ಮೂಢನಂಬಿಕೆ ಹೋಗಲಾಡಿಸುವುದು ಅಷ್ಟು ಸುಲಭವಲ್ಲ: ಡಿಸಿಎಂ ಕಾರಜೋಳ

By Suvarna NewsFirst Published Dec 27, 2019, 8:50 AM IST
Highlights

ನಾನು ಯಾವುದೇ ಆಚರಣೆಗಳನ್ನು ಮಾಡುವುದಿಲ್ಲ| ಹಾಗಂತ ಅದನ್ನು ವಿರೋಧಿ​ಸುವುದು ಇಲ್ಲ| ಅದು ಅವರವರ ಮನಸ್ಸಿಗೆ ಬಿಟ್ಟಿದ್ದು| ನಮ್ಮ ಮನೆಯಲ್ಲಿಯೇ ನನ್ನ ಸಹೋದರ, ನನ್ನ ಹೆಂಡತಿ ಮಕ್ಕಳು ಮಾಡುವ ಆಚರಣೆಗಳನ್ನು ನಾನು ವಿರೋ​ಸುವುದಿಲ್ಲ| ಏಕೆಂದರೆ ಅದು ಅವರ ಭಾವನೆಗಳಿಗೆ ಸೇರಿದ್ದು ಎಂದ ಕಾರಜೋಳ|

ಬಾಗಲಕೋಟೆ(ಡಿ.27): ಮೂಢನಂಬಿಕೆ, ಗೊಡ್ಡು ಸಂಪ್ರದಾಯ, ನಮ್ಮ ಸಂಸ್ಕೃತಿಯಲ್ಲಿಯೇ ಬಂದು ಬಿಟ್ಟಿದೆ. ಸಾವಿರಾರು ವರ್ಷಗಳ ಹಿಂದೆ ಇದನ್ನು ನಿವಾರಿಸಲು ಹೋರಾಡಿದ ಬಸವಣ್ಣ, ಆದಿಕವಿ ಪಂಪ, ರನ್ನ, ಜನ್ನರಿಂದಲೂ ಸಾಧ್ಯವಾಗಿಲ್ಲ. ಮೂಢನಂಬಿಕೆಯನ್ನು ಅಷ್ಟು ಸರಳವಾಗಿ ಹೋಗಲಾಡಿಸಲು ಸಾಧ್ಯವೇ ಇಲ್ಲ ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದ್ದಾರೆ.

ಗುರುವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು, ಸೂರ್ಯಗ್ರಹಣದ ಸಮಯದಲ್ಲಿ ಕಲಬುರಗಿ ಜಿಲ್ಲೆಯಲ್ಲಿ ದಿವ್ಯಾಂಗ ಮಕ್ಕಳನ್ನು ಮಣ್ಣಿನಲ್ಲಿ ಹೂತು ಹಾಕಿದ ಪ್ರಕರಣದ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ಮೂಢನಂಬಿಕೆ, ಗೊಡ್ಡು ಸಂಪ್ರದಾಯ ನಮ್ಮ ಸಂಸ್ಕೃತಿಯಲ್ಲಿಯೇ ಬಂದು ಬಿಟ್ಟಿದೆ ಅನ್ನುವ ಮೂಲಕ ಅಚ್ಚರಿ ಮೂಡಿಸಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಸಂಪ್ರದಾಯಗಳನ್ನು ಒಪ್ಪಿಕೊಳ್ಳದ ಬಸವಣ್ಣ ತನ್ನ ಸಮುದಾಯವನ್ನೇ ದಿಕ್ಕರಿಸಿ ಬಂದು ಜೀವನ ಪೂರ್ತಿ ಮೂಢನಂಬಿಕೆಗಳ ವಿರುದ್ಧ ಹೋರಾಟ ಮಾಡಿದ ಪ್ರಸಂಗವನ್ನು ವಿವರಿಸಿದ ಸಚಿವರು, ಬ್ರಾಹ್ಮಣ ಸಮುದಾಯದಲ್ಲಿನ ಸಂಪ್ರದಾಯಗಳನ್ನು ಧಿಕ್ಕರಿಸಲು ಕೊಟ್ಟಕಾರಣ ಕುರಿತು ಬಸವಣ್ಣನವರ ಒಂದು ವಚನವನ್ನು ಉಲ್ಲೇಖರಿಸುವ ಮೂಲಕ ವ್ಯವಸ್ಥೆ ಎತ್ತ ಸಾಗುತ್ತಿದೆ ಎಂಬುದನ್ನು ವಿಶ್ಲೇಷಿಸಿದರು.

ಬಸವಣ್ಣನ ಪೂರ್ವದಲ್ಲಿ ಆದಿಕವಿಗಳಾದ ಪಂಪ, ರನ್ನ, ಜನ್ನನಂತವರು ತಮ್ಮ ಸಾಹಿತ್ಯದ ಮೂಲಕ ಮೂಢÜನಂಬಿಕೆ ವಿರುದ್ಧ ಸಮರ ಸಾರಿದ್ದರು, ಹಳಗನ್ನಡದ ಸಾಹಿತ್ಯದಲ್ಲಿ ಇವುಗಳನ್ನು ಕಾಣಬಹುದಾಗಿದೆ. ಶೋಷಣೆ ವಿರುದ್ಧ ಧ್ವನಿ ಎತ್ತಿದ ಅವರನ್ನು ಸಮಾಜ, ಸಮುದಾಯಗಳು ಅನುಕರಿಸಲಿಲ್ಲ ಎಂದು ವಿಷಾದಿ​ಸಿದರು.

ನಾನು ಯಾವುದೇ ಆಚರಣೆಗಳನ್ನು ಮಾಡುವುದಿಲ್ಲ. ಹಾಗಂತ ಅದನ್ನು ವಿರೋಧಿ​ಸುವುದು ಇಲ್ಲ. ಅದು ಅವರವರ ಮನಸ್ಸಿಗೆ ಬಿಟ್ಟಿದ್ದು, ನಮ್ಮ ಮನೆಯಲ್ಲಿಯೇ ನನ್ನ ಸಹೋದರ, ನನ್ನ ಹೆಂಡತಿ ಮಕ್ಕಳು ಮಾಡುವ ಆಚರಣೆಗಳನ್ನು ನಾನು ವಿರೋ​ಸುವುದಿಲ್ಲ. ಏಕೆಂದರೆ ಅದು ಅವರ ಭಾವನೆಗಳಿಗೆ ಸೇರಿದ್ದು ಎಂದರು.

ಗೊಡ್ಡು ಸಂಪ್ರದಾಯ ಹೋಗಲು 50 ವರ್ಷ ಬೇಕು:

ನಂಬಿಕೆ, ಅಪನಂಬಿಕೆಗಳ ನಡುವೆ ಬದುಕುತ್ತಿರುವ ಈ ನಾಡಿನಲ್ಲಿ ಮೂಢನಂಬಿಕೆಯಂತಹ ಅನಿಷ್ಟಪರಂಪರೆಗೆ ಕೊನೆ ಬೀಳಲು ಇನ್ನು ಕನಿಷ್ಠ 50 ವರ್ಷಗಳಾದರೂ ಬೇಕಾಗಬಹುದು ಎಂದು ಹೇಳಿದ ಗೋವಿಂದ ಕಾರಜೋಳ, ಬದುಕಿನಲ್ಲಿ ಹಾಸುಹೊಕ್ಕಾಗಿರುವ ಮೂಢÜನಂಬಿಕೆಯನ್ನು ಅಳಿಸಬೇಕಾದರೆ ನೂರಕ್ಕೆ ನೂರರಷ್ಟುಶಿಕ್ಷಣ ಸಿಕ್ಕಾಗ ಹಾಗೂ ಹೊಸ ವ್ಯವಸ್ಥೆಗೆ ಹೊಂದಿಕೊಂಡಾಗ ಮಾತ್ರ ಸಾಧ್ಯವಾಗಬಹುದೇನೊ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಗ್ರಹಣ ಕಾರಣಕ್ಕೆ ನನ್ನ ಸಭೆ ಮುಂದೂಡಿಕೆ :

ಇಂದು ಬೆಂಗಳೂರಿನಲ್ಲಿ ಇಲಾಖೆಗೆ ಸಂಬಂಧಿ​ಸಿದಂತೆ ನನ್ನ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆ ನಡೆಯಬೇಕಿತ್ತು. ಆದರೆ ಹಿರಿಯ ಅಧಿ​ಕಾರಿ ವರ್ಗ, ಅಮವಾಸೆ ಹಾಗೂ ಸೂರ್ಯಗ್ರಹಣ ಕಾರಣಕ್ಕೆ ಸಭೆ ಬೇಡ ಎಂದು ಹಾಗೂ ತಮ್ಮ ವೈಯಕ್ತಿಕ ನಂಬಿಕೆಗಳ ಕಾರಣ ನೀಡಿ ಸಭೆ ಮುಂದೂಡಿ ಎಂದು ಸಲಹೆ ನೀಡಿದರು. 

ನಾನು ಇಂತಹವುಗಳನ್ನು ನಂಬುವುದಿಲ್ಲ. ಆದರೆ ಇತರರ ಭಾವನೆಗಳಿಗೆ ಘಾಸಿಗೊಳಿಸುವುದು ಬೇಡ ಎಂದು ಸಭೆ ಮುಂದೂಡಿದೆ. ಜ.2ರಂದು ಸಭೆ ನಿಗದಿ ಪಡಿಸಿದ್ದು ಆದರೆ ಅಂದು ಪ್ರಧಾನಿ ನರೇಂದ್ರ ರಾಜ್ಯಕ್ಕೆ ಭೇಟಿ ನೀಡುವುದರಿಂದ ಸಭೆಯನ್ನು ಜ.3ರಕ್ಕೆ ಮುಂದೂಡಿದೆ ಎಂದು ಅಸಹಾಯಕತೆಯನ್ನು ವ್ಯಕ್ತಪಡಿಸುವ ಮೂಲಕ ಸಮಾಜದಲ್ಲಿನ ಮೂಢನಂಬಿಕೆ ಹಾಗೂ ಸಂಪ್ರದಾಯಗಳನ್ನು ಒಪ್ಪಿಕೊಂಡ ರೀತಿಯನ್ನು ಸಮರ್ಥಿಸಿಕೊಂಡರು.
 

click me!