ಗದಗ: ಡೆಡ್ಲಿ ಕೊರೋನಾ ಭಯದ ನಡುವೆಯೇ ಕಾರ ಹುಣ್ಣಿಮೆ ಆಚರಣೆ

By Kannadaprabha NewsFirst Published Jun 6, 2020, 8:02 AM IST
Highlights

ಸಂಭ್ರಮದಿಂದ ಆಚರಣೆ ಮಾಡುತ್ತಿದ್ದ ರೈತರ ಹಬ್ಬ ಕಾರ ಹುಣ್ಣಿಮೆ ಸರಳವಾಗಿ ಆಚರಣೆ| ಜನರು ಕರಿ ಹರಿಯುವ ಕಾರ್ಯ ಮಾಡದೇ ಹಬ್ಬವನ್ನು ಆಚರಣೆ ಮಾಡಿದ್ದಾರೆ| ಈ ಬಾರಿ ಮಹಾಮಾರಿ ಕೊರೋನಾದಿಂದ ಸರಳವಾಗಿ ಆಚರಣೆ ಮಾಡುವಂತ ಸ್ಥಿತಿ ನಿರ್ಮಾಣವಾಗಿದೆ|

ಗದಗ(ಜೂ.06): ಜಗತ್ತಿನಾದ್ಯಂತ ಬೆಂಬಿಡದೇ ಕಾಡುತ್ತಿರುವ ಕೋವಿಡ್‌-19 ಭೀತಿಯ ಮಧ್ಯಯೇ ಶುಕ್ರವಾರ ಗದಗ ಜಿಲ್ಲೆಯಾದ್ಯಂತ ಕಾರ ಹುಣ್ಣಿಮೆಯನ್ನು ಸರಳವಾಗಿ ಆಚರಿಸಲಾಯಿತು.
ರೈತಾಪಿ ವರ್ಗದವರ ಪ್ರಮುಖ ಹಬ್ಬ ಎಂದೇ ಕಾರ ಹುಣ್ಣಿಮೆ ಕರೆಸಿಕೊಳ್ಳುತ್ತದೆ. ಸಂಭ್ರಮದಿಂದ ಆಚರಣೆ ಮಾಡುತ್ತಿದ್ದ ರೈತರ ಹಬ್ಬ ಸರಳವಾಗಿ ಆಚರಣೆಯಾಗಿದೆ. ಜನರು ಕರಿ ಹರಿಯುವ ಕಾರ್ಯ ಮಾಡದೇ ಹಬ್ಬವನ್ನು ಆಚರಣೆ ಮಾಡಿದ್ದಾರೆ.

ಹಬ್ಬಕ್ಕೆ ಕೊರೋನಾ ಕಾಟ

ಉತ್ತರ ಕರ್ನಾಟಕದ ರೈತರು ವಿಜೃಂಭಣೆಯಿಂದ ಆಚರಣೆ ಮಾಡುವ ಹಬ್ಬಗಳಲ್ಲಿ ಕಾರ ಹುಣ್ಣಿಮೆ ಪ್ರಮುಖ. ಪ್ರತಿವರ್ಷ ಬಹಳ ವಿಜೃಂಭಣೆಯಿಂದ ಆಚರಣೆ ಮಾಡುತ್ತಿದ್ದ ರೈತರು ಈ ಬಾರಿ ಕೊರೋನಾ ಭೀತಿಯಿಂದ ಹಬ್ಬವನ್ನು ಸರಳವಾಗಿ ಆಚರಣೆ ಮಾಡಲಾಯಿತು.

ಬಸ್‌ ಪ್ರಯಾಣಕ್ಕೆ ಜನರ ಹಿಂದೇಟು: KSRTCಗೆ ಭಾರಿ ನಷ್ಟ..!

ಕಾರ ಹುಣ್ಣಿಮೆ ಎಂದರೆ ರೈತರ ಜೊತೆಗಾರರಾದ ಎತ್ತುಗಳಿಗೆ ವಿಶೇಷ ಅಲಂಕಾರ ಮಾಡಿ ಮೆರವಣಿಗೆ ಮಾಡಲಾಗುತ್ತಿತ್ತು. ಆದರೆ ಈ ಬಾರಿ ಮಹಾಮಾರಿ ಕೊರೋನಾದಿಂದ ಸರಳವಾಗಿ ಆಚರಣೆ ಮಾಡುವಂತ ಸ್ಥಿತಿ ನಿರ್ಮಾಣವಾಗಿದೆ. ಗದಗ ನಗರದ ವೀರ ನಾರಾಯಣ ಓಣಿ ಹಾಗೂ ಬೆಟಗೇರಿ ರೈತಾಪಿ ವರ್ಗ ಸಂಭ್ರಮ ಸಡಗರರಿಂದ ಕಾರ ಹುಣ್ಣಿಮೆ ಆಚರಣೆ ಮಾಡುತ್ತಿದ್ದರು. ಈ ಭಾರಿ ಕೇವಲ ಎತ್ತುಗಳ ಮೈ ತೊಳೆದು ಸರಳವಾಗಿ ಆಚರಣೆ ಮಾಡಲಾಯಿತು.

ಕೊರೋನಾ ಹರಡುತ್ತಿರುವ ಹಿನ್ನೆಲೆಯಲ್ಲಿ ಗುಂಪು ಗುಂಪಾಗಿ ಸೇರಬಾರದು ಎಂದು ಜಿಲ್ಲಾಡಳಿತ ಆದೇಶ ಮಾಡಿದೆ. ಈ ಹಿನ್ನೆಲೆಯಲ್ಲಿ ಗದಗ ಜಿಲ್ಲೆಯಾದ್ಯಂತ ರೈತರು ಸರಳವಾಗಿ ಕಾರ ಹುಣ್ಣಿಮೆ ಆಚರಣೆ ಮಾಡಿದ್ದಾರೆ. ಕರಿ ಹರಿಯುವ ಕಾರ್ಯವನ್ನು ಕೈ ಬಿಟ್ಟಿದ್ದು, ಈ ಮೊದಲು ಎತ್ತುಗಳನ್ನು ಶೃಂಗಾರ ಮಾಡಿ ಓಣಿಯಲ್ಲಿ ಓಡಿಸಿ ಕರಿ ಹರಿಯುತ್ತಿದ್ದರು. ಆದರೆ ಈ ಬಾರಿ ತಮ್ಮ ತಮ್ಮ ಮನೆಯಲ್ಲಿ ಕಾರ ಹುಣ್ಣಿಮೆ ಮಾಡಿದ್ದಾರೆ. ಹಿಂದಿನ ಕಾಲದಿಂದ ಮಾಡಿಕೊಂಡ ಬಂದಿರುವ ಸಂಪ್ರದಾಯವನ್ನು ಬಿಟ್ಟಲು ಆಗದು ಎಂದು ಸರಳವಾಗಿ ಆಚರಣೆ ಮಾಡುತ್ತೆವೆ ಎಂದು ರೈತರು ಅಭಿಪಾಯ ವ್ಯಕ್ತಪಡಿಸುತ್ತಿದ್ದಾರೆ.

click me!