕಲ್ಲುಗಳ ನಡುವೆ ಸಿಕ್ಕಿ ಹಾಕಿಕೊಂಡ ಪರಿಣಾಮ ದೇಹವನ್ನು ಗಾಡಿಯ ಡ್ರೈವರ್ ಸೀಟ್‌ನಲ್ಲಿ ತುರುಕಿ ಗಾಜಿಗೆ ಕಲ್ಲಿನಿಂದ ಹೊಡೆದು ದುಷ್ಕರ್ಮಿಗಳು ಪರಾರಿಯಾಗಿದ್ದಾರೆ, ರಾಜನಕುಂಟೆ ನಿವಾಸಿ ಬೀರೆಗೌಡ (40) ಕೊಲೆಯಾದ ವ್ಯಕ್ತಿ.
ತರೀಕೆರೆ; ಕಣ್ಣೇದುರಿಗೆ ಗೆಳೆಯ ಮುಳುಗುತ್ತಿದ್ದರೂ ಏನೂ ಮಾಡಲಾಗಲಿಲ್ಲ, ವಿಡಿಯೋ ...
ವ್ಯಕ್ತಿಯ ಗಂಟಲಿನ ಭಾಗಕ್ಕೆ ಮತ್ತು ಹೊಟ್ಟೆಯ ಭಾಗಕ್ಕೆ ಬಲವಾಗಿ ಚಾಕುವಿನಿಂದ ಚುಚ್ಚಿ ಕೊಲೆಗೈದಿರುವುದು ಮೇಲ್ನೋಟಕ್ಕೆ ಕಂಡು ಬಂದಿದ್ದು, ಟಾಟಾ ಏಸ್ ಗಾಡಿಯ ಡ್ರೈವರ್ ಸೀಟಿಗೆ ಕೊಲೆ ಮಾಡಿದ ನಂತರದಲ್ಲಿ ದೇಹವನ್ನು ಕುರಿಸಿ ಪರಾರಿಯಾಗಿದ್ದಾರೆ ಎಂಬುದು ಪ್ರಾಥಮಿಕ ತನಿಖೆಯಲ್ಲಿ ಕಾಣುತ್ತಿದೆ. ರಾಜನಕುಂಟೆ ನಿವಾಸಿಯಾದ ಬೀರೆಗೌಡ 21ರ ಶನಿವಾರ ರಾತ್ರಿ ತುಮಕೂರಿಗೆ ಬಾಡಿಗೆ ಹೋಗಿ ಬರುತ್ತೇನೆ ಎಂದು ಮನೆಯಲ್ಲಿ ತಿಳಿಸಿ ಬಂದವನ್ನು ಭಾನುವಾರ ಬೆಳಗ್ಗೆ ಶವವಾಗಿ ಪತ್ತೆಯಾಗಿರುವುದು ಅನುಮಾನಕ್ಕೆ ಎಡೆಮಾಡಿ ಕೊಟ್ಟಿದೆ.
ಗಡಿ ವಿಚಾರವಾಗಿ ಗೊಂದಲ: ತ್ಯಾಮಗೊಂಡ್ಲು ಪೊಲೀಸ್ ಠಾಣೆ ಮತ್ತು ದೊಡ್ಡಬೆಳವಂಗಲ ಪೊಲೀಸ್ ಠಾಣೆಯ ಗಡಿ ಭಾಗವಾದ್ದರಿಂದ ಯಾರ ಸರಹದ್ದಿಗೆ ಬರುತ್ತದೆ ಎಂದು ತ್ಯಾಮಗೊಂಡ್ಲು ಪಿಎಸ್‌ಐ ವರುಣ್‌ಕುಮಾರ್ ಮತ್ತು ದೊಡ್ಡಬೆಳವಂಗಲ ಪಿಎಸ್‌ಐ ಮಂಜೇಗೌಡರ ನಡುವೆ ಕೆಲಕಾಲ ಗೊಂದಲ ಸೃಷ್ಟಿಯಾಯಿತು. ನಂತರ ಸ್ಥಳಕ್ಕೆ ಬಂದ ಸಿಪಿಐ ಎ. ವಿಕುಮಾರ್ ಅವರು ಸ್ಥಳ ಪರಿಶೀಲನೆಯನ್ನು ನಡೆಸಿ ತ್ಯಾಮಗೊಂಡ್ಲು ಠಾಣಾ ವ್ಯಾಪ್ತಿಯಲ್ಲಿಯೇ ಕಂಡು ಬರುತ್ತದೆ ಇಲ್ಲಿಯೇ ಪ್ರಕರಣವನ್ನು ದಾಖಲು ಮಾಡಿ ಎಂದು ಗೊಂದಲವನ್ನು ಬಗೆಹರಿಸಿದರು.