ಮಹಾರಾಷ್ಟ್ರ, ತೆಲಂಗಾಣಾ, ಉತ್ತರಪ್ರದೇಶ, ಮಹಾರಾಷ್ಟ್ರ ಮತ್ತಿತರ ರಾಜ್ಯಗಳಿಂದ ಜಿಲ್ಲೆಗೆ ಆಗಮಿಸಿದ್ದ ಸುಮಾರು 2685 ಜನರಿಗೆ ಕ್ವಾರಂಟೈನ್| ಮುಂದಿನ ದಿನಗಳಲ್ಲಿ ಇನ್ನಷ್ಟು ಸಾವಿರಾರು ಸಂಖ್ಯೆಯಲ್ಲಿ ಜನ ಬೇರೆ ಬೇರೆ ರಾಜ್ಯಗಳಿಂದ ಜಿಲ್ಲೆಗೆ ವಾಪಸ್ಸಾಗುವ ಸಾಧ್ಯತೆ| ಕಾಲು ದಾರಿಯಿಂದ ಹಳ್ಳಿಗಳಿಗೆ ಜನ ವಾಪಸ್ಸಾಗುತ್ತಿದ್ದು, ಜನರು ಇಂಥವರನ್ನು ಗುರುತಿಸಿ ನಮಗೆ ಮಾಹಿತಿ ನೀಡಿದಲ್ಲಿ ಅವರನ್ನು ಕ್ವಾರಂಟೈನ್ ಮಾಡಿ ರೋಗ ಹರಡದಂತೆ ಕ್ರಮವಹಿಸಬಹುದಾಗಿದೆ|
ಬೀದರ್(ಮೇ.14): ಬಿಹಾರ್‌ಗೆ ಕಲಬುರಗಿಯಿಂದ ವಿಶೇಷ ರೈಲು ತೆರಳುವ ಸಾಧ್ಯತೆಗಳಿದ್ದು, ಅದರಲ್ಲಿ ಜಿಲ್ಲೆಯ 500ಕ್ಕೂ ಹೆಚ್ಚು ಆ ರಾಜ್ಯದ ನಿವಾಸಿಗರನ್ನು ಕಳುಹಿಸುವ ಯೋಜನೆ ಇದೆ ಎಂದು ಜಿಲ್ಲಾಧಿಕಾರಿ ಡಾ.ಮಹಾದೇವ ತಿಳಿಸಿದ್ದಾರೆ.
ಹೊರ ರಾಜ್ಯಗಳಿಗೆ ತೆರಳಬೇಕಾದ ಸುಮಾರು ಒಂದೂವರೆ ಸಾವಿರ ಜನ ಇಲ್ಲಿಂದ ವಾಪಸ್ಸಾಗಿದ್ದಾರೆ. ಇನ್ನುಳಿದವರನ್ನು ಕಳುಹಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಮಹಾರಾಷ್ಟ್ರ, ತೆಲಂಗಾಣಾ, ಉತ್ತರಪ್ರದೇಶ, ಮಹಾರಾಷ್ಟ್ರ ಮತ್ತಿತರ ರಾಜ್ಯಗಳಿಂದ ಜಿಲ್ಲೆಗೆ ಆಗಮಿಸಿದ್ದ ಸುಮಾರು 2685 ಜನರಿಗೆ ಕ್ವಾರಂಟೈನ್ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಸಾವಿರಾರು ಸಂಖ್ಯೆಯಲ್ಲಿ ಜನ ಬೇರೆ ಬೇರೆ ರಾಜ್ಯಗಳಿಂದ ಜಿಲ್ಲೆಗೆ ವಾಪಸ್ಸಾಗುವ ಸಾಧ್ಯತೆಗಳಿವೆ. ಕಾಲು ದಾರಿಯಿಂದ ಹಳ್ಳಿಗಳಿಗೆ ಜನ ವಾಪಸ್ಸಾಗುತ್ತಿದ್ದು, ಜನರು ಇಂಥವರನ್ನು ಗುರುತಿಸಿ ನಮಗೆ ಮಾಹಿತಿ ನೀಡಿದಲ್ಲಿ ಅವರನ್ನು ಕ್ವಾರಂಟೈನ್ ಮಾಡಿ ರೋಗ ಹರಡದಂತೆ ಕ್ರಮವಹಿಸಬಹುದಾಗಿದೆ. ಗ್ರಾಮ ಸಮಿತಿಗಳು, ಆಶಾ ಕಾರ್ಯಕರ್ತರು, ಜನರು ಸರ್ಕಾರದೊಂದಿಗೆ ಕೈಜೋಡಿಸಿ ರೋಗ ತಡೆಗೆ ಸಹಕರಿಸಬೇಕು ಎಂದರು.
undefined
ಕಾರ್ಮಿಕರ ಜೊತೆ ಸಲಿಕೆ, ಗುದ್ದಲಿ ಹಿಡಿದು ಕೆಲಸ ಮಾಡಿದ IAS ಅಧಿಕಾರಿ..!
ಕಾನೂನು ಪಾಲಿಸಿ ಕೊರೋನಾ ದೂರವಿಡಿ:
ರೋಗ ಹರಡಿದಿರಲು ಮಾಸ್ಕ್ ಹಾಕಿಕೊಳ್ಳುವದು, ಸಾಮಾಜಿಕ ಅಂತರ ಕಡ್ಡಾಯವಾಗಿಸಿ ಕಾನೂನು ಜಾರಿಗೆ ತಂದರು ಜನರು ಅದನ್ನು ಗಂಭೀರವಾಗಿ ತೆಗೆದುಕೊಳ್ಳುತ್ತಿಲ್ಲ. ಔಷಧಿ ಅಂಗಡಿಗಳಲ್ಲಿಯೂ ಮಾಸ್ಕ್ ಧರಿಸುತ್ತಿಲ್ಲ. ರಸ್ತೆಯಲ್ಲಿ ಓಡಾಡುವ ಜನರೂ ಬಹುತೇಕರು ಮಾಸ್ಕ್ ಹಾಕಿಕೊಳ್ಳದಿರುವದು ಕಂಡುಬಂದಿದೆ. ಜನರಿಗೆ ಕಿರಿಕಿರಿಯುಂಟು ಆಗಬಾರದೆಂದು ಇದು ಜೀವ ಮರಣದ ಪ್ರಶ್ನೆ. ಹೀಗಾಗಿ ಕಾನೂನು ಕ್ರಮ ಕೈಗೊಳ್ಳುತ್ತಿಲ್ಲ ಜಿಲ್ಲಾಧಿಕಾರಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.