ದಸರಾ ಮೆರವಣಿಗೆಗೂ ಮುನ್ನವೇ ಕಾಡಿಗೆ ಮರಳಿದ ಆನೆ

Published : Sep 10, 2019, 12:43 PM ISTUpdated : Sep 10, 2019, 12:48 PM IST
ದಸರಾ ಮೆರವಣಿಗೆಗೂ ಮುನ್ನವೇ  ಕಾಡಿಗೆ ಮರಳಿದ ಆನೆ

ಸಾರಾಂಶ

ದಸರೆಂದಯ ಮೈಸೂರಿಗೆ ಬಂದಿದ್ದ ಆನೆಯನ್ನು ಮತ್ತೆ ಕಾಡಿಗೆ ವಾಪಸ್ ಕಳುಹಿಸಲಾಗುತ್ತಿದೆ ಕಾರಣವೇನು ಇಲ್ಲಿದೆ. 

ಮೈಸೂರು [ಸೆ.10]: ದಸರಾ ಹಿನ್ನೆಲೆಯಲ್ಲಿ ಮೈಸೂರಿಗೆ ಆಗಮಿಸಿದ್ದ ಆನೆ ಈಶ್ವರನನ್ನು ಕಾಡಿನತ್ತ ವಾಪಸ್ ಕಳುಹಿಸಲಾಗುತ್ತಿದೆ. 

ದುಬಾರೆ ಆನೆ ಶಿಬಿರದಿಂದ ಮೊದಲ ತಂಡದಲ್ಲಿ ದಸರೆಗೆಂದು ಆಗಮಿಸಿದ್ದ ಆನೆ ಈಶ್ವರ ಆನೆ ಇಲ್ಲಿನ ಪರಿಸರಕ್ಕೆ ಹೊಂದಿಕೊಳ್ಳದ ಕಾರಣ ವಾಪಸ್ ಕಳುಹಿಸಲು ನಿರ್ಧರಿಸಲಾಗಿದೆ. 

ಈಶ್ವರನ ಬದಲಾಗಿ ದಸರೆಗೆ ಬೇರೆ ಆನೆಯನ್ನು ಕರೆತರಲು ಅರಣ್ಯಾಧಿಕಾರಿಗಳು ಚಿಂತನೆ ನಡೆಸಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ದಸರೆಗೆ ಸಂಬಂಧಿಸಿದಂತೆ ನಡೆದ ಸಭೆಯಲ್ಲಿ ಮೈಸೂರು ಉಸ್ತುವಾರಿ ಸಚಿವರಾದ ವಿ. ಸೋಮಣ್ಣ ಆನೆಯ ಬಗ್ಗೆ ಆತಂಕ ಹೊರಹಾಕಿದ್ದರು. ಅಲ್ಲದೇ ಆನೆಯ ವರ್ತನೆ ಸಾರ್ವಜನಿಕರಿಂದಲೂ ದೂರುಗಳು ಬಂದ ಹಿನ್ನೆಲೆ ವಾಪಸ್ ಕಳಿಸಲು ನಿರ್ಧಾರ ಮಾಡಿದ್ದಾರೆ. 

ಮೊದಲ ತಂಡದ ಜೊತೆಗೆ ಮೊದಲ ಆಗಸ್ಟ್ ನಲ್ಲಿ  ಅಂಬಾರಿ ಆನೆ ಅರ್ಜುನ, ಅಭಿಮನ್ಯು, ಧನಂಜಯ, ವಿಜಯ ಮತ್ತು ವರಲಕ್ಷ್ಮಿ ಆನೆಗಳೊಂದಿಗೆ ಈಶ್ವರ ಆಗಮಿಸಿದ್ದು, ಇದೀಗ ಆತ ಹೊಂದಿಕೊಳ್ಳದ ಕಾರಣ ವಾಪಸ್ ಕಳಿಸಲಾಗುತ್ತಿದೆ.

PREV
click me!

Recommended Stories

ಪುಟಿನ್‌ಗೆ ಇಲ್ಲೇ ಎಲೆಕ್ಷನ್‌ ನಿಲ್ಲೋಕೆ ಟಿಕೆಟ್‌ ಕೊಡ್ತಾರೆ ಅಂದ್ಕೊಂಡಿದ್ದೆ.. ಸಂತೋಷ್‌ ಲಾಡ್‌ ಲೇವಡಿ
ಗಡುವು ಮೀರಿಸಿದರೆ ಮುಂದೆ ಕೆಲಸವಿಲ್ಲ: ಮೆಟ್ರೋ ಗುತ್ತಿಗೆದಾರರಿಗೆ ಡಿ.ಕೆ.ಶಿವಕುಮಾರ್‌ ಎಚ್ಚರಿಕೆ