PC ಜೊತೆ DCP ಸಹಭೋಜನ : ಕಮಿಷನರ್ ಶಹಭಾಸ್‌ ಗಿರಿ !

Published : Sep 15, 2019, 12:22 PM IST
PC ಜೊತೆ DCP ಸಹಭೋಜನ  : ಕಮಿಷನರ್ ಶಹಭಾಸ್‌ ಗಿರಿ  !

ಸಾರಾಂಶ

ಪೊಲೀಸ್‌ ಕಮಿಷನರ್‌ ಮತ್ತು ಪೊಲೀಸ್‌ ಕಾನ್‌ಸ್ಟೇಬಲ್‌ ಇಬ್ಬರೂ ಒಂದೇ. ಇಬ್ಬರು ಕೂಡ ಮಾಡುವ ಕೆಲಸ ಒಂದೇ. ಹಾಗಾಗಿ ಇಬ್ಬರೂ ಸಮಾನರು, ಇವರಿಬ್ಬರಲ್ಲಿ ಯಾವುದೇ ಭೇದ ಇಲ್ಲ.  ಹೀಗಾಗಿ ಒಂದಾಗಿ ಕೆಲಸ ಮಾಡುವಂತೆ ಮಂಗಳೂರು ಪೊಲೀಸ್‌ ಕಮಿಷನರ್‌ ಡಾ.ಪಿ.ಎಸ್‌.ಹರ್ಷ ಕರೆ ನೀಡಿದ ಬೆನ್ನಲ್ಲೇ ಅದು ಸಾಕಾರಗೊಂಡಿದೆ. 

ಮಂಗಳೂರು(ಸೆ.15) : ಪಿಸಿ(ಪೊಲೀಸ್‌ ಕಮಿಷನರ್‌) ಮತ್ತು ಪಿಸಿ(ಪೊಲೀಸ್‌ ಕಾನ್‌ಸ್ಟೇಬಲ್‌) ಇಬ್ಬರೂ ಒಂದೇ. ಇಬ್ಬರು ಕೂಡ ಮಾಡುವ ಕೆಲಸ ಒಂದೇ. ಹಾಗಾಗಿ ಇಬ್ಬರೂ ಸಮಾನರು, ಇವರಿಬ್ಬರಲ್ಲಿ ಯಾವುದೇ ಭೇದ ಇಲ್ಲ. 

ಹೀಗಾಗಿ ಒಂದಾಗಿ ಕೆಲಸ ಮಾಡುವಂತೆ ನಗರ ಪೊಲೀಸ್‌ ಕಮಿಷನರ್‌ ಡಾ.ಪಿ.ಎಸ್‌.ಹರ್ಷ ಅವರು ಶುಕ್ರವಾರ ಪೊಲೀಸ್‌ ಕವಾಯತಿನಲ್ಲಿ ಕರೆ ನೀಡಿದ ಬೆನ್ನಿಗೆ ಮರುದಿನವೇ ಇದನ್ನು ಸಾಕಾರಗೊಳಿಸುವಲ್ಲಿ ಪೊಲೀಸ್‌ ಅಧಿಕಾರಿಗಳು ಮುಂದಡಿ ಇರಿಸಿದ್ದಾರೆ.

ನಗರ ಕಾನೂನು ಹಾಗೂ ಅಪರಾಧ ವಿಭಾಗದ ಡಿಸಿಪಿ ಅರುಣಾಂಗ್ಶು ಗಿರಿ ಅವರು ಶನಿವಾರ ಪೊಲೀಸ್‌ ಕಮಿಷನರೇಟ್‌ ಕಚೇರಿಯ ಹಿಂಭಾಗದಲ್ಲಿರುವ ನಗರದ ಸಿಎಆರ್‌ ಕ್ಯಾಂಟಿನ್‌ಗೆ ತೆರಳಿ ಕಾನ್‌ಸ್ಟೇಬಲ್‌ ಜೊತೆಗೆ ಭೋಜನ ಮಾಡಿ, ಸರಳತೆ ಮೆರೆದರು. ಇದು ಕೇವಲ ಪೊಲೀಸ್‌ ಕಾನ್‌ಸ್ಟೇಬಲ್‌ಗಳಿಗೆ ಸೀಮಿತವಾದ ಕ್ಯಾಂಟಿನ್‌. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಇದೇ ಕ್ಯಾಂಟಿನ್‌ಗೆ ತೆರಳು ಸಹಭೋಜನ ಮಾಡುವ ಮೂಲಕ ಪೊಲೀಸ್‌ ಅಧಿಕಾರಿಯೊಬ್ಬರು ಅಧಿಕಾರಿಗಳೂ ಪೊಲೀಸರೂ ಒಂದೇ ಎಂಬ ಸಂದೇಶ ಸಾರಿದ್ದಾರೆ. ಇದು ಪೊಲೀಸ್‌ ಇಲಾಖೆಯಲ್ಲಿ ಮಹತ್ವದ ಸಂಗತಿಯಾಗಿದೆ ಎಂದು ಟ್ವೀಟ್‌ ಮಾಡಿರುವ ಕಮಿಷನರ್‌ ಡಾ.ಪಿ.ಎಸ್‌.ಹರ್ಷ, ಡಿಸಿಪಿ ನಡವಳಿಕೆಗೆ ಶಹಭಾಸ್‌ ಎಂದಿದ್ದಾರೆ.

PREV
click me!

Recommended Stories

ಬೆಂಗ್ಳೂರಲ್ಲಿ ರಾಜ್ಯದ ಮೊದಲ Gen-Z ಪೋಸ್ಟ್ ಆಫೀಸ್! ಏನಿದರ ವಿಶೇಷತೆ?
BREAKING: ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ಪುತ್ರನ ಕಾರ್ಖಾನೆಗೆ ಮಶಿನ್ ತರುವಾಗ ದುರಂತ; ವಿದ್ಯುತ್ ಸ್ಪರ್ಶಿಸಿ ಯುವಕ ಸಾವು