ವಿವಾದಾತ್ಮಕ ಹೇಳಿಕೆ: ಮಾಜಿ ಸಚಿವ ಈಶ್ವರಪ್ಪಗೆ ನೋಟಿಸ್

By Girish Goudar  |  First Published Feb 10, 2024, 10:00 PM IST

ದಾವಣಗೆರೆಯ ಬಿಜೆಪಿ ಜಿಲ್ಲಾ ಅಧ್ಯಕ್ಷರ ಪದಗ್ರಹಣ ಸಮಾರಂಭದಲ್ಲಿ ಮಾಜಿ ಸಚಿವ ಕೆ. ಎಸ್ ಈಶ್ವರಪ್ಪ ಪ್ರತ್ಯೇಕ ರಾಷ್ಟ್ರದ ಕುರಿತು ಹೇಳಿಕೆ ನೀಡಿರುವ ಸಂಸದ ಡಿ.ಕೆ.ಸುರೇಶ್ ಮತ್ತು ಇವರನ್ನು ಬೆಂಬಲಿಸಿದ ವಿನಯ್ ಕುಲಕರ್ಣಿ ಇವರೆಲ್ಲ ರಾಷ್ಟ್ರಧ್ರೋಹಿಗಳು ರಾಷ್ಟ್ರ ದ್ರೋಹಿಗಳ ವಿರುದ್ಧ ಗುಂಡಕ್ಕಿ ಕೊಲ್ಲುವ ಕಠಿಣ ಕಾನೂನು ತರಲು ಪ್ರಧಾನಿ ನರೇಂದ್ರ ಮೋದಿ ಅವರನ್ನು ಪ್ರಾರ್ಥಿಸುತ್ತೇನೆ ಎಂದಿದ್ದರು. 


ವರದಿ: ರಾಜೇಶ್‌ ಕಾಮತ್‌

ಶಿವಮೊಗ್ಗ(ಫೆ.10):  ರಾಷ್ಟ್ರದ್ರೋಹಿಗಳ ವಿರುದ್ಧ ಗುಂಡಿಕ್ಕಿ ಕೊಲ್ಲುವ ಕಾನೂನು ಜಾರಿಯಾಗಬೇಕೆಂದು ಕೇಂದ್ರ ಸರ್ಕಾರವನ್ನು ಆಗ್ರಹಿಸಿದ್ದ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಇದೀಗ ವಿವಾದದ ಸುಳಿಯ ಜೊತೆ ಪೊಲೀಸ್ ಠಾಣೆಯ ಮೆಟ್ಟಿಲೇರುವಂತಾಗಿದೆ. 

Tap to resize

Latest Videos

ದಾವಣಗೆರೆಯ ಬಿಜೆಪಿ ಜಿಲ್ಲಾ ಅಧ್ಯಕ್ಷರ ಪದಗ್ರಹಣ ಸಮಾರಂಭದಲ್ಲಿ ಮಾಜಿ ಸಚಿವ ಕೆ. ಎಸ್ ಈಶ್ವರಪ್ಪ ಪ್ರತ್ಯೇಕ ರಾಷ್ಟ್ರದ ಕುರಿತು ಹೇಳಿಕೆ ನೀಡಿರುವ ಸಂಸದ ಡಿ.ಕೆ.ಸುರೇಶ್ ಮತ್ತು ಇವರನ್ನು ಬೆಂಬಲಿಸಿದ ವಿನಯ್ ಕುಲಕರ್ಣಿ ಇವರೆಲ್ಲ ರಾಷ್ಟ್ರಧ್ರೋಹಿಗಳು ರಾಷ್ಟ್ರ ದ್ರೋಹಿಗಳ ವಿರುದ್ಧ ಗುಂಡಕ್ಕಿ ಕೊಲ್ಲುವ ಕಠಿಣ ಕಾನೂನು ತರಲು ಪ್ರಧಾನಿ ನರೇಂದ್ರ ಮೋದಿ ಅವರನ್ನು ಪ್ರಾರ್ಥಿಸುತ್ತೇನೆ ಎಂದಿದ್ದರು. ಇದರ ಬೆನ್ನಲ್ಲೇ ದಾವಣಗೆರೆ ಬಡಾವಣೆ ಪೊಲೀಸ್ ಠಾಣೆಯಲ್ಲಿ ಹನುಮಂತಪ್ಪ ಎಂಬುವರು ಪೊಲೀಸರಿಗೆ ನೀಡಿದ ದೂರಿನ ಅನ್ವಯ ಎಫ್‌ಐಆರ್‌ ಕೂಡ ದಾಖಲಾಗಿತ್ತು. 

ಮುಸ್ಲಿಂ ಗುರುಗಳನ್ನು ಬಿಡುಗಡೆ ಮಾಡಿ, ಜ್ಞಾನವ್ಯಾಪಿ ಮಸೀದಿಗೆ ತೊಂದರೆ ಮಾಡಬೇಡಿ; ಮುಸ್ಲಿಮರ ಪ್ರತಿಭಟನೆ

ಎಫ್‌ಐಆರ್‌ ದಾಖಲಾದ ಬೆನ್ನಲ್ಲೆ ದಾವಣಗೆರೆ ಬಡಾವಣೆ ಠಾಣೆಯ ತನಿಖಾಧಿಕಾರಿ ಪೊಲೀಸ್ ಠಾಣೆಯ ಎಎಸ್ ಐ ಮೂಲಕ ಕೆ ಎಸ್ ಈಶ್ವರಪ್ಪ ನವರಿಗೆ ನೋಟಿಸ್ ಕಳುಹಿಸಿದ್ದಾರೆ. ಶಿವಮೊಗ್ಗದ ಮಲ್ಲೇಶ್ವರ ನಗರದಲ್ಲಿರುವ ಈಶ್ವರಪ್ಪ ನಿವಾಸಕ್ಕೆ ಭೇಟಿ ನೀಡಿದ್ದ ದಾವಣಗೆರೆ ಎಎಸ್ಐ ಫೆಬ್ರವರಿ 15ರಂದು ಬೆಳಗ್ಗೆ ಹತ್ತು ಮೂವತ್ತಕ್ಕೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿದೆ. ಪೊಲೀಸರಿಂದ ನೋಟಿಸ್ ಸ್ವೀಕರಿಸಿದ ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಕೆಲಕಾಲ ಪೊಲೀಸರೊಂದಿಗೆ ಮಾತನಾಡಿ ಅವರನ್ನು ಕಳಿಸಿದ್ದಾರೆ.    

ಪೊಲೀಸರ ನೋಟಿಸ್ ನಲ್ಲಿ ಏನಿದೆ..?!

ಬಡಾವಣೆ ಪೊಲೀಸ್ ಠಾಣೆ, ನಗರ ಉಪ ವಿಭಾಗ ದಾವಣಗೆರೆ
Extension police station, city sub division Davanagere
“ನೋಟೀಸ್"
(ಕಲಂ 41 (ಎ) ಸಿ.ಆ‌ರ್.ಪಿ.ಸಿ ಅನ್ವಯ ಸಂಜ್ಞೆಯ ಅಪರಾಧ ಪ್ರಕರಣಗಳಲ್ಲಿ) ನಾನು ಈ ಮೂಲಕ ನಿಮಗೆ ತಿಳಿಯಪಡಿಸುವುದೆನೆಂದರೆ ದಂಡ ಪ್ರಕ್ರಿಯಾ ಸಂಹಿತೆ ಕಲಂ 41(ಎ) ಉಪಕಲಂ (1) ರಲ್ಲಿ ದತ್ತವಾದ ಅಧಿಕಾರವನ್ನು ಚಲಾಯಿಸುತ್ತಾ ಕರ್ನಾಟಕ ರಾಜ್ಯ, ದಾವಣಗೆರೆ ಜಿಲ್ಲೆಯ. 19/2024   505(1)(2), 505(2), 506  ರೀತ್ಯಾ ದಿನಾಂಕ 09-02-2024 ರಂದು ತಮ್ಮ ವಿರುದ್ಧ ಪ್ರಕರಣ ದಾಖಲಾಗಿರುತ್ತದೆ.  ಸದರಿ ಕೇಸಿನಲ್ಲಿ ಘಟನೆ ಬಗ್ಗೆ ಕೆಲವು ಸತ್ಯಾಂಶ ಹಾಗೂ ಸನ್ನಿವೇಶಗಳನ್ನು ಖಚಿತ ಪಡಿಸಿಕೊಳ್ಳ ಬೇಕಾಗಿರುವುದರಿಂದ ಮೇಲ್ಕಂಡ ಪ್ರಕರಣದಲ್ಲಿ ತಮಗೆ ವಿಚಾರಣೆ ಮಾಡಲು ಸಾಕಷ್ಟು ಪೂರಕ ಕಾರಣಗಳು ಕಂಡುಬಂದಿರುತ್ತವೆ.  ಆದುದರಿಂದ ತಾವು ಸದರಿ ಕೇಸಿನಲ್ಲಿ ಆರೋಪ ವಿಚಾರಣೆಗಾಗಿ ದಿನಾಂಕ 15-02-2024 ರಂದು ಬೆಳಿಗ್ಗೆ 10-30 ಗಂಟೆಗೆ ದಾವಣಗೆರೆ, ಬಡಾವಣೆ ಪೊಲೀಸ್ ಠಾಣೆಗೆ ಹಾಜರಾಗಲು ಈ ಮೂಲಕ ತಿಳಿಸಿರುತ್ತದೆ. ಸ್ಥಳ:-ಬಡಾವಣೆ ಪೊಲೀಸ್ ಠಾಣೆ mod:-09-02-2024 ತನಿಖಾಧಿಕಾರಿ ಎಂದು ಬರೆಯಲಾಗಿದೆ

ನೋಟಿಸ್ ಪಡೆದ ಬೆನ್ನಲ್ಲೇ ಶಿವಮೊಗ್ಗದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ದಾವಣಗೆರೆ ಬಡಾವಣೆ ಠಾಣೆಯ ಪೊಲೀಸ್ರಿಂದ ನೋಟಿಸ್ ಪಡೆದ ನಂತರ ಶಿವಮೊಗ್ಗ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ತಮ್ಮ ವಿವಾದಾತ್ಮಕ ಹೇಳಿಕೆಗೆ ಸಂಬಂಧಿಸಿದಂತೆ ಕೆಲ ಸ್ಪಷ್ಟನೆಗಳನ್ನು ನೀಡಿದರು. 

ದೇಶ ದ್ರೋಹಿ ಹೇಳಿಕೆಯನ್ನ ನೀಡಿರುವ ಸಂಸದ ಡಿಕೆಸುರೇಶ್ ಮತ್ತು ಅದನ್ನ‌ಬೆಬಲಿಸಿದವರಿಗೆ ನೋಟೀಸ್ ನೀಡಿಲ್ಲ. ನಾನು ದೇಶ ವಿಭಜನೆ ಮಾಡುವ ಹೇಳಿಕೆ ನೀಡುವವರಿಗೆ ಗುಂಡಿಟ್ಟು ಕೊಲ್ಲುವ ಕಾನೂನು ಜಾರಿ ಎಂದರೆ ನೋಟೀಸ್ ಕೊಡಲಾಗಿದೆ . ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶವನ್ನು  ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ವ್ಯಕ್ತಪಡಿಸಿದರು. 

ದಕ್ಷಿಣ ಭಾರತ ರಾಜ್ಯಗಳ ಬೇಡಿಕೆ ಇಟ್ಟಿರುವರಿಗೆ  ಗುಂಡಿಟ್ಟು ಕೊಲ್ಲಿ ಎಂದು ಹೇಳಿರುವೆ. ಅದನ್ನ ಕಾನೂನು ತನ್ನಿ ಎಂದಿರುವೆ. ಆ ಹೇಳಿಕೆಗೆ ಈಗಲೂ ಬದ್ಧನಾಗಿರುವೆ.  ಈಗಲೂ ಕಾಲ ಮಿಂಚಿಲ್ಲ. ಡಿಕೆಸು ವಿರುದ್ಧ ಕೇಸ್ ಹಾಕಬೇಕು ಎಂದು ಆಗ್ರಹಿಸಿದರು. ಗೃಹ ಸಚಿವ ಪರಮೇಶ್ವರ್ ಅವರು. ನನಗೆ ಹೇಳಬೇಡಿ ಕೇಂದ್ರಕ್ಕೆ ಈಶ್ವರಪ್ಪ ಹೇಳಲಿ ಎಂದು ಹೇಳಿದ್ದಾರೆ. ಹಾಗಾಗಿ ಪರಮೇಶ್ವರ್ ಹೇಳಿಕೆಯನ್ನ ಸ್ವಾಗತಿಸುತ್ತೇನೆ.  ಆದುದರಿಂದ ಕೇಂದ್ರ ಗೃಹ ಸಚಿವ ಅಮಿತ್ ಶಾರಿಗೆ ನಾಳೆ ಪತ್ರ ಬರೆಯುತ್ತಿದ್ದೇನೆ ಒಬ್ಬೊಬ್ಬ ಕಾಂಗ್ರೆಸ್  ಸಚಿವರು ಒಂದೊಂದು  ಹೇಳಿಕೆ ನೀಡುತ್ತಿದ್ದಾರೆ.  ಪ್ರಿಯಾಂಕ್ ಖರ್ಗೆಯರು ಬಾಯಿ ಬಂದಂತೆ ಮಾತನಾಡಿದ್ದಾರೆ. 

ಆರ್ ಎಸ್ ಎಸ್ ವಿರುದ್ಧ ಖರ್ಗೆ ಮಾತನಾಡಿರುವುದು ಬೇಸರ ತಂದಿದೆ. ರಾಷ್ಟ್ರವನ್ನ ವಿಭಜನೆ ಮಾಡಬೇಡಿ ಎಂದು ಆರ್ ಎಸ್ ಎಸ್ ಹೇಳಿಕೊಟ್ಟಿದೆ. ಆದರೆ ಅವರ ತಂದೆ ಮಲ್ಲಿಕಾರ್ಜುನ ಖರ್ಗೆ ಸಂಸತ್ ನಲ್ಲಿ ವಿಭಜನೆ ಕುರಿತು ಅಖಂಡ ಭಾರತದ ಕಲ್ಪನೆಯನ್ನು ಸ್ಪಷ್ಟ ಪಡಿಸಿದ್ದಾರೆ.

ನನ್ನ ವಿರುದ್ಧ ಎಫ್ಐಆರ್ ಹಾಕಲಿ ನೋಟೀಸ್ ನೀಡಲಿ ಹೆದರೊಲ್ಲ. ಹಿಂದುತ್ವ, ರಾಷ್ಡ್ರವಾದಗಳ ಕುರಿತು ನೂರು ನೋಟಿಸ್ ಕೊಡಲಿ ಎದುರಿಸುತ್ತೇನೆ. ಡಿಕೆಶಿ ಅವರು ಬೈಲ್ ಮೇಲೆ ಇದ್ದಾರೆ. ಸಿದ್ದರಾಮಯ್ಯರಿಗೆ 10 ಸಾವಿರ ರೂ ದಂಡ ಕೋರ್ಟ್ ಹಾಕಿದೆ. ರಾಷ್ಟ್ರಭಕ್ತಿಯನ್ನ ಹಂಚುವ ಆರ್ ಎಸ್ ಎಸ್ ಬಗ್ಗೆ ಮಾತನಾಡುವ ಹಕ್ಕು ನಿಮಗಿಲ್ಲ ಬೇಕಾದಷ್ಟು ಹೇಳಿಕೆ,ಹೋರಾಟದಲ್ಲಿ ನಾನು  ಭಾಗವಹಿಸಿರುವೆ. ನಾನು ಒಂದೇ ಒಂದು ರೂ. ದಂಡಕಟ್ಟಿಲ್ಲ ಅಥವಾ‌ ಜೈಲಿಗೆ ಹೋಗಿ ಬಂದವನಲ್ಲ. ನೂರು ಸುಳ್ಳನ್ನ ಹೇಳ್ತಾ ಹೇಳ್ತಾ ಸತ್ಯ ಆಗುತ್ತೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅನ್ಕೊಂಡಿದ್ದಾರೆ. ಆದರೆ ಅರ್ಥ ಸಚಿವೆ ನಿರ್ಮಲಾ ಸೀತಾರಾಮ್, ಸಿಎಂ ಸಿದ್ದರಾಮಯ್ಯ ಹೇಳುತ್ತಿರುವುದು ಸುಳ್ಳು ಎಂದಿದ್ದಾರೆ. ರಾಜ್ಯ ಸರ್ಕಾರದ ಶ್ವೇತಾ ಪತ್ರ ಹೊರಡಿಸಲಿ. ಅದಕ್ಕೆ ಕೇಂದ್ರ ಸರ್ಕಾರ ತಕ್ಕ ಉತ್ತರ ನೀಡುತ್ತದೆ ಎಂದರು.

ಆರ್ ಎಸ್ ಎಸ್ ಬಗ್ಗೆ ಮಾತನಾಡಿರುವುದನ್ನ ವಾಪಾಸ್ ತೆಗೆದುಕೊಳ್ಳಿ, ನನ್ನ ಬಗ್ಗೆ ಎಫ್ಐಆರ್ ಮತ್ತು ನೋಟೀಸ್ ಕೊಡಿಸಿದ್ದೀರಿ. ಇನ್ನೂ ನೂರು ಕೇಸ್ ಅಥವಾ ನೋಟೀಸ್ ಹಾಕಿ ಬೇಜಾರಿಲ್ಲ.  ನಾನು ಹೇಳಿರುವುದು ಸರಿ ಇಲ್ಲವೆಂದು ಹೇಳಿ ನೋಟೀಸ್ ನೀಡಿದ್ದೀರಿ. ಆದರೆ ದೇಶ ವಿಭಜನೆಯ ಬಗ್ಗೆ ಮಾತನಾಡುವವರ ವಿರುದ್ಧ ಏನು ಕ್ರಮ ಎಂದು ಆಕ್ರೋಶ ವ್ಯಕ್ತಪಡಿಸಿದರು 

ನಾನು ಡಿಕೆಸು ಅವರನ್ನ ಗುಂಡಿಟ್ಟು ಕೊಲ್ಲಿ ಎಂದಿದ್ದಾರೆ ಎಂಬ ತಪ್ಪು ಸಂದೇಶವಿದೆ. ಆದರೆ ದೇಶ ವಿಭಜನೆ ಹೇಳಿಕೆ ಕೊಟ್ಟಿರುವುದನ್ನ ಖಂಡಿಸಿ ಗುಂಡಿಟ್ಟು ಕೊಲ್ಲುವ ಕಾನೂನು ತರಬೇಕು ಎಂದು ಆಗ್ರಹಿಸಿದವನು ನಾನು. ಸಚಿವ ಪ್ರಿಯಾಂಕ ಖರ್ಗೆ ಅವರು ಗುಂಡಿಕ್ಕಿ ಕೊಲ್ಲುವ ಕಾನೂನು ಜಾರಿಯಾದರೆ ಮೊದಲು ಆರ್ ಎಸ್ ಎಸ್ ಕಚೇರಿ ಬಂದ್ ಮಾಡಬೇಕು ಎಂದು ಹೇಳಿರುವ ಹೇಳಿಕೆಗೆ ಚಿಲ್ರೆ ಹೇಳಿಕೆಗೆ ಪ್ರತಿಕ್ರಿಯೆಸುವುದಿಲ್ಲ ಎಂದರು
ಈಶ್ವರಪ್ಪನವರ ಸುದ್ದಿಗೋಷ್ಠಿ ಮುಗಿತಿದ್ದಂತೆ ಬೆಂಗಳೂರಿನಲ್ಲಿ ಸಂಸದ ಡಿಕೆ ಸುರೇಶ್ ಈಶ್ವರಪ್ಪನವರು ಸಮಯ ಕೊಡಲಿ ನಾನು ಹೋಗುತ್ತೇನೆ ನನ್ನನ್ನು ಗುಂಡಿಟ್ಟು ಕೊಲ್ಲಲಿ ಎಂದು ಹೇಳಿಕೆ ನೀಡಿದ್ದರು. ಡಿ.ಕೆ. ಸುರೇಶ ಅವರ ಈ ಹೇಳಿಕೆ ಬೆನ್ನಲ್ಲೇ ಈಶ್ವರಪ್ಪ ಮತ್ತೊಮ್ಮೆ ಮಾಧ್ಯಮದವರ ಜೊತೆ ಹೇಳಿಕೆ ನೀಡುವಂತಾಯಿತು. 

ಗುಂಡಿಕ್ಕಿ ಕೊಲ್ಲುವಂತೆ ಡಿಕೆ ಸುರೇಶ್ ಹೇಳಿಕೆ ವಿಚಾರವನ್ನು ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಸ್ಪಷ್ಟವಾಗಿ ತಳ್ಳಿ ಹಾಕಿದರು.‌ಡಿಕೆ ಸುರೇಶ್ ರವರೇ ನಿಮ್ಮ ಬಗ್ಗೆ ವೈಯಕ್ತಿಕ ದ್ವೇಷ ನನಗಿಲ್ಲ. ಆದರೆ ದಕ್ಷಿಣ ಭಾರತದ ರಾಜ್ಯಗಳನ್ನು ಪ್ರತ್ಯೇಕ ರಾಷ್ಟ್ರವನ್ನಾಗಿ ಮಾಡಬೇಕೆಂಬ ನಿಮ್ಮ ಹೇಳಿಕೆ ಒಪ್ಪಲು ಸಾಧ್ಯವಿಲ್ಲ. ದೇಶವನ್ನು ವಿಭಜನೆ ಮಾಡುವ ಹೇಳಿಕೆ ರಾಷ್ಟ್ರ ದ್ರೋಹಿ ಹೇಳಿಕೆ ಅಲ್ವಾ? ಎಂದು ಡಿಕೆ ಸುರೇಶ್ ರನ್ನು ಪ್ರಶ್ನಿಸಿದರು

 

ನಿಮ್ಮನ್ನು ಗುಂಡಿಕ್ಕಿ ಕೊಲ್ಲಬೇಕು ಎಂದು ನಾನು ಎಂದು ಹೇಳಿಲ್ಲ ಹೇಳುವುದು ಇಲ್ಲ. ರಾಷ್ಟ್ರ ವಿಭಜನೆ ಮಾಡುವಂತಹ ದೇಶದ್ರೋಹಿಗಳಿಗೆ ಗುಂಡಿಗೆ ಕೊಲ್ಲುವ ಕಾನೂನು ತರಬೇಕು ಎಂದು ಒತ್ತಾಯ ಮಾಡಿದ್ದು ಹೌದು.‌. ಅನೇಕರು ಸಾರ್ವಜನಿಕವಾಗಿ ನೀಡಿದ ಹೇಳಿಕೆಯನ್ನು ಹೇಳಿಲ್ಲ ಎಂದು ವಾಪಸ್ಸು ಪಡೆಯುತ್ತಾರೆ.‌ಆದರೆ ನನ್ನ ಜಾಯಮಾನದಲ್ಲಿ ನಾನು ಹಾಗೆ ಮಾಡುವುದಿಲ್ಲ.‌ರಾಷ್ಟ್ರ ವಿಭಜನೆಯ ಹೇಳಿಕೆ ನೀಡಿರುವುದನ್ನು ನಿಮ್ಮ ಮನಸ್ಸು ಒಪ್ಪುತ್ತಾ ಹೇಳಿ? 
ನಾನು ನೀಡಿದ ಹೇಳಿಕೆಯನ್ನು ತಿರುಚುವಂತ ಪ್ರಯತ್ನ ಮಾಡುತ್ತಿದ್ದೀರಿ ನನ್ನದೇನು ಅಭ್ಯಂತರ ಇಲ್ಲ. ಇಲ್ಲಿ ರಾಷ್ಟ್ರ ಭಕ್ತಿ ಮತ್ತು ರಾಷ್ಟ್ರ ದ್ರೋಹದ  ಬಗ್ಗೆ ಚರ್ಚೆ ನಡೆಯುತ್ತಿದೆ. ದಕ್ಷಿಣ ಭಾರತದ ರಾಜ್ಯಗಳಿಗೆ ಅನುದಾನದ ನೆಪದಲ್ಲಿ ಬೇರೆ ರಾಷ್ಟ್ರದ ವಿಚಾರ ಎತ್ತುತ್ತಿದ್ದಾರೆ. 

ರಾಷ್ಟ್ರ ವಿಭಜನೆ ಹೇಳಿಕೆ ನೀಡಿದ್ದಕ್ಕೆ ಸಿದ್ದರಾಮಯ್ಯ ಡಿ.ಕೆ. ಸುರೇಶ್ ವಿರುದ್ಧ ಎಫ್ಐಆರ್ ಹಾಕಿಸಲಿ ರಾಷ್ಟ್ರ ವಿಭಜನೆಯ ಹೇಳಿಕೆ ಬಗ್ಗೆ ನನ್ನ ವಿರೋಧವಿದೆ. ಇಂತಹ ರಾಷ್ಟ್ರಧ್ರೋಹಿ ಹೇಳಿಕೆಗಳ ವಿರುದ್ಧ ಕಾನೂನು ಜಾರಿಗೆ ತರಬೇಕು ಎಂದು ಪ್ರಧಾನಿ ನರೇಂದ್ರ ಮೋದಿಗೆ ಆಗ್ರಹ ಮಾಡಿದ್ದೆ. ನಾಳೆ ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಗೆ ಕಾನೂನು ಜಾರಿಗೆ ತರಲು ಪತ್ರ ಬರೆಯುತ್ತೇನೆ. 

ನನಗೆ ಡಿಕೆ ಸುರೇಶ್ ಬಗ್ಗೆ ವೈಯಕ್ತಿಕ ದೇಶ ಇಲ್ಲ ನನ್ನ ಪ್ರಶ್ನೆ ಇರುವುದು ಅವರ ಹೇಳಿಕೆ ಬಗ್ಗೆ ಮಾತ್ರ. ಡಿಕೆ ಸುರೇಶ್ ಹೇಳಿಕೆ ದೇಶ ದ್ರೋಹಿ ಹೇಳಿಕೆ ಹೌದೋ ಅಲ್ಲವೋ ಎಂಬುದನ್ನು ಉಳಿದ ಕಾಂಗ್ರೆಸ್ಸಿಗರು ಹೇಳಲಿ.ನ್ಯಾಯಾಂಗ ದಲ್ಲಿ ಇದುವರೆಗೂ ನನಗೆ ಒಂದೇ ಒಂದು ಶಿಕ್ಷೆ ಆಗಿಲ್ಲ. ಕಾಂಗ್ರೆಸ್ ನಾಯಕ ಸುರ್ಜೆವಾಲಾ,  ಸಿಎಂ ಸಿದ್ದರಾಮಯ್ಯ ಅವರಿಗೆ 10.000 ದಂಡ ವಿಧಿಸಿದೆ . ನನ್ನ ಹೇಳಿಕೆಯನ್ನು ಟ್ವಿಸ್ಟ್ ಮಾಡಿ ಕನ್ನಡಿಗರಿಗೆ ಅನ್ಯಾಯವಾಗಲು ಬಿಡಲ್ಲ ಬಡವರಿಗೆ ತೊಂದರೆ ಮಾಡುತ್ತೀರಾ ಎಂದೆಲ್ಲಾ ಹೇಳುತ್ತಿದ್ದಾರೆ. ಕೇಂದ್ರದಿಂದ ಅನುದಾನ ತಾರತಮ್ಯದ ಬಗ್ಗೆ ತಮ್ಮ ಹೇಳಿಕೆ ಸುಳ್ಳಾಗಿದ್ದರೆ ರಾಜಕೀಯ ನಿವೃತ್ತಿ ಪಡೆಯುವುದಾಗಿ ಸಿಎಂ ಸಿದ್ದರಾಮಯ್ಯ ಹೇಳುವ ಬದಲು  ಶ್ವೇತ ಪತ್ರ ಹೊರಡಿಸಲಿ ಎಂದು  ಆಗ್ರಹಿಸಿದರು.

ಈಶ್ವರಪ್ಪನವರ ಪರ ಬ್ಯಾಟಿಂಗ್ ಮಾಡಿದ ಮಾಜಿ ಸಿಎಂ ಬಿಎಸ್ ವೈ

ಶಿವಮೊಗ್ಗದಲ್ಲಿ ‌ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ನವರು ಮಾಜಿ ಸಚಿವ ಕೆ ಎಸ್ ಈಶ್ವರಪ್ಪನವರ ಹೇಳಿಕೆಯನ್ನು ಸಮರ್ಥಿಸಿದ್ದಾರೆ. ಈಶ್ವರಪ್ಪ ಹೇಳಿದ ಮಾತನ್ನು ಕಾಂಗ್ರೆಸ್ಸಿಗರುಅಪಾರ್ಥ ಕಲ್ಪಿಸುವ ರೀತಿ ಮಾತನಾಡ್ತಿದ್ದಾರೆ
ಈಶ್ವರಪ್ಪ ರಾಷ್ಟ್ರ ದ್ರೋಹಿ ಹೇಳಿಕೆ ಕೊಡುವವರನ್ನು ಗುಂಡಿಕ್ಕಿ‌ ಕೊಲ್ಲುವ ಕಾನೂನು ತರಬೇಕು ಎಂದಿದ್ದಾರೆ ಅವರ ಹೇಳಿಕೆ ಬಗ್ಗೆ ಟೀಕೆ ಟಿಪ್ಪಣಿ ಅಪಾರ್ಥ ನಡೆಯುತ್ತಿದೆ . ಈಶ್ವರಪ್ಪನವರ ಹೇಳಿಕೆಗೂ ಕಾಂಗ್ರೆಸ್ ನಾಯಕರು ನೀಡಿರುವ ಪ್ರತಿಕ್ರಿಯೆಗಳಿಗೂ ಒಂದಕ್ಕೊಂದು ಸಂಬಂಧ ಇಲ್ಲ. ಅವರ ಹೇಳಿಕೆಗೆ ಅಪಾರ್ಥ ಕಲ್ಪಿಸುವ ಕೆಲಸ ಬೇಡ ಎಂದಿದ್ದಾರೆ. 

ಸರ್ಕಾರಿ ದುಡ್ಡಿನಲ್ಲಿ ಕಾಂಗ್ರೆಸ್‌ ಪ್ರತಿಭಟನೆ ಮಾಡುತ್ತಿದೆ: ಕೆ.ಎಸ್.ಈಶ್ವರಪ್ಪ

ಹಾಗೆ ದಾವಣಗೆರೆ ಬಡಾವಣೆ ಪೊಲೀಸ್ ಠಾಣೆಯಲ್ಲಿ ಈಶ್ವರಪ್ಪನವರ ವಿರುದ್ಧ ಹಾಕಿ ಪೊಲೀಸರು ನೋಟಿಸ್ ಕೊಟ್ಟಿರುವ ವಿಚಾರಕ್ಕೂ ಪ್ರತಿಕ್ರಿಯೆ ನೀಡಿ, ಎಫ್ ಐಆರ್ ಹಾಕಿದ್ರೆ ಏನು ತೊಂದರೆ ಇಲ್ಲ ಅದನ್ನ ಕಾನೂನಾತ್ಮಕವಾಗಿ ಎದುರಿಸುತ್ತಾರೆ ಎಂದಿದ್ದಾರೆ.  ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಂದ್ರದ ಅನುದಾನ ಕಾರ್ಯಕ್ರಮ ಕುರಿತು ನೀಡುತ್ತಿರುವ ಹೇಳಿಕೆಗಳಿಗೆ ಪ್ರತ್ಯುತ್ತರ ನೀಡಿದ್ದಾರೆ.

ಸಿದ್ದರಾಮಯ್ಯ ಏನು ಬೇಕಾದರೂ ಹೇಳಿಕೆ ಕೊಡ್ತಾರೆ. ನಾನು ಹೇಳಿದ್ದೆ ಸರಿ ಅಂತಾ ಸಾಬೀತು‌ ಮಾಡುವ ಪ್ರಯತ್ನ ಮಾಡ್ತಾರೆ. ಸಿದ್ದರಾಮಯ್ಯ ಶಾಸಕರನ್ನು ದೆಹಲಿಗೆ ಕರೆದುಕೊಂಡು ಹೋಗಿ ಪ್ರತಿಭಟನೆ ಮಾಡಿದ್ದಾರೆ ಅದನ್ನು ಖಂಡಿಸುತ್ತೇನೆ. ಪ್ರತಿಭಟನೆ ಮಾಡುವ ಮೂಲಕ ರಾಜಕೀಯ ದೊಂಬರಾಟ ಮಾಡಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.

click me!