ಕ್ಯಾನ್ಸರ್‌ಗೆ ಹಕ್ಕರಕಿ/ಹತ್ತರಕಿ ಸೊಪ್ಪು ಮದ್ದು? ಸಂಶೋಧನೆಗೆ 20 ಲಕ್ಷ ರೂ. ಅನುದಾನ

Published : Oct 07, 2026, 02:41 PM IST
Hattaraki

ಸಾರಾಂಶ

ದಾವಣಗೆರೆ ವಿಶ್ವವಿದ್ಯಾನಿಲಯದ ಡಾ. ಡಿ.ಕೊಟ್ರೇಶ್ ಅವರಿಗೆ ಹಕ್ಕರಕಿ ಸೊಪ್ಪಿನಿಂದ ಶ್ವಾಸಕೋಶದ ಕ್ಯಾನ್ಸರ್ ನಿವಾರಿಸುವ ಸಂಶೋಧನೆಗೆ ವಿಜಿಎಸ್‌ಟಿ ಅನುದಾನ ನೀಡಿದೆ. ಈ ಸೊಪ್ಪಿನಲ್ಲಿರುವ ಜಿನಿಸ್ಟಿನ್ ರಾಸಾಯನಿಕದ ಮೂಲಕ ಕ್ಯಾನ್ಸರ್ ಗುಣಪಡಿಸುವ ಸಾಧ್ಯತೆಗಳನ್ನು ಅವರು ಅನ್ವೇಷಿಸಲಿದ್ದಾರೆ.

ದಾವಣಗೆರೆ: ಹಕ್ಕರಕಿ ಸೊಪ್ಪಿನಿಂದ (ಹತ್ತರಕಿ ಪಲ್ಯೆ, ಹತ್ತರಕೀ ಸೊಪ್ಪು, ಹಕ್ಕರಿಕೆ , ದಂಡೆಲಿಯನ್ ಎಲೆ) ಶ್ವಾಸಕೋಶದ ಕ್ಯಾನ್ಸರ್ ನಿವಾರಣಾ ಚಿಕಿತ್ಸೆಯಲ್ಲಿರುವ ಸಾಧ್ಯತೆಗಳನ್ನು ಅನ್ವೇಷಿಸುವ ಉದ್ದೇಶಕ್ಕಾಗಿ ದಾವಣಗೆರೆ ವಿಶ್ವವಿದ್ಯಾನಿಲಯದ ಸಸ್ಯಶಾಸ್ತ್ರದ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಡಾ. ಡಿ.ಕೊಟ್ರೇಶ್ ಅವರಿಗೆ ಕರ್ನಾಟಕ ವಿಜ್ಞಾನ ತಂತ್ರಜ್ಞಾನ ಪ್ರೋತ್ಸಾಹಕ ಸಂಸ್ಥೆ (ವಿಜಿಎಸ್‌ಟಿ) ಅನುದಾನ ಮಂಜೂರು ಮಾಡಿದೆ.

ಡಾ.ಕೊಟ್ರೇಶ್ ಅನ್ವೇಷಣೆ

ಪ್ರಸ್ತುತ ಸಂಶೋಧನೆಯು ಹಕ್ಕರಕಿ ಸೊಪ್ಪಿನಲ್ಲಿರುವ ಜಿನಿಸ್ಟಿನ್ ಎಂಬ ರಾಸಾಯನಿಕವನ್ನು ಪ್ರತ್ಯೇಕಿಸಿ ಅದರ ರೋಗ ನಿರೋಧಕ ಶಕ್ತಿಯ ಅಂಶಗಳ ಮೂಲಕ ಕ್ಯಾನ್ಸರ್ ನಿವಾರಿಸಬಹುದಾದ ಸಾಧ್ಯತೆಗಳನ್ನು ಡಾ.ಕೊಟ್ರೇಶ್ ಅನ್ವೇಷಿಸಲಿದ್ದಾರೆ. ಈ ಸಂಶೋಧನೆಯು ವೈದ್ಯಕೀಯ ಮತ್ತು ಜೀವ ವಿಜ್ಞಾನ ಕ್ಷೇತ್ರದಲ್ಲಿ ಹೊಸ ಸಂಶೋಧನೆಗೆ ಉತ್ತೇಜನ ನೀಡುವ ದೃಷ್ಟಿಯಿಂದ ಮಹತ್ವ ಪಡೆದಿದೆ.

ವಿಜಿಎಸ್‌ಟಿ ವತಿಯಿಂದ ₹20 ಲಕ್ಷ ಅನುದಾನ ಮಂಜೂರು

ಸಂಶೋಧನೆಗಾಗಿ ವಿಜಿಎಸ್‌ಟಿ ವತಿಯಿಂದ ₹20 ಲಕ್ಷ ಅನುದಾನ ಮಂಜೂರು ಮಾಡಲಾಗಿದೆ. ಕೈಗೊಂಡಿರುವ ಯೋಜನೆಯು ಯಶಸ್ವಿಯಾದಲ್ಲಿ ಜಾಗತಿಕ ಮಟ್ಟದಲ್ಲಿ ಮನ್ನಣೆ ಪಡೆದು, ಲಕ್ಷಾಂತರ ಜನರ ಶ್ವಾಸಕೋಶ ಹಾಗೂ ಶ್ವಾಸಕೋಶ ಕ್ಯಾನ್ಸರ್ ಸಮಸ್ಯೆಗೆ ಪರಿಹಾರ ನೀಡಲಿದೆ ಎಂದು ಡಾ.ಕೊಟ್ರೇಶ್ ತಿಳಿಸಿದ್ದಾರೆ.

PREV
Read more Articles on
click me!

Recommended Stories

“ಆ ರಸ್ತೆ ಯಾರದ್ದೂ ಅಲ್ಲ… ‘ನಮ್ಮದು’ ಎಂದುಕೊಂಡು ಬದಲಿಸಿದ್ರು; ಕೊರಮಂಗಲದ L Street ಕಥೆ ಸ್ಪೂರ್ತಿದಾಯಕ
ಬೆಂಗಳೂರಿನಲ್ಲಿ ಅ.11ರಿಂದ ‘ನವರಾತ್ರ ನಮಸ್ಯಾ’ – ರಾಜರಾಜೇಶ್ವರಿ ಆರಾಧನೆಗೆ ವಿಶೇಷ ಕಾರ್ಯಕ್ರಮಗಳು