ದುಷ್ಕರ್ಮಿಗಳಿಂದ ವಿಷಪೂರಿತ ದ್ರವ್ಯ ಸಿಂಪರಣೆ: ವೃದ್ಧೆ ಸಾವು

Kannadaprabha News   | Asianet News
Published : Feb 15, 2021, 01:12 PM ISTUpdated : Feb 15, 2021, 01:20 PM IST
ದುಷ್ಕರ್ಮಿಗಳಿಂದ ವಿಷಪೂರಿತ ದ್ರವ್ಯ ಸಿಂಪರಣೆ: ವೃದ್ಧೆ ಸಾವು

ಸಾರಾಂಶ

ಬಾಗಲಕೋಟೆ ಎಂಜಿ ರಸ್ತೆ ಬಳಿಯ ನಿವಾಸಿ ಯಶೋಧಾಬಾಯಿ ಮೃತ ವೃದ್ಧೆ| ಬಾಗಲಕೋಟೆಯಿಂದ ಮುಂಬೈ ರೈಲಿನಲ್ಲಿ ಹೊರಟ್ಟಿದ್ದ ದಂಪತಿ| ಬಾತ್‌ರೂಮ್‌ಗೆ ಹೋಗಿ ಬರುವಾಗ ವಿಪಷಪೂರಿತ ದ್ರವ್ಯ ಸಿಂಪಡಿಸಿದ ದುಷ್ಕರ್ಮಿಗಳು| 

ಬಾಗಲಕೋಟೆ(ಫೆ.15): ಸೊಲ್ಲಾಪುರದ ಬಳಿ ರೈಲಿನಲ್ಲಿ ಬಾಗಲಕೋಟೆ ಮೂಲದ ವೃದ್ಧೆ ಮೃತಪಟ್ಟಿದ್ದು, ದುಷ್ಕರ್ಮಿಗಳು ವಿಷಪೂರಿತ ದ್ರವ್ಯ ಸಿಂಪಡಿಸಿದ್ದರಿಂದ ಈ ಸಾವು ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ.

ಬಾಗಲಕೋಟೆ ಎಂಜಿ ರಸ್ತೆ ಬಳಿಯ ನಿವಾಸಿ ಯಶೋಧಾಬಾಯಿ (64) ಮೃತ ವೃದ್ಧೆ. ಭಾನುವಾರ ಮಧ್ಯಾಹ್ನ ಬಾಗಲಕೋಟೆಯಿಂದ ಮುಂಬೈ ರೈಲಿನಲ್ಲಿ ಯಶೋಧಾಬಾಯಿ ದಂಪತಿ ಮಹಾರಾಷ್ಟ್ರದ ಜಲಗಾಂವಗೆ ಸಂಬಂಧಿಕರ ಮನೆಯ ಕಾರ್ಯಕ್ರಮದಲ್ಲಿ ಭಾಗವಹಿಸಲು ಹೊರಟಿತ್ತು.

ಈತ ಪ್ರೇಮದ 'ಪೂಜಾ'ರಿ : ಅವಳಿಗಾಗಿ ಎಸ್ಪಿ ಕಚೇರಿ ಮೆಟ್ಟಿಲೇರಿದ

ಹುಟಗಿ ದಾಟಿದ ಬಳಿಕ ಬಾತ್‌ರೂಮ್‌ಗೆ ಹೋಗಿ ಬರುವಾಗ ಯಾರೋ ದುಷ್ಕರ್ಮಿಗಳು ವಿಪಷಪೂರಿತ ದ್ರವ್ಯ ಸಿಂಪಡಿಸಿದ್ದಾರೆ. ಇದರಿಂದ ತೀವ್ರ ಅಸ್ವಸ್ಥರಾದ ವೃದ್ಧೆ ಮಲಗಿದ್ದ ಪತಿಯನ್ನು ಎಬ್ಬಿಸಿ ಆ ಜಾಗದಲ್ಲಿ ಮಲಗಿದ್ದಾರೆ. ಸ್ವಲ್ಪ ಹೊತ್ತಿನಲ್ಲಿ ಪತಿ ಶಾಮಸುಂದರ ಪತ್ನಿಯನ್ನು ಎಬ್ಬಿಸಿದರೆ ಆಕೆ ಎದ್ದಿಲ್ಲ. ತಕ್ಷಣ ಆಸ್ಪತ್ರೆಗೆ ದಾಖಲಿಸಿದರೂ ಜೀವ ಉಳಿದಿಲ್ಲ. ಸೊಲ್ಲಾಪುರದಲ್ಲಿ ಮರಣೋತ್ತರ ಪರೀಕ್ಷೆ ಬಳಿಕ ಮೃತ ಶರೀರವನ್ನು ಬಾಗಲಕೋಟೆಗೆ ತಂದು ಭಾನುವಾರ ರಾತ್ರಿಯೇ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು ಎಂದು ತಿಳಿದು ಬಂದಿದೆ.
 

PREV
click me!

Recommended Stories

ಉಳಿ ಪೆಟ್ಟು ಬಿದ್ದಾಗಲಷ್ಟೇ ಶಿಲೆಆಗುತ್ತದೆ ಕಲ್ಲು: ಡಿಕೆ ಹಿತನುಡಿ
ಬೆಂಗಳೂರು ನಗರದಲ್ಲಿ ಮತ್ತೆ 150 ಇಂಡಿಗೋ ವಿಮಾನಗಳ ಸಂಚಾರ ರದ್ದು