ಡ್ರಗ್ಸ್ ವಿವಾದದಲ್ಲಿ ಸಿಲುಕಿದವರ ಮೇಲೆ ಕ್ರಮ ಶುರುವಾಗಿದೆ, ತನಿಖೆ ಮುಗಿಯೋವರೆಗೆ ನಾವೇನು ಹೇಳೋಕೆ ಆಗೋದಿಲ್ಲ. ತನಿಖೆ ಮುಗಿಯೋವರೆಗೂ ವಿಷಯವನ್ನು ಗೌಪ್ಯ ಇಡಲಾಗುತ್ತದೆ| ಕೋರ್ಟ್‌ಗೆ ಚಾರ್ಜ್‌ಶೀಟ್ ಸಲ್ಲಿಸುವ ಮುನ್ನ ಎಲ್ಲರಿಗೂ ಮಾಹಿತಿ ನೀಡುವ ವ್ಯವಸ್ಥೆ ಮಾಡುತ್ತೇವೆ| ಇದು ಕೇವಲ ಕಾನೂನಿನಿಂದ ಬಗೆ ಹರಿಯುವ ಸಮಸ್ಯೆ ಅಲ್ಲ, ಜನರಿಗೆ ಈ ಬಗ್ಗೆ ತಿಳುವಳಿಕೆ ಬರಬೇಕು: ಕಾರಜೋಳ|
ಬಾಗಲಕೋಟೆ(ಸೆ.05): ರಾಜಕಾರಣಿ ಮಕ್ಕಳಿರಲಿ, ಯಾವುದೇ ಪ್ರಭಾವಿ ಮಕ್ಕಳಿರಲಿ, ಅಧಿಕಾರಿಗಳ ಮಕ್ಕಳಿರಲಿ ಎಲ್ಲರಿಗೂ ದೇಶದ ಕಾನೂನು ಒಂದೇಯಾಗಿದೆ. ಡ್ರಗ್ಸ್ ದಂಧೆಯಲ್ಲಿ ಸಿಲುಕಿದವರ ಮೇಲೆ ಕ್ರಮ ಶುರುವಾಗಿದೆ, ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದ್ದಾರೆ.
ಸ್ಯಾಂಡಲ್‌ವುಡ್ ನಟಿ ರಾಗಿಣಿ ದ್ವಿವೇದಿ ಬಿಜೆಪಿ ಪಕ್ಷದಲ್ಲಿ ಗುರುತಿಸಿಕೊಂಡ ವಿಚಾರದ ಬಗ್ಗೆ ಇಂದು(ಶನಿವಾರ) ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಗಿಣಿ ಪಾಗಿಣಿ ಗೊತ್ತಿಲ್ಲ. ಯಾರೇ ತಪ್ಪು ಮಾಡಿದ್ರೂ ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ.
ಡ್ರಗ್ಸ್ ವಿವಾದದಲ್ಲಿ ಸಿಲುಕಿದವರ ಮೇಲೆ ಕ್ರಮ ಶುರುವಾಗಿದೆ, ತನಿಖೆ ಮುಗಿಯೋವರೆಗೆ ನಾವೇನು ಹೇಳೋಕೆ ಆಗೋದಿಲ್ಲ. ತನಿಖೆ ಮುಗಿಯೋವರೆಗೂ ವಿಷಯವನ್ನು ಗೌಪ್ಯ ಇಡಲಾಗುತ್ತದೆ. ಕೋರ್ಟ್‌ಗೆ ಚಾರ್ಜ್‌ಶೀಟ್ ಸಲ್ಲಿಸುವ ಮುನ್ನ ಎಲ್ಲರಿಗೂ ಮಾಹಿತಿ ನೀಡುವ ವ್ಯವಸ್ಥೆ ಮಾಡುತ್ತೇವೆ. ಇದು ಕೇವಲ ಕಾನೂನಿನಿಂದ ಬಗೆ ಹರಿಯುವ ಸಮಸ್ಯೆ ಅಲ್ಲ, ಜನರಿಗೆ ಈ ಬಗ್ಗೆ ತಿಳುವಳಿಕೆ ಬರಬೇಕು ಎಂದು ಹೇಳೀದ್ದಾರೆ. ಪ್ರಕರಣ ಸಂಬಂಧ ತನಿಖೆ ನಡೆಯುತ್ತಿದೆ, ಗೌಪ್ಯತೆ ಕಾಪಾಡಬೇಕಾಗುತ್ತೆ. ಇದು ಕಾನೂನಿನಿಂದ ಬಗೆಹರಿವಂತದಲ್ಲ. ಇಂತಹ ಚಟುವಟಿಕೆಗಳಿಂದ ಜೀವಕ್ಕೆ ಕುತ್ತು ಬರುತ್ತೆದೆ. ಈ ರೀತಿ ನಡೆಯದಂತೆ ಇಡೀ ಸಮಾಜ ಎಚ್ಚರವಹಿಸಬೇಕು ಎಂದು ತಿಳಿಸಿದ್ದಾರೆ.
ರಾಗಿಣಿ ಮನೆಯಲ್ಲಿ ಸಿಸಿಬಿ ವಶಪಡಿಸಿಕೊಂಡ ಆರ್ಗಾನಿಕ್ ಸಿಗರೇಟ್‌ನಲ್ಲಿತ್ತಾ ಡ್ರಗ್?
ಸರ್ಕಾರವನ್ನ ಕೆಡವಲು ಡ್ರಗ್ಸ್ ಮಾಫಿಯಾವನ್ನ ಬಳಕೆ ಮಾಡಲಾಗುತ್ತುದೆ ಎಂದು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಅವರ ಆರೋಪದಲ್ಲಿ ಸತ್ಯಾಂಶ ಇಲ್ಲ. ಕೇವಲ ರಾಜಕೀಯ ಪ್ರೇರಿತ ಆರೋಪವಾಗಿದೆ. ಹೆಚ್‌ಡಿಕೆ ಹೇಳಿಕೆಯನ್ನ ಗಂಭೀರವಾಗಿ ಪರಿಗಣಿಸುವ ಅಗತ್ಯವಿಲ್ಲ ಎಂದಿದ್ದಾರೆ.
ಸಚಿವರ ಖಾತೆ ಬದಲಾವಣೆ ವಿಚಾರದ ಬಗ್ಗೆ ಮಾತನಾಡಿದ ಗೋವಿಂದ ಕಾರಜೋಳ, ಈ ಬಗ್ಗೆ ಯಾವುದೇ ಮಾತುಕತೆಯಾಗಿಲ್ಲ. ಅಂತಹ ವಿಚಾರ ಪಕ್ಷದ ಹಿರಿಯರು, ಮುಖ್ಯಮಂತ್ರಿಯವರ ಮುಂದೆ ಇಲ್ಲವೇ ಇಲ್ಲ. ಇದೆಲ್ಲ ಬರೀ ಗಾಳಿ ಸುದ್ದಿಯಾಗಿದೆ. ಇದಕ್ಕೆ ಹೆಚ್ಚು ಬೆಲೆ ಕೊಡುವ ಅಗತ್ಯವಿಲ್ಲ. ಸಚಿವ ಸಂಪುಟ ವಿಸ್ತರಣೆ ಮಾಡುವ ಮುನ್ನ ಆಮಂತ್ರಣ ಪತ್ರಿಕೆ ಮುದ್ರಿಸುತ್ತೇವೆ. ಮಾಧ್ಯಮದವರಿಗೂ ಕೊಡುತ್ತೇವೆ ಎಂದು ತಿಳಿಸಿದ್ದಾರೆ.