ಒಕ್ಕಲಿಗರ ನಿಗಮ ರಚನೆಗೆ ನನ್ನ ಬೆಂಬಲ: ಡಿಸಿಎಂ ಅಶ್ವತ್ಥ್‌ ನಾರಾಯಣ್‌

By Kannadaprabha NewsFirst Published Nov 25, 2020, 2:39 PM IST
Highlights

ಸಚಿವ ಸಂಪುಟ ವಿಸ್ತರಣೆ ವಿಳಂಬವಾಗಿಲ್ಲ,ಸೂಕ್ತ ಸಮಯದಲ್ಲಿ ಮುಖ್ಯಮಂತ್ರಿಗಳು ಹಾಗೂ ಹೈಕಮಾಂಡ್‌ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದ ಡಿಸಿಎಂ ಡಾ.ಅಶ್ವತ್ಥ್‌ ನಾರಾಯಣ್‌ 

ಬೆಳಗಾವಿ(ನ.25): ರಾಜ್ಯ ಸರ್ಕಾರ ಲಿಂಗಾಯತ ಅಭಿವೃದ್ಧಿ ನಿಗಮ ರಚಿಸಿ 500 ಕೋಟಿ ಅನುದಾನ ನೀಡಿದ ಬೆನ್ನಲ್ಲೇ, ಒಕ್ಕಲಿಗರ ಅಭಿವೃದ್ಧಿ ನಿಗಮವನ್ನೂ ರಚಿಸಲಿ ಎಂದು ಉಪ ಮುಖ್ಯಮಂತ್ರಿ ಡಾ.ಅಶ್ವತ್ಥ್‌ ನಾರಾಯಣ್‌ ಆಗ್ರಹಿಸಿದ್ದಾರೆ. 

ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಕ್ಕಲಿಗರ ಅಭಿವೃದ್ಧಿ ನಿಗಮ ಆಗಬೇಕು ಎನ್ನುವ ಒತ್ತಾಯ ಇದೆ. ಅದಕ್ಕೆ ನನ್ನ ಬೆಂಬಲವೂ ಇದೆ ಎಂದು ಹೇಳಿದ್ದಾರೆ.

ಖಾನಾಪುರ: ಹಳ್ಳದಲ್ಲಿ ಈಜಲು ತೆರಳಿದ್ದ ಇಬ್ಬರು ಬಾಲಕರ ದುರ್ಮರಣ

ಬೆಂಬಲಿಗರ ಪರ ಕೆಲಸ ಸಾಮಾನ್ಯ:

ಸಚಿವ ರಮೇಶ ಜಾರಕಿಹೊಳಿ ಅವರ ಬೆಂಬಲಿಗರಿಗೆ ಸಚಿವ ಸ್ಥಾನ ಕೊಡಿಸಲು ದೆಹಲಿಯಲ್ಲಿ ಲಾಭಿ ನಡೆಸಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ರಮೇಶ ಜಾರಕಿಹೊಳಿ ತಮ್ಮ ಬೆಂಬಲಿಗರ ಪರ ಕೆಲಸ ಮಾಡುತ್ತಿದ್ದಾರೆ. ಇದು ಸಾಮಾನ್ಯ. ಅವರು ಅವರ ಕೆಲಸ ಮಾಡುತ್ತಿದ್ದಾರೆ ಎಂದರು. ಸಚಿವ ಸಂಪುಟ ವಿಸ್ತರಣೆ ವಿಳಂಬವಾಗಿಲ್ಲ. ಸೂಕ್ತ ಸಮಯದಲ್ಲಿ ಮುಖ್ಯಮಂತ್ರಿಗಳು ಹಾಗೂ ಹೈಕಮಾಂಡ್‌ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಹೇಳಿದರು.

ಹಿಂಡಲಗಾ ಜೈಲಿನಲ್ಲಿದ್ದುಕೊಂಡೇ ವಿನಯ್‌ ಕುಲಕರ್ಣಿ ಹಲವರಿಗೆ ಕರೆ ವಿಚಾರವಾಗಿ ಮಾತನಾಡಿದ ಅವರು, ನನಗೆ ಗೊತ್ತಿಲ್ಲ ಅವರು ಯಾರಾರ‍ಯರಿಗೆ ಕರೆ ಮಾಡುತ್ತಿದ್ದಾರೆ ಎಂದು. ಜೈಲಿನಲ್ಲಿ ಏನು ಸೌಲಭ್ಯ ಇರುತ್ತದೆ, ಅವರಿಗೆ ನ್ಯಾಯಾಂಗದಿಂದ ಏನು ಸೌಲಭ್ಯ ಕೊಟ್ಟಿದ್ದಾರೆ ಗೊತ್ತಿಲ್ಲ. ಸಿಬಿಐ ತನಿಖೆ ನಡೆಯಬೇಕಾದರೆ ನಾವು ಇದನ್ನೆಲ್ಲವನ್ನೂ ಕೇಳಲಾಗುವುದಿಲ್ಲ. ಕಾನೂನುಬಾಹಿರವಾಗಿ ನಡೆದುಕೊಳ್ಳಲು ಯಾವುದೇ ಅವಕಾಶ ಇರುವುದಿಲ್ಲ. ಉತ್ತಮ ಸಮಾಜ ಇರಬೇಕು ಎಂದು ಕಾನೂನು ಇದೆ. ಅಧಿಕಾರ ದುರ್ಬಳಕೆ ಆಗಬಾರದು, ಸದ್ಬಳಕೆಯಾಗಬೇಕು ಎಂಬುವುದಕ್ಕೆ ಕಾನೂನು ಇರುತ್ತದೆ. ಕಾನೂನು ಉಲ್ಲಂಘನೆ ಎಲ್ಲಿಯೂ ಆಗಲ್ಲ. ಎಲ್ಲಿಯೂ ಆಗಬಾರದು ಎಂದು ಹೇಳಿದರು.
 

click me!