ದರ್ಗಾದ ಹುಂಡಿಗೆ ಬೆಂಕಿ: ನೋಟುಗಳೆಲ್ಲ ಬೆಂಕಿಗಾಹುತಿ

By Suvarna News  |  First Published Feb 23, 2021, 10:30 PM IST

ದರ್ಗಾದ ಹುಂಡಿಗೆ ಬೆಂಕಿ ತಗುಲಿದ್ದು, ಹುಂಡಿಯಲ್ಲಿದ್ದ ಲಕ್ಷಾಂತರ ರೂ. ಬೆಂಕಿಗಾಹುತಿಯಾಗಿದೆ. ಸದ್ಯ ಸ್ಥಳದಲ್ಲಿ ಗ್ರಾಮಾಂತರ ಪೊಲೀಸರು ಮೊಕ್ಕಂ ಹೂಡಿದ್ದಾರೆ.


ದಾವಣಗೆರೆ, (ಫೆ.23):  ದರ್ಗಾದ ಹುಂಡಿಗೆ ಬೆಂಕಿ ಬಿದ್ದಿರುವ ಘಟನೆ ಇಂದು (ಮಂಗಳವಾರ) ದಾವಣಗೆರೆ ಜಿಲ್ಲೆಯ ದೊಡ್ಡಬಾತಿಯ ಚಮಶಾ ವಲಿ ದರ್ಗಾದಲ್ಲಿ ನಡೆದಿದೆ. 

ದರ್ಗಾದ ಹುಂಡಿಗೆ ಬೆಂಕಿ ಬಿದ್ದ ಪರಿಣಾಮ ಭಕ್ತರು ಹಾಕಿದ್ದ 2000, 500, 200, 100 ರೂಪಾಯಿ ಸೇರಿದಂತೆ ಅದರಲ್ಲಿದ್ದ ಇತರೆ ಮೌಲ್ಯದ ನೋಟುಗಳೆಲ್ಲ ಬೆಂಕಿಗಾಹುತಿಯಾಗಿದೆ. 

Tap to resize

Latest Videos

 ಹುಂಡಿಯಲ್ಲಿ ಕಾಣಿಸಿಕೊಂಡ ಬೆಂಕಿಯಿಂದ ದರ್ಗಾ ಸಿಬ್ಬಂದಿಗಳಲ್ಲಿ ಆತಂಕ ಸೃಷ್ಠಿಯಾಗಿದ್ದು, ತಕ್ಷಣವೇ ಹುಂಡಿಗೆ ನೀರು‌ ಹಾಕುವ ಮೂಲಕ ಸಿಬ್ಬಂದಿಗಳು ಬೆಂಕಿ ನಂದಿಸಿದ್ದಾರೆ.

ಆರೋಗ್ಯ ಕ್ಷೇತ್ರಕ್ಕೆ ಮೋದಿ ಹೊಸ ಪ್ಲಾನ್, ಕಾರ್ಮಿಕನಿಗೆ ವರವಾದ ಲಾಕ್‌ಡೌನ್: ಫೆ.23ರ ಟಾಪ್ 10 ಸುದ್ದಿ!

ಆದರೆ, ಹುಂಡಿಗೆ ಬೆಂಕಿ ಹೇಗೆ ತಗುಲಿತು ಎಂದು ತಿಳಿದುಬಂದಿಲ್ಲ.  ದಾವಣಗೆರೆ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು,  ಸದ್ಯ, ಸುಟ್ಟ ನೋಟುಗಳನ್ನು ಪೊಲೀಸರು ಪರಿಶೀಲನೆ ನಡೆಸಿದರು. 

ಜೊತೆಗೆ, ದರ್ಗಾದ ಸಿಸಿಟಿವಿಯನ್ನು ಸಹ ಪರಿಶೀಲನೆ ನಡೆಸಿದ್ದಾರೆ. ಹುಂಡಿಗೆ ಬೆಂಕಿ ಹೇಗೆ ತಗುಲಿತು ಎನ್ನುವುದರ ಸತ್ಯಾಸತ್ಯತೆ ತಿಳಿದುಬರಬೇಕಿದೆ.

click me!