ಲೈಂಗಿಕ ಕಿರುಕುಳ: ತಮ್ಮ ಅಧ್ಯಾಪಕನನ್ನೇ ಅಟ್ಟಾಡಿಸಿ ಹೊಡೆದ ವಿದ್ಯಾರ್ಥಿಗಳು..!

Published : May 27, 2019, 10:25 PM ISTUpdated : May 27, 2019, 11:14 PM IST
ಲೈಂಗಿಕ ಕಿರುಕುಳ: ತಮ್ಮ ಅಧ್ಯಾಪಕನನ್ನೇ ಅಟ್ಟಾಡಿಸಿ ಹೊಡೆದ ವಿದ್ಯಾರ್ಥಿಗಳು..!

ಸಾರಾಂಶ

ವಿದ್ಯೆ ಕಲಿಸುವ ಗುರು ದೇವರಿಗೆ ಸಮಾನ ಅಂತಿವಿ, ಆದರೆ ಇಲ್ಲೊಬ್ಬ ಶಿಕ್ಷಕನೊಬ್ಬ ವಿದ್ಯಾರ್ಥಿನಿಯರ ಜತೆ ಅಸಭ್ಯವಾಗಿ ವರ್ತಿಸಿ ಸಖತ್ ಗೂಸಾ ತಿಂದಿದ್ದಾನೆ.

ದಾವಣಗೆರೆ,[ಮೇ.27] : ಗುರುವಿಗೆ ಸಮಾಜದಲ್ಲಿ ಇರುವ ಸ್ಥಾನವೇನೋ ದೊಡ್ಡದೇ. ಆದರೆ ಆ ಸ್ಥಾನವನ್ನು ಉಳಿಸಿಕೊಳ್ಳುವುದೂ ಅವನ ಜವಾಬ್ದಾರಿ. ಆದ್ರೆ ಇಲ್ಲೊಬ್ಬ ಶಿಕ್ಷಕ ವಿದ್ಯಾರ್ಥಿನಿಯರ ಜತೆ ಅಸಭ್ಯವಾಗಿ ವರ್ತಿಸಿ ವಿದ್ಯಾರ್ಥಿಗಳಿಂದಲೇ ಬಿಸಿ-ಬಿಸಿ ಕಜ್ಜಾಯ ಪಡೆದಿದ್ದಾರೆ.

ದಾವಣಗೆರೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡದ ಅಧ್ಯಾಪಕನಿಗೆ ವಿದ್ಯಾರ್ಥಿಗಳು ಸೇರಿ ಕಾಲೇಜಿನಲ್ಲೇ ಅಟ್ಟಾಡಿಸಿ ಸಖತ್ ಗೂಸಾ ಕೊಟ್ಟಿದ್ದಾರೆ. ಬಸವರಾಜ್ ಎನ್ನುವ ಅಧ್ಯಾಪಕ ವಿದ್ಯಾರ್ಥಿನಿಯರ ಫೋನ್ ನಂಬರ್ ತೆಗೆದುಕೊಂಡು ಅಸಭ್ಯವಾಗಿ ವರ್ತಿಸುತ್ತಿದ್ದನು. ಇದರಿಂದ ಬೇಸರಗೊಂಡ ವಿದ್ಯಾರ್ಥಿನಿಯರು ಇದನ್ನು ವಿದ್ಯಾರ್ಥಿಗಳಿಗೆ ತಿಳಿಸಿದ್ದಾರೆ. 

ವಿದ್ಯಾರ್ಥಿನಿಯರ ನೋವನ್ನು ಕೇಳಿದ ವಿದ್ಯಾರ್ಥಿಗಳು ಅಧ್ಯಾಪಕನನ್ನು ಹಿಡಿದು ಕಾಲೇಜು ಮುಂಭಾಗದಲ್ಲಿಯೇ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಸದ್ಯ ಅಧ್ಯಾಪಕನನ್ನು ಕಾಲೇಜು ಮಂಡಳಿ ಅಮಾನತು ಮಾಡಿದೆ. 

ಆದರೆ ಅಧಿಕೃತವಾಗಿ ಯಾವುದೇ ವಿದ್ಯಾರ್ಥಿನಿಯರು ನಮಗೆ ದೂರು ನೀಡಲಿಲ್ಲ. ಹೀಗಾಗಿ ನಾವು ಯಾವುದೇ ಕಾನೂನು ಕ್ರಮ ಕೈಗೊಂಡಿಲ್ಲ ಎಂದು ಕಾಲೇಜು ಆಡಳಿತ ಮಂಡಳಿ ಸ್ಪಷ್ಟಪಡಿಸಿದೆ.

PREV
click me!

Recommended Stories

ನೇತ್ರದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆದ ಲಲಿತಮ್ಮ
ಇನ್​​​ಸ್ಟಾಗ್ರಾಂನಲ್ಲಿ ಬಂದಿತ್ತು ಗಂಡನ ಮದುವೆ ಆಮಂತ್ರಣ: ಪ್ರೀತಿ ಹೆಸರಲ್ಲಿ ಏನೆಲ್ಲಾ ಮಾಡಿದ್ದ ಗೊತ್ತಾ?