ಬಾಗಲಕೋಟೆ ಜಿಲ್ಲೆಯ ಮೂಲ ಸೌಕರ್ಯಕ್ಕೆ 55 ಕೋಟಿ ಬಳಕೆ: ಕಾರಜೋಳ

By Suvarna NewsFirst Published Dec 27, 2019, 8:37 AM IST
Highlights

ಖನಿಜ ಉತ್ಪಾದಿಸುವ ಪ್ರದೇಶಗಳ ವ್ಯಾಪ್ತಿಯ ಗ್ರಾಮಗಳಲ್ಲಿ ವಿವಿಧ ಮೂಲಭೂತ ಅಭಿವೃದ್ಧಿಗಾಗಿ 55 ಕೋಟಿ| ಜಿಲ್ಲೆಯಲ್ಲಿ ವಿವಿಧ ಖನಿಜಗಳ ಉತ್ಪಾದನೆಗಾಗಿ ಒಟ್ಟು 55 ಕೋಟಿ ಕರ ಸಂಗ್ರಹ| ಈ ಅನುದಾನವನ್ನು ಜಿಲ್ಲೆಯ ಎಲ್ಲ ಮತಕ್ಷೇತ್ರಗಳ ಖನಿಜ ಉತ್ಪಾದಿಸುವ ಗ್ರಾಮಗಳ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಬಳಸಲಾಗುವುದು ಎಂದ ಕಾರಜೋಳ|

ಬಾಗಲಕೋಟೆ(ಡಿ.27): ಜಿಲ್ಲೆಯಲ್ಲಿ ಖನಿಜ ಉತ್ಪಾದಿಸುವ ಪ್ರದೇಶಗಳ ವ್ಯಾಪ್ತಿಯ ಗ್ರಾಮಗಳಲ್ಲಿ ವಿವಿಧ ಮೂಲಭೂತ ಅಭಿವೃದ್ಧಿಗಾಗಿ 55 ಕೋಟಿ ಡಿ.ಎಂ.ಎಫ್‌ (ಜಿಲ್ಲಾ ಖನಿಜ ಪ್ರತಿಷ್ಠಾನ) ಹಣವನ್ನು ಉಪಯೋಗಿಸಲಾಗುವುದು ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ತಿಳಿಸಿದ್ದಾರೆ.

ಜಿಲ್ಲಾಧಿ​ಕಾರಿಗಳ ಕಚೇರಿಯಲ್ಲಿ ಗುರುವಾರ ಜರುಗಿದ ಡಿಎಂಎ ಸಭೆಯ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು, ಜಿಲ್ಲೆಯಲ್ಲಿ ವಿವಿಧ ಖನಿಜಗಳ ಉತ್ಪಾದನೆಗಾಗಿ ಒಟ್ಟು 55 ಕೋಟಿ ಕರ ಸಂಗ್ರಹವಾಗಿದ್ದು, ಈ ಅನುದಾನವನ್ನು ಜಿಲ್ಲೆಯ ಎಲ್ಲ ಮತಕ್ಷೇತ್ರಗಳ ಖನಿಜ ಉತ್ಪಾದಿಸುವ ಗ್ರಾಮಗಳ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಬಳಸಲಾಗುವುದು ಎಂದು ತಿಳಿಸಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಈ ಕರದಲ್ಲಿ ಈಗಾಗಲೇ 7 ಕೋಟಿ ಖರ್ಚಾಗಿದ್ದು, ಉಳಿದ ಹಣವನ್ನು ಬಳಕೆ ಮಾಡಲಾಗುವುದು. ಬಾದಾಮಿ ತಾಲೂಕಿನಲ್ಲಿ 1.67ಕೋಟಿ, ಬಾಗಲಕೋಟೆಯಲ್ಲಿ 1.55 ಕೋಟಿ, ಬೀಳಗಿಯಲ್ಲಿ 32 ಲಕ್ಷ, ಹುನಗುಂದ 13.83 ಕೋಟಿ, ಜಮಖಂಡಿ 8 ಕೋಟಿ, ಮುಧೋಳದಲ್ಲಿ 35 ಕೋಟಿ ಹಾಗೂ ತೇರದಾಳದಲ್ಲಿ 7 ಲಕ್ಷ ಸಂಗ್ರಹವಾಗಿದೆ. ಈ ಅನುದಾನವನ್ನು ಗ್ರಾಮಗಳ ರಸ್ತೆ, ಚರಂಡಿ, ನೀರು, ಶಾಲೆಗಳಲ್ಲಿ ಸ್ಮಾರ್ಟ್‌ ಕ್ಲಾಸ್‌ ಮುಂತಾದವುಗಳಿಗೆ ಬಳಸಲಾಗುವುದು. ದೇವಸ್ಥಾನ ಕಟ್ಟಡ ಮಾರ್ಗಸೂಚಿಯಡಿ ಅವಕಾಶವಿಲ್ಲವೆಂದು ಸಚಿವರು ತಿಳಿಸಿದರು.

ಜಿಲ್ಲಾ ಖನಿಜ ಪ್ರತಿಷ್ಠಾನದ ಹಣದಲ್ಲಿನ ಕಾಮಗಾರಿಗಳು ಸಾರ್ವಜನಿಕ ಶಾಶ್ವತ ಆಸ್ತಿಗಳಂತೆ ನಿರ್ಮಾಣವಾಗಬೇಕು. ಅಗತ್ಯ ಮೂಲಭೂತ ಸೌಕರ್ಯಗಳನ್ನು ನೀಡುವಾಗ ಎಚ್ಚರಿಕೆಯಿಂದ ಕಾಮಗಾರಿಗಳನ್ನು ಪೂರ್ಣಗೊಳಿಸಲು ಅ​ಧಿಕಾರಿಗಳಿಗೆ ಸೂಚಿಸಲಾಗಿದೆ. ವಿಶೇಷವಾಗಿ ಗಣಿಗಾರಿಕೆ ಪ್ರದೇಶದಲ್ಲಿನ ಅಭಿವೃದ್ಧಿಗೆ ಶೇ.60ರಷ್ಟುಇನ್ನೂಳಿದ 40ರಷ್ಟುಹಣವನ್ನು ಬೇರೆ ಪ್ರದೇಶದ ಅಭಿವೃದ್ಧಿಗೆ ಬಳಿಸಲು ಅವಕಾಶವಿದೆ ಎಂದು ಹೇಳಿದರು.

ಕಾಮಗಾರಿಗಳ ಅನುಷ್ಠಾನಕ್ಕೆ ಕ್ರಿಯಾಯೋಜನೆ ಸಿದ್ಧಪಡಿಸಲು ಅಧಿ​ಕಾರಿಗಳಿಗೆ ಸೂಚಿಸಲಾಗಿದೆ. ಲೋಕೋಪಯೋಗಿ, ಜಿಲ್ಲಾ ಪಂಚಾಯ್ತಿನ ಎಂಜಿನಿಯರಿಂಗ್‌ ವಿಭಾಗ, ನಿರ್ಮಿತಿ ಕೇಂದ್ರ ಸೇರಿದಂತೆ ವಿವಿಧ ಇಲಾಖೆಗಳ ಮೂಲಕ ಕೆಲಸ ಕಾರ್ಯಗಳು ನಡೆಯಲಿವೆ ಎಂದು ವಿವರಿಸಿದರು.

ಸಭೆಯಲ್ಲಿ ಸಂಸದರಾದ ಪಿ.ಸಿ ಗದ್ದಿಗೌಡರ. ಜಿಲ್ಲಾ​ಕಾರಿ ಕ್ಯಾಪ್ಟನ್‌ ಡಾ.ಕೆ. ರಾಜೇಂದ್ರ. ಎಸ್ಪಿ ಲೋಕೇಶ ಜಗಲಾಸರ ಸೇರಿದಂತೆ ಗಣಿ ಇಲಾಖೆ ಮತ್ತು ತೋಟಗಾರಿಕಾ ಇಲಾಖೆ ಅ​ಕಾರಿಗಳು ಉಪಸ್ಥಿತರಿದ್ದರು.

ಸ್ಥಳಾಂತರಕ್ಕೆ ಕಾಯ್ದು ಬೇಡ

ಜಿಲ್ಲೆಯ ಐತಿಹಾಸಿಕ ಹಾಗೂ ಪಾರಂಪರಿಕ ತಾಣಗಳಾದ ಐಹೊಳೆ, ಪಟ್ಟದಕಲ್ಲು ದೇವಾಲಯ ಸಮುಚ್ಚಯದಲ್ಲಿನ ಜನ ವಸತಿಯನ್ನು ಸ್ಥಳಾಂತರಿಸುವುದು ನಿಶ್ವಿತ ಅದರಲ್ಲಿ ಅನುಮಾನ ಬೇಡ ಎಂದ ಉಪಮುಖ್ಯಮಂತ್ರಿಗಳು ಅದಕ್ಕೆ ಒಂದೆರಡು ವರ್ಷ ಕಾಲಾವಕಾಶ ಬೇಕಾಗುತ್ತದೆ ಎಂದರು.

ಸದ್ಯ ಪ್ರವಾಹ ಸಂದರ್ಭದಲ್ಲಿ ಹಾನಿಗೀಡಾದ ಮನೆಗಳ ದುರಸ್ತಿ ಹಾಗೂ ಹೊಸ ಮನೆಗಳ ನಿರ್ಮಾಣಕ್ಕೆ ಜಿಲ್ಲಾಡಳಿತ ಹಣ ಬಿಡುಗಡೆ ಮಾಡಿದೆ. ಅದನ್ನು ಬಳಸಿಕೊಂಡು ಮನೆ ದುರಸ್ತಿಯನ್ನು ಪಟ್ಟದಕಲ್ಲ ಗ್ರಾಮಸ್ಥರು ಮಾಡಿಕೊಳ್ಳಲಿ ಅದು ಸದ್ಯದ ಅಗತ್ಯವು ಕೂಡಾ, ಹೀಗಾಗಿ ಸ್ಥಳಾಂತರ ಪ್ರಕ್ರಿಯೆವರೆಗೆ ಕಾಯುವುದು ಬೇಡ ಎಂದು ತಿಳಿಸಿದರು.

ಮಾರ್ಚ್ ವೇಳೆಗೆ ಹೆರಕಲ್‌ ನೀರು:

ಶಾಸಕ ವೀರಣ್ಣ ಚರಂತಿಮಠ ಮಾತನಾಡಿ, ಬಾಗಲಕೋಟೆ ನಗರಕ್ಕೆ 24‍‍‍X7 ನಿರಂತರ ಕುಡಿಯುವ ನೀರು ಸರಬರಾಜಿಗೆ 60ಕೋಟಿ ರು.ಗಳ ಹೆರಕಲ್‌ ಯೋಜನೆಯನ್ನು ಇದೇ ಮಾಚ್‌ರ್‍ ಒಳಗಾಗಿ ಪೂರ್ಣಗೊಳಿಸಲಾಗುವುದು. ಬರುವ ಏಪ್ರಿಲ್‌ ಮೊದಲವಾರದಿಂದ ನೀರು ಸರಬರಾಜು ಮಾಡಲಾಗುವುದು. ಈಗಾಗಲೇ ಅರಣ್ಯ ಇಲಾಖೆಯವರ ಅನುಮತಿಯೂ ದೊರಕಿದೆ ಎಂದು ತಿಳಿಸಿದರು.
 

click me!