ಅ. 1 ರಿಂದ ಬೆಳಗಾವಿಯಲ್ಲಿ ನಾಡಹಬ್ಬ ಉತ್ಸವ

By Web DeskFirst Published Sep 29, 2019, 10:56 AM IST
Highlights

ಪ್ರತಿ ವರ್ಷದಂತೆ ಈ ವರ್ಷ ಅ.1  ರಿಂದ 5 ವರೆಗೆ ನಾಡಹಬ್ಬ ಉತ್ಸವ| ಈ ಬಾರಿ ಜಿಲ್ಲೆಯಲ್ಲಿ ಸುರಿದ ಭಾರಿ ಮಳೆಯಿಂದ ಭೀಕರ ಪ್ರವಾಹ ಉಂಟಾಗಿ, ಜನರು ಮನೆ, ಮಠ ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ| ಇಂತಹ ಸಮಯದಲ್ಲಿ ನಾಡ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸುವುದು ಸರಿಯಲ್ಲ| ಪ್ರತಿ ವರ್ಷವು ನಾಡ ಹಬ್ಬವನ್ನು ಆಚರಿಸುತ್ತಾ ಬಂದಿರುವುದರಿಂದ. ಈ ವರ್ಷವು ಆಚರಿಸುವುದು ಅನಿವಾರ್ಯವಾಗಿದೆ| ಅತಿವೃಷ್ಟಿ ಹಾಗೂ ಪ್ರವಾಹದಿಂದಾಗಿ ಈ ಬಾರಿಯ ನಾಡಹಬ್ಬವ ಉತ್ಸವವನ್ನು ಅತಿ ಸರಳವಾಗಿ ಆಚರಿಸಲಾಗುವುದು| 

ಬೆಳಗಾವಿ(ಸೆ.29): ನಗರದಲ್ಲಿ ಪ್ರತಿ ವರ್ಷದಂತೆ ಈ ವರ್ಷ ಅ.1  ರಿಂದ 5 ವರೆಗೆ ನಾಡಹಬ್ಬ ಉತ್ಸವವನ್ನು ನಗರದ ಕನ್ನಡ ಸಾಹಿತ್ಯ ಭವನ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ನಾಡಹಬ್ಬ ಉತ್ಸವ ಸಮಿತಿ ಅಧ್ಯಕ್ಷ ಡಾ. ಎಚ್.ಬಿ ರಾಜಶೇಕರ ಹೇಳಿದರು. 

ನಗರದಲ್ಲಿ ಶನಿವಾರ ಪ್ರತಿಕಾಗೊಷ್ಟೀಯಲ್ಲಿ ಮಾತನಾಡಿದ ಅವರು, ಈ ಬಾರಿ ಜಿಲ್ಲೆಯಲ್ಲಿ ಸುರಿದ ಭಾರಿ ಮಳೆಯಿಂದ ಭೀಕರ ಪ್ರವಾಹ ಉಂಟಾಗಿ, ಜನರು ಮನೆ, ಮಠ ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ. ಇಂತಹ ಸಮಯದಲ್ಲಿ ನಾಡ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸುವುದು ಸರಿಯಲ್ಲ. ಆದರೆ ಪ್ರತಿ ವರ್ಷವು ನಾಡ ಹಬ್ಬವನ್ನು ಆಚರಿಸುತ್ತಾ ಬಂದಿರುವುದರಿಂದ. ಈ ವರ್ಷವು ಆಚರಿಸುವುದು ಅನಿವಾರ್ಯವಾಗಿದೆ. ಆಚರಿಸದೆ ಹೋದರೆ 92 ವರ್ಷ ಗಳಿಂದ ನಡೆಸಿಕೊಂಡು ಬಂದಂತಹ ನಾಡಹಬ್ಬ ಉತ್ಸವ ನಿಲ್ಲಿಸುವುದು ಸರಿ ಅಲ್ಲ. ಹಾಗಾಗಿ ಅತಿವೃಷ್ಟಿ ಹಾಗೂ ಪ್ರವಾಹದಿಂದಾಗಿ ಈ ಬಾರಿಯ ನಾಡಹಬ್ಬವ ಉತ್ಸವವನ್ನು ಅತಿ ಸರಳವಾಗಿ ಆಚರಿಸಲಾಗುವುದು ಎಂದು ಹೇಳಿದ್ದಾರೆ. 

5  ದಿನಗಳ ನಾಡಹಬ್ಬ ಉತ್ಸವ 

ಪ್ರತಿವರ್ಷದಂತೆ ಈ ಬಾರಿಯು 5  ದಿನಗಳ ಕಾಲ ನಾಡಹಬ್ಬ ಉತ್ಸವವನ್ನು ಹಮ್ಮಿಕೊಳ್ಳಲಾಗಿದೆ. 5  ದಿನಗಳ ಕಾಲ ಪ್ರತಿದಿನ ಸಂಜೆ 6  ಗಂಟೆಯಿಂದ ಹಲವಾರು ಕಾರ್ಯಕ್ರಮಗಳು ನಡೆಯಲಿವೆ. ಇದು ಕೇವಲ ಮನರಂಜನೆಯ ಉತ್ಸವವಾಗದೆ, ಇದರಲ್ಲಿ ನೆರೆ ಹಾವಳಿ, ದೇಶದ ಅಖಂಡತೆ, ಜನರ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಲಾಗುತ್ತದೆ ಎಂದು ಹೇಳಿದರು. 

ಅ.1  ರಂದು ಸಂಜೆ 6  ಗಂಟೆಗೆ ನಾಡದೇವಿ ಭುವನೇಶ್ವರಿ ಪ್ರತಿಮೆ ಪ್ರತಿಷ್ಠಾಪನೆ ಉದ್ಘಾಟನೆ ನಡೆಯಲಿದೆ. ಕಾರ್ಯಕ್ರಮವನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ ಉದ್ಘಾಟಿಸುವರು. ರೈಲ್ವೆ ರಾಜ್ಯ ಸಚಿವ ಸುರೇಶ ಅಂಗಡಿ ಅಧ್ಯಕ್ಷತೆ ವಹಿಸುವರು. ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ ಕುಲಪತಿ ಪ್ರೊ. ಎಂ. ರಾಮಚಂದ್ರಗೌಡ ಮುಖ್ಯ ಅತಿಥಿಯಾಗಿ ಆಗಮಿಸುವರು. ಡಾ. ಮಹೇಶ ಜೋಶಿ ಶಿಶುನಾಳ ಶರೀಫರ ದ್ವಿತೀಯ ಶತಮಾನೋತ್ಸವ ಸಂಸ್ಮ ರಣೆಯ ವಿಶೇಷ ಉಪನ್ಯಾಸ ನಿಡುವರು. ನಾಗನೂರ ರುದ್ರಾಕ್ಷಿಮಠದ ಡಾ. ಸಿದ್ಧರಾಮ ಸ್ವಾಮಿ ಸಾನ್ನಿಧ್ಯ ವಹಿಸುವರು. 

ಅ.2  ರಂದು, ಜಮ್ಮು ಕಾಶ್ಮಿರದ 370 ನೇ ವಿಧಿ ಬಗ್ಗೆ ಕಾರ್ಯಕ್ರಮ ನಡೆಯಲಿದ್ದು. ಕೆಎಲ್‌ಇ ಸಂಸ್ಥೆ ಯ ವೈದ್ಯರು, ನಿರ್ದೇಶಕರಾದ ಡಾ. ಎಚ್. ಬಿ ರಾಜಶೇಖರ ಅಧ್ಯಕ್ಷತೆ ವಹಿಸುವರು. ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ, ಪ್ರೊಫೆಸರ್ ಆಫ್ ಸೋಶಿಯಲ್ ವರ್ಕ್ ಡಾ. ಅಶೋಕ ಅಂಟೋನಿ ಡಿಸೋಜಾ ಮುಖ್ಯ ಅತಿಥಿಗಳಾಗಿ ಆಗಮಿಸುವರು. ಘೋಡಗೇರಿ ವಿರಕ್ತಮಠದ ಕಾಶಿನಾಥ ಸ್ವಾಮಿ ಸಾನ್ನಿಧ್ಯ ವಹಿಸುವರು. 

ಅ.3  ರಂದು ಅಖಂಡ ಭಾರತ ಪರಿಕಲ್ಪನೆ ಕಾರ್ಯಕ್ರಮ ನಡೆಯಲಿದ್ದು, ನಗರದ ಸಾಹಿತಿ ಯ. ರು ಪಾಟೀಲ ಅಧ್ಯಕ್ಷತೆ ವಹಿಸುವರು. ಹುಬ್ಬಳ್ಳಿಯ ವೈದ್ಯ ಹಾಗೂ ಸಾಮಾಜಿಕ ಕಾರ್ಯಕರ್ತ ಡಾ. ಮಲ್ಲಿಕಾರ್ಜುನ ಬಾಳಿಕಾಯಿ ಮುಖ್ಯ ಅತಿಥಿಯಾಗಿ ಭಾಗವಹಿಸುವರು. ನಗರದ ನಿವೃತ್ತ ಅಧ್ಯಾಪಕ ವಿ.ವಿ. ಹಡಗಿನಾಳ ಕನ್ನಡ ನಾಡು-ನುಡಿ ಕುರಿತು ವಿ ಶೇಷ ಉಪನ್ಯಾಸ ನೀಡುವರು. ನಗರದ ಕಾರಂಜಿ ಮಠದ ಶಿವಯೋಗಿ ಸ್ವಾಮಿ ಸಾನ್ನಿಧ್ಯ ವಹಿಸುವರು. 

ಅ.4  ರಂದು, ಪ್ರಕೃತಿ ವಿಕೋಪ ಹಾಗೂ ಸಂತ್ರಸ್ತರ ಬದುಕು ಬವಣೆ ಕಾರ್ಯಕ್ರಮ ನಡೆಯಲಿದ್ದು. ನಗರದ ಮಾಜಿ ಮಹಾಪೌರ ಡಾ. ಸಿದ್ದನಗೌಡ ಪಾಟೀಲ ಅಧ್ಯಕ್ಷತೆ ವಹಿಸುವರು. ನಗರದ ಐ.ಜಿ.ಪಿ ಎಚ್. ಜಿ. ರಾಘವೇಂದ್ರ ಸುಹಾಸ ಮುಖ್ಯ ಅತಿಥಿಯಾಗಿ ಆಗಮಿಸುವರು. ರಾಮದುರ್ಗದ ನಿಸರ್ಗ ಚಿಕಿತ್ಸಕ ಡಾ. ಹನುಮಂತ ಮಳಲಿ ಅತಿಥಿ ಉಪನ್ಯಾಸಕರಾಗಿ ಆಗಮಿಸುವರು. ಕಡೋಲಿಯ ಗುರುಬಸವಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸುವರು ಎಂದು ಹೇಳಿದ್ದಾರೆ.  
 

click me!