DK Shivakumar Raichur visit Today: ಇಂದು ರಾಯಚೂರಿಗೆ ಡಿಸಿಎಂ ಡಿಕೆಶಿ ಸೇರಿ ‘ಕೈ’ ನಾಯಕರ ದಂಡು!

Published : May 10, 2026, 07:36 AM IST
DCM DK Shivakumar and Congress Leaders Team Visit Raichur Today

ಸಾರಾಂಶ

ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ರಾಯಚೂರು ಜಿಲ್ಲೆಯ ಮುದಗಲ್ ಪಟ್ಟಣಕ್ಕೆ ವಿಶೇಷ ಹೆಲಿಕಾಪ್ಟರ್ ಮೂಲಕ ಆಗಮಿಸಲಿದ್ದಾರೆ. ಅವರು ಲಿಂಗಸೂಗೂರು ಮಾಜಿ ಶಾಸಕರ ಪುತ್ರಿಯ ವಿವಾಹ ಮಹೋತ್ಸವದಲ್ಲಿ ಪಾಲ್ಗೊಳ್ಳಲಿದ್ದು, ಸಚಿವರು ಹಾಗೂ ಶಾಸಕರ ದಂಡೇ ಈ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದೆ.

ರಾಯಚೂರು (ಮೇ.10): ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಇಂದು ರಾಯಚೂರು ಜಿಲ್ಲೆಗೆ ಭೇಟಿ ನೀಡುತ್ತಿದ್ದಾರೆ. ಲಿಂಗಸೂಗೂರು ತಾಲೂಕಿನ ಮುದಗಲ್ ಪಟ್ಟಣದಲ್ಲಿ ಇಂದು ಡಿಕೆ ಶಿವಕುಮಾರ ವಿಶೇಷ ಹೆಲಿಕಾಪ್ಟರ್‌ನಲ್ಲಿ ಆಗಮಿಸಲಿದ್ದಾರೆ.

ಬೆಂಗಳೂರಿನಿಂದ ವಿಶೇಷ ಹೆಲಿಕಾಪ್ಟರ್ ಮೂಲಕ ಪ್ರಯಾಣಿಸಲಿರುವ ಡಿ.ಕೆ. ಶಿವಕುಮಾರ್ ಅವರು, ಇಂದು ಬೆಳಿಗ್ಗೆ ಸರಿಯಾಗಿ 10:30 ಗಂಟೆಗೆ ಮುದಗಲ್ ಪಟ್ಟಣಕ್ಕೆ ಬಂದಿಳಿಯಲಿದ್ದಾರೆ.

ಇದನ್ನೂ ಓದಿ; Karnataka News Live: ಚಿಕಿತ್ಸೆ ಫಲಕಾರಿಯಾಗದೇ ನಿಧನ; ಡಿ.ಸುಧಾಕರ್ ಅವರಿಗೆ ಆಗಿದ್ದೇನು? ಇಲ್ಲಿದೆ ಮಾಹಿತಿ

ಲಿಂಗಸೂಗೂರು ಮಾಜಿ ಶಾಸಕರ ಪುತ್ರಿಯ ಅದ್ದೂರಿ ಮದುವೆ

ಲಿಂಗಸೂಗೂರು ಕ್ಷೇತ್ರದ ಮಾಜಿ ಶಾಸಕರ ಪುತ್ರಿಯ ಅದ್ಧೂರಿ ವಿವಾಹ ಮಹೋತ್ಸವ ಏರ್ಪಡಿಸಲಾಗಿದೆ. ಈ ಶುಭ ಸಮಾರಂಭದಲ್ಲಿ ಪಾಲ್ಗೊಂಡು ನವಜೋಡಿಗೆ ಶುಭ ಹಾರೈಸಲು ಡಿಸಿಎಂ ಆಗಮಿಸುತ್ತಿದ್ದಾರೆ.

ಸಚಿವ-ಶಾಸಕರ ದಂಡು

ಡಿಕೆ ಶಿವಕುಮಾರ್ ಅವರಿಗೆ ಸಚಿವ ಸತೀಶ್ ಜಾರಕಿಹೊಳಿ ಸಾಥ್ ನೀಡುತ್ತಿರುವುದು ವಿಶೇಷ. ಇನ್ನು ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್. ಬೋಸರಾಜು ಸೇರಿದಂತೆ ಹತ್ತಾರು ಶಾಸಕರು ಈ ಮದುವೆ ಸಂಭ್ರಮಕ್ಕೆ ಸಾಕ್ಷಿಯಾಗಲಿದ್ದಾರೆ. ಮುದಗಲ್‌ನಲ್ಲಿ ಈಗಿನಿಂದಲೇ ರಾಜಕೀಯ ಗಣ್ಯರ ಹವಾ ಶುರುವಾಗಿದೆ.

PREV
Read more Articles on
click me!

Recommended Stories

Nikhil Kumaraswamy: ಮುಂದೆ ಜೆಡಿಎಸ್ ಅಧಿಕಾರಕ್ಕೆ ಬರುವುದು ಶತಸಿದ್ದ: ನಿಖಿಲ್
Sri Sri Ravi Shankar Birthday: ಧ್ಯಾನದಿಂದ ಸಾಮಾಜಿಕ ಪರಿವರ್ತನೆಗೈದ ಗುರುದೇವ್