ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೇರಲು ಕಾಂಗ್ರೆಸ್ ಹಗಲುಗಣಸು ಕಾಣುತ್ತಿದೆ| ಕಾಂಗ್ರೆಸ್ ನ ಓಟ್ ಬ್ಯಾಂಕ್ ದಲಿತರು ಈಗ ಬಿಜೆಪಿ ಪಕ್ಷಕ್ಕೆ ಬಂದಿದ್ದಾರೆ ಎಂದ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ| ಬಿಜೆಪಿ ಹೋರಿ ಇದ್ದ ಹಾಗೆ ಹಾಗೂ ಕಾಂಗ್ರೆಸ್ ಅನ್ನ ನರಿ ಇದ್ದಂಗೆ|
ಬಳ್ಳಾರಿ(30): ಕಾಂಗ್ರೆಸ್ ನವರು ಕನಸು ನರಿ ಹೋರಿಯನ್ನ ಬೆನ್ನಟ್ಟಿದ ಹಾಗೆ ಆಗಿದೆ, ಯಾರು ಏನೇ ಮಾಡಿದ್ರು ಬಿ.ಎಸ್. ಯಡಿಯೂರಪ್ಪ ಅವರು ಇನ್ನೂ ಮೂರುವರೆ ವರ್ಷ ಸಿಎಂ ಆಗಿರುತ್ತಾರೆ. ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೇರಲು ಕಾಂಗ್ರೆಸ್ ನವರು ಹಗಲುಗಣಸು ಕಾಣುತ್ತಿದ್ದಾರೆ. ಕಾಂಗ್ರೆಸ್ ನ ಓಟ್ ಬ್ಯಾಂಕ್ ದಲಿತರು ಈಗ ಬಿಜೆಪಿ ಪಕ್ಷಕ್ಕೆ ಬಂದಿದ್ದಾರೆ ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರು ಹೇಳಿದ್ದಾರೆ.
ಶನಿವಾರ ಜಿಲ್ಲೆಯ ಹೊಸಪೇಟೆಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಬಿಜೆಪಿ ಹೋರಿ ಇದ್ದ ಹಾಗೆ ಹಾಗೂ ಕಾಂಗ್ರೆಸ್ ಅನ್ನ ನರಿ ಇದ್ದಂಗೆ, ಮುಂದೆ ಕಾಂಗ್ರೆಸ್ ಪಕ್ಷದಲ್ಲಿ ದೀಪ ಹಚ್ಚಲು ನಾಯಕರು ಇರೋದಿಲ್ಲ, ಕಾಂಗ್ರೆಸ್ ನಾಯಕರನ್ನು ಅವರ ಪಕ್ಷದವರೇ ಸೋಲಿಸಿದ್ದಾರೆ. ಪರಮೇಶ್ವರ್ ಅವರನ್ನ ಸಿಎಂ ಮಾಡಲಿಲ್ಲ.. ಮುನಿಯಪ್ಪ ಅವರನ್ನು 2018ರಲ್ಲಿ ಬಹಿರಂಗವಾಗಿ ಸೋಲಿಸಿದರು ಎಂದು ಹೇಳಿದ್ದಾರೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಈಗಾಗಲೇ ಬಿಜೆಪಿ- ಜೆಡಿಎಸ್ ಮದುವೆ ಮಾಡಿಕೊಂಡು ಸೋಡಾ ಚೀಟಿ ಕೊಟ್ಟಿದ್ದಾರೆ. ಸೋಡಾ ಚೀಟಿ ಅಂದ್ರೆ ನಿಮಗೆ ಗೊತ್ತಲ್ವಾ? ಅವರು ಮತ್ಯಾಕೆ ಸರ್ಕಾರ ರಚನೆ ಮಾಡೋಕೆ ಬರ್ತಾರೆ? ಸಿದ್ದರಾಮಯ್ಯ ಹಗಲು ಕನಸು ಕಾಣುತ್ತಿದ್ದಾರೆ ಎಂದು ಕಾರಜೋಳ ಅವರು ವ್ಯಂಗ್ಯವಾಡಿದ್ದಾರೆ.
ಹನಿ ಟ್ರ್ಯಾಪ್ ಕುರಿತು ಪತ್ರಕರ್ತರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ ಕಾರಜೋಳ ಅವರು, ಆ ಊರು ಕಡೆ ನಾವು ಹೋಗೋರಲ್ಲ, ಅದರ ಬಗ್ಗೆ ನನಗೆ ಗೊತ್ತಿಲ್ಲ ಎಂದು ಹೇಳಿದ್ದಾರೆ.
ಡಿಸೆಂಬರ್ 5ರಂದು ಕರ್ನಾಟಕದಲ್ಲಿ 15 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದ್ದು, 9ರಂದು ಫಲಿತಾಂಶ ಪ್ರಕಟವಾಗಲಿದೆ.