ಬಿಪಿಎಲ್, ಎಪಿಎಲ್ ಹಾಗೂ ಯಾವ ಪಡಿತರ ಕಾರ್ಡ್ ಇಲ್ಲದವರಿಗೂ ಸಹ ಆಯುಷ್ಮಾನ್ ಕಾರ್ಡ್ ಪಡೆಯಬಹುದಾಗಿದೆ| ವಿವಿಧ ಸರಕಾರಿ ನೌಕರರು ಸಹ ಆಯುಷ್ಮಾನ್ ಕಾರ್ಡ್ ಪಡೆಯಬಹುದಾಗಿದೆ| ಈ ಕಾರ್ಡ್ ಮೂಲಕ ಕೋವಿಡ್ ಚಿಕಿತ್ಸೆಗೆ ಆಯ್ಕೆಯಾದ ಖಾಸಗಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಚಿಕಿತ್ಸೆ ಪಡೆಯಬಹುದಾಗಿದೆ: ಡಿಸಿ ಡಾ.ಕೆ.ರಾಜೇಂದ್ರ|
ಬಾಗಲಕೋಟೆ(ಜು.02): ಆಯುಷ್ಮಾನ್ ಕಾರ್ಡ್‌ನಿಂದ ಜಿಲ್ಲೆಯಲ್ಲಿರುವ 26 ಖಾಸಗಿ ಆಸ್ಪತ್ರೆಗಳಲ್ಲಿಯೂ ಉಚಿತ ಕೋವಿಡ್ ಚಿಕಿತ್ಸೆ ಪಡೆಯಬಹುದಾಗಿದೆ ಎಂದು ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ತಿಳಿಸಿದ್ದಾರೆ.
ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಬುಧವಾರ ಸಾಮಾನ್ಯ ಸೇವಾ ಕೇಂದ್ರಗಳ ಮೂಲಕ ಆಯುಷ್ಮಾನ್ ಕಾರ್ಡ್ ನೀಡುವ ಕಾರ್ಯಕ್ಕೆ ಥಮ್ ನೀಡಿ ಕಾರ್ಡ್ ಪಡೆಯುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು, ಬಿಪಿಎಲ್, ಎಪಿಎಲ್ ಹಾಗೂ ಯಾವ ಪಡಿತರ ಕಾರ್ಡ್ ಇಲ್ಲದವರಿಗೂ ಸಹ ಈ ಆಯುಷ್ಮಾನ್ ಕಾರ್ಡ್ ಪಡೆಯಬಹುದಾಗಿದೆ. ವಿವಿಧ ಸರಕಾರಿ ನೌಕರರು ಸಹ ಈ ಕಾರ್ಡ್ ಪಡೆಯಬಹುದಾಗಿದೆ. ಈ ಕಾರ್ಡ್ ಮೂಲಕ ಕೋವಿಡ್ ಚಿಕಿತ್ಸೆಗೆ ಆಯ್ಕೆಯಾದ ಖಾಸಗಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಚಿಕಿತ್ಸೆ ಪಡೆಯಬಹುದಾಗಿದೆ ಎಂದು ತಿಳಿದರು.
SSLC ಪರೀಕ್ಷೆ ಬರೆದ 3 ವಿದ್ಯಾರ್ಥಿಗಳಿಗೆ ವಕ್ಕರಿಸಿದ ಕೊರೋನಾ
ಜಿಲ್ಲೆಯಲ್ಲಿರುವ 198 ಗ್ರಾಪಂ, 6 ತಾಲೂಕಾ ಆಸ್ಪತ್ರೆ, ಜಿಲ್ಲಾಸ್ಪತ್ರೆ ಹಾಗೂ 120 ಸಾಮಾನ್ಯ ನಾಗರಿಕ ಸೇವಾ ಕೇಂದ್ರ (ಸಿಎಸ್‌ಸಿ)ಗಳಲ್ಲಿ ಆಧಾರ್ ಕಾರ್ಡ್ ನಂಬರ್ ನೀಡಿ ಆಯುಷ್ಮಾನ್ ಕಾರ್ಡ್ ಪಡೆದುಕೊಳ್ಳಬಹುದಾಗಿದೆ ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ, ಸೇವಾ ಸಿಂಧು ಜಿಲ್ಲಾ ವ್ಯವಸ್ಥಾಪಕ ಸ್ವಾಗತ ಗುಡೆಗುಡಿ, ಸಾಮಾನ್ಯ ಸೇವಾ ಕೇಂದ್ರದ ಜಿಲ್ಲಾ ವ್ಯವಸ್ಥಾಪಕ ಚೇತನ ಪಟ್ಟಣಶೆಟ್ಟಿ, ಸಕಾಲದ ಲಕ್ಷಿತ್ರಕಾಂತ ಜ್ಯೋತೆನ್ನವರ, ವಿಎಲ್‌ಇ ಹನಿಪ ಇನಾಮದಾರ, ಜಿಲ್ಲಾಧಿಕಾರಿ ಆಪ್ತ ಸಹಾಯಕ ಮಂಜುನಾಥ ಸೇರಿದಂತೆ ಇತರರು ಉಪಸ್ಥಿತರಿದ್ದರು.