ಮಮತಾ ಬ್ಯಾನರ್ಜಿ ಅವರದ್ದು ಅಭಿವೃದ್ಧಿ ಶೂನ್ಯ ಸರ್ಕಾರ ಎನ್ನುವುದು ಜನರಿಗೆ ಮನವರಿಕೆ ಆಗಿದೆ| ಈ ಬಾರಿ ಅವರಿಗೆ ಸೋಲು ಖಚಿತ: ಗೋವಿಂದ ಕಾರಜೋಳ|
ವಿಜಯಪುರ(ಮಾ.21): ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಅವರ ಆಡಳಿತವೂ ಶೂನ್ಯ. ಈ ಬಾರಿ ಅಲ್ಲಿ ಬಿಜೆಪಿ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದ್ದಾರೆ.
ಇಂಡಿ ತಾಲೂಕಿನ ಅಥರ್ಗಾ ಗ್ರಾಮದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಮತಾ ಬ್ಯಾನರ್ಜಿ ಅವರದ್ದು ಅಭಿವೃದ್ಧಿ ಶೂನ್ಯ ಸರ್ಕಾರ ಎನ್ನುವುದು ಜನರಿಗೆ ಮನವರಿಕೆ ಆಗಿದೆ. ಮಮತಾ ಬ್ಯಾನರ್ಜಿ ಅವರದ್ದು ಅಭಿವೃದ್ಧಿ ಶೂನ್ಯ ಸರ್ಕಾರ ಎಂದು ತಿಳಿಸಿದ್ದಾರೆ.
ನನ್ನ ಹೋರಾಟ ಕುಟುಂಬ ರಾಜಕಾರಣ, ಭ್ರಷ್ಟಾಚಾರದ ವಿರುದ್ಧ ಮಾತ್ರ: ಯತ್ನಾಳ್
ಎಸ್ಸಿ, ಎಸ್ಟಿ ವರ್ಗದವರ ಕಲ್ಯಾಣಕ್ಕೆ ಮಮತಾ ಬ್ಯಾನರ್ಜಿ ಯಾವುದೇ ಕಾರ್ಯಕ್ರಮ ಹಾಕಿಕೊಳ್ಳದ ಹಿನ್ನೆಲೆ, ಎಸ್ಸಿ, ಎಸ್ಟಿ ವರ್ಗದವರು ಅವರಿಂದ ದೂರಾಗಿದ್ದು, ಈ ಬಾರಿ ಅವರಿಗೆ ಸೋಲು ಖಚಿತವಾಗಿದೆ ಎಂದು ಹೇಳಿದರು.