ದಾವ​ಣ​ಗೆರೆ ಬೆಣ್ಣೆ ದೋಸೆ ಸವಿದ ನೆರೆ ಸಂತ್ರಸ್ತರು

Published : Aug 21, 2019, 10:15 AM ISTUpdated : Aug 21, 2019, 10:27 AM IST
ದಾವ​ಣ​ಗೆರೆ ಬೆಣ್ಣೆ ದೋಸೆ ಸವಿದ ನೆರೆ ಸಂತ್ರಸ್ತರು

ಸಾರಾಂಶ

ಪ್ರವಾಹದಿಂದ ಸಂತ್ರಸ್ತರಾದ ಜನರಿಗೆ ಬಿಸಿಬಿಸಿ ದಾವಣಗೆರೆ ಬೆಣ್ಣೆ ದೋಸೆ ಉಣಬಡಿಸಲಾಯಿತು. ಬೆಳಗಾವಿಯ ಹುಕ್ಕೇರಿ ತಾಲೂಕಿನಲ್ಲಿ ದಾವಣಗೆರೆ ಜಿಲ್ಲಾ ಶ್ರೀ ಅನ್ನಪೂರ್ಣೇಶ್ವರ ಅಡುಗೆ ತಯಾರಕರ ಕ್ಷೇಮಾ​ಭಿ​ವೃದ್ಧಿ ಸಂಘದವರು ಬೆಣ್ಣೆ ದೋಸೆ, ಶಿರಾ, ಪೊಂಗಲ್‌, ಚಟ್ನಿ, ಬಿಸಿ ಬಿಸಿಯಾಗಿ ತಯಾರಿಸಿ ನೆರೆ ಸಂತ್ರ​ಸ್ತ​ರಿಗೆ ಬಡಿ​ಸಿ​ದರು.

ಬೆಳಗಾವಿ(ಆ.21): ಹುಕ್ಕೇರಿ ತಾಲೂಕಿನ ಪಾಶ್ಚಾಪೂರದಲ್ಲಿ ದಾವಣಗೆರೆ ಜಿಲ್ಲಾ ಶ್ರೀ ಅನ್ನಪೂರ್ಣೇಶ್ವರ ಅಡುಗೆ ತಯಾರಕರ ಕ್ಷೇಮಾ​ಭಿ​ವೃದ್ಧಿ ಸಂಘದವರು ಬೆಣ್ಣೆ ದೋಸೆ, ಶಿರಾ, ಪೊಂಗಲ್‌, ಚಟ್ನಿ, ಬಿಸಿ ಬಿಸಿಯಾಗಿ ತಯಾರಿಸಿ ನೆರೆ ಸಂತ್ರ​ಸ್ತ​ರಿಗೆ ಬಡಿ​ಸಿ​ದರು.

ಸಂಘದ ಸಹ ಕಾರ್ಯದರ್ಶಿ ಮಂಜುನಾಥ ಮಾತನಾಡಿ, ಆಹಾರ ಪದಾರ್ಥ ಕೊಡುವ ಬದಲು ನಾವು ಬೆಣ್ಣೆ ದೋಸೆ ತಯಾರಿಸಿ ಕೊಡುತ್ತಿದ್ದೇವೆ. ಈಗಾಗಲೇ ಮೂರ್ನಾಲ್ಕು ಬೆಣ್ಣೆದೋಸೆ ಉಣಬಡಿಸಿದ್ದೇವೆ. ನಮ್ಮ ಸಂಘದಿಂದ ಸುಮಾರು 50,000 ಬೆಣ್ಣೆ ದೋಸೆ ತಯಾರಿಸಿ ಸಂತ್ರಸ್ತ​ರಿಗೆ ನೀಡುವ ಉದ್ದೇಶ ಹೊಂದಲಾಗಿದ್ದು, ಈಗ 15,000 ಬೆಣ್ಣೆ ದೋಸೆ ಉಣಬಡಿಸಿದ್ದೇವೆ ಎಂದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಬೆಣ್ಣೆ ದೋಸೆ ಸವಿದ ಶಾಸಕ ಸತೀಶ್ ಜಾರಕಿಹೊಳಿ ಮಾತ​ನಾಡಿ, ನೆರೆ ಸಂತ್ರಸ್ತ​ರಿಗೆ ರಾಜ್ಯದ ಸಂಘ ಸಂಸ್ಥೆಗಳು, ಎನ್‌ಜಿಒಗಳು, ದಾನಿಗಳು ಸಾಕಷ್ಟು ಪ್ರಮಾಣದಲ್ಲಿ ನೆರ​ವಾ​ಗು​ತ್ತಿ​ದ್ದಾರೆ. ಇದು ಸಂತ​ಸ​ಕರ ಎಂದರು.

ಬೆಳಗಾವಿ: ಮುಳುಗಡೆಯಾಗಿದ್ದವುಗಳ ಪೈಕಿ 6 ಸೇತುವೆ ಸಂಚಾ​ರ ಮುಕ್ತ

ಜಿಪಂ ಸದಸ್ಯ ಮಂಜುನಾಥ ಪಾಟೀಲ, ವಂದನಾ ಶಿವಾಜಿ ಬಸನಾಯಿಕ, ಅಬ್ದುಲಗನಿ ದರ್ಗಾ, ಎನ್‌.ಎಸ್‌. ಮೋಮಿನ, ಡಾ. ಅಶೋಕ ಉಮನಾಬಾದಿಮಠ, ವಿನೋದ ಡೊಂಗ್ರೆ, ಫಜಲ್‌ ಮಕಾನದಾರ, ಅಲ್ಲಾ ಅರಳಿಕಟ್ಟಿ, ಶಿವಕುಮಾರ ಗುಡಗನಟ್ಟಿ, ವಿನಾಯಕ ಹಜ್ಜೆ, ಸಂತೋಷ ಮುತ್ನಾಳ, ಅಮರ ಉಮನಾಬಾದಿಮಠ, ವಿನೋದ ಉಮನಾಬಾದಿಮಠ, ರಫೀಕ ನದಾಫ, ಮಾರುತಿ ನಾಯಿಕ, ಮಹ್ಮದ ರಫೀಕ ಮೋಮಿನ, ಬಾನು ನದಾಫ್‌, ಸರಫರಾಜ ಪೀರಜಾದೆ ಮತ್ತು ದಾವಣಗೆರೆ ಜಿಲ್ಲಾ ಶ್ರೀ ಅನ್ನಪೂರ್ಣೇಶ್ವರ ಅಡುಗೆ ತಯಾರಕರ ಕ್ಷೇಮಾ​ಭಿ​ವೃದ್ಧಿ ಸಂಘದ ಅಧ್ಯಕ್ಷ ಎಚ್‌.ವಿ. ಶಾಸ್ತ್ರೀ, ಉಪಾಧ್ಯಕ್ಷ ಜವಳಿ ನಾಗರಾಜ, ಕಾರ್ಯದರ್ಶಿ ಪ್ರಭುಸ್ವಾಮಿ ಮತ್ತು ಮಂಜುನಾಥ, ಖಜಾಂಚಿ ಈ ನಾಗರಾಜ, ಸದಸ್ಯರು ದೋಸೆ ತಯಾರಿಕೆ ಕಾರ್ಯದಲ್ಲಿ ನಿರತರಾಗಿ ಸಂತ್ರಸ್ತ​ರಿಗೆ ಉಣಬಡಿಸಿದರು.

PREV
click me!

Recommended Stories

ಭದ್ರಾವತಿ: ಜೈ ಭೀಮ್ ನಗರದಲ್ಲಿ ಪ್ರೇಮಿಗಳ ವಿಚಾರಕ್ಕೆ ರಕ್ತಪಾತ: ಇಬ್ಬರು ದುರ್ಮರಣ!
'ನಿಮ್ಮ ಸುರಕ್ಷತೆ ನನಗೂ ಮುಖ್ಯ..' ಮಹಿಳಾ ಪ್ರಯಾಣಿಕರ ಮನ ಗೆದ್ದ ಆಟೋ ಚಾಲಕ, ಸಂದೇಶ ವೈರಲ್ ಮಾಡಿದ ಬೆಂಗಳೂರು ಪೊಲೀಸರು!