ದಲಿತರು ಕೂಡ ಹಿಂದೂಗಳೇ ಆದರೆ ನಮ್ಮನ್ನು ಯಾಕೆ ನೀವು ಜೊತೆ ಸೇರಿಸಿಕೊಳ್ಳಲ್ಲ ಎಂದು ಬಿಜೆಪಿಗೆ ಮಲ್ಲಿಕಾರ್ಜುನ ಖರ್ಗೆ ಪ್ರಶ್ನಿಸಿದ್ದಾರೆ. ಈಗ ಚುನಾವಣೆ ಬರುತ್ತಿದೆ ಅಂತ ಬಿಜೆಪಿ ಹಿಂದೂ- ಮುಸ್ಲಿಂ ದಂಗಲ್ ಶುರುಮಾಡಿದೆ.
ಬೀದರ್ (ಮೇ.9): ದೇಶದ ಮೂಲ ನಿವಾಸಿಗಳು ನಾವು, ನೀವು (ಆರ್ಯ ಸಮಾಜ) ಗಂಗಾ ನದಿ ತೀರದಿಂದ ಮಧ್ಯ ಏಷ್ಯಾದಿಂದ ಬಂದವರು, ನಮ್ಮನ್ನು ಹಿಂದೂಗಳ ಜತೆ ಸೇರಿಸಿಕೊಳ್ಳಲ್ಲ ಯಾಕೆ? ದೇಗುಲಗಳಿಗೆ ಬರಲು ಬಿಡಲ್ಲ, ನೀರು ಕೊಡಲ್ಲ, ಚಾಯ್ ಕೊಡಲ್ಲ, ನಮ್ಮನ್ನು ಯಾಕೆ ನಿಮ್ಮ ಜೊತೆ ತಿರುಗಾಡಲು ಬಿಡಲ್ಲ ಎಂದು ಇಂದು ನಾನು ಕೇಳುತ್ತೇನೆ ಎಂದು ಕಾಂಗ್ರೆಸ್ ನ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಬಿಜೆಪಿ (BJP) ವಿರುದ್ಧ ಗುಡುಗಿದ್ದಾರೆ.
ಬೀದರ್ (Bidar) ಜಿಲ್ಲೆಯ ಭಾಲ್ಲಿ ತಾಲೂಕಿನ ಬಳತ ಗ್ರಾಮದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಯುವಕ ಸಂಘ ಭಾರತೀಯ ಬೌದ್ಧ ಮಹಾಸಭಾದ ವತಿಯಿಂದ ನಡೆದ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಪ್ರತಿಮೆ ಅನಾವರಣ ಸಮಾರಂಭದಲ್ಲಿ ಭಾಗಿಯಾಗಿದ್ದ ಮಲ್ಲಿಕಾರ್ಜುನ ಖರ್ಗೆ ಅವರು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ಚುನಾವಣೆ ಸಮೀಸುತ್ತಿರುವ ಹಿನ್ನೆಲೆ ಹಿಂದೂ-ಮುಸ್ಲಿಂ ದಂಗಲ: ಇದಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಖರ್ಗೆ 2023 ಸಾರ್ವತ್ರಿಕ ಚುನಾವಣೆ ಹಾಗೂ 2024 ರ ಲೋಕಸಭಾ ಚುನಾವಣೆಯ ದೃಷಿಯಿಂದ ಈ ಲೌಡ್ ಸ್ಪೀಕರ್ ದಂಗಲ್ ಅಜಾನ್ ವರ್ಸಸ್- ಸುಪ್ರಭಾತ ಗೊಂದಲ ಸೃಷ್ಟಿ ಮಾಡಿದ್ದಾರೆ.
TUMAKURU ಶ್ರೀರಾಮ ಸೇನೆ ಕರೆ ನೀಡಿದ ಸುಪ್ರಭಾತ ಸ್ತುತಿಗೆ ನೀರಸ ಪ್ರತಿಕ್ರಿಯೆ
ಇಲ್ಲಿವರೆಗೂ ಇವರು ಎಲ್ಲಿಗೆ ಹೋಗಿದ್ರು. ಹನುಮಾನ್ ಚಾಲೀಸಾ ಆಗಲಿ, ರಾಮ ಭಕ್ತರೆ ಆಗಲಿ ಎಲ್ಲಿಗೆ ಹೋಗಿದ್ರು. ಈ ವಿಷಯದಲ್ಲಿ ನಾವು ಶೋಷಿತರ ಪರವಾಗಿ ನಿಲ್ಲುತ್ತೆವೆ. ಯಾರಿಗೆ ಅನ್ಯಾಯವಾಗುತ್ತೊ ಅವರ ಪರ ನಿಲ್ಲುತ್ತೆವೆ. ಮುಸ್ಲಿಂರ ಮೇಲೆ ಅನ್ಯಾಯವಾದ್ರೆ ನಾವು ಮಾತನಾಡೋದು ತಪ್ಪಾ? ದಲಿತರು, ಲಿಂಗಾಯತ ರೈತರು, ಹಿಂದೂಳಿದ ಜನಾಂಗದ ಮೇಲೆ ಅನ್ಯಾಯವಾದ್ರೆ ನಾವು ಮಾತನಾಡೋದು ತಪ್ಪಾ? ಎಲ್ಲಿ, ಅನ್ಯಾಯ, ಅತ್ಯಾಚಾರ, ದಬ್ಬಾಳಿಕೆ ನಡೆಯುತ್ತೆಯೋ ಅಲ್ಲಿ ಕಾಂಗ್ರೆಸ್ ಮುಂದಾಳತ್ವಲ್ಲಿ ಪ್ರತಿಭಟನೆ ಮಾಡುತ್ತೆವೆ ಎಂದು ಮಲ್ಲಿಕಾರ್ಜುನ ಖರ್ಗೆ ಕಿಡಿಕಾರಿದ್ದಾರೆ.
ONGC RECRUITMENT 2022: ನಾನ್ ಎಕ್ಸಿಕ್ಯೂಟಿವ್ ಹುದ್ದೆಗಳಿಗೆ ನೇಮಕಾತಿ
ಇನ್ನು ಭಾನುವಾರ ಭಾಲ್ಕಿ ಪಟ್ಟಣದ ಹುಮನಾಬಾದ್ ರಸ್ತೆಯ ಪ್ರಯಾಗ್ ಫಂಕ್ಷನ್ ಹಾಲ್‌ನಲ್ಲಿ ತಾಲೂಕು ಕಾಂಗ್ರೆಸ್ ಪಕ್ಷದ ವತಿಯಿಂದ ನಡೆದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿ ಖರ್ಗೆ, ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಸಮಾಜವನ್ನು ಕೆಡಿಸುವ ಪ್ರಯತ್ನ ನಡೆಯುತ್ತಿದೆ. ಇನ್ನಾದರೂ ಜನತೆ ಎಚ್ಚೆತ್ತುಕೊಳ್ಳದಿದ್ದರೆ ಮುಂದೆ ದೇಶಕ್ಕೆ ಉಳಿಗಾಲವಿಲ್ಲ ಎಂದಿದ್ದಾರೆ.
ಅಧಿಕಾರದಲ್ಲಿರುವ ಬಿಜೆಪಿ ಜನತೆಗೆ ಏನು ಕೊಡುಗೆ ನೀಡಿದೆ. ಅಗತ್ಯ ವಸ್ತುಗಳ ಬೆಲೆ ಏರಿಕಡಯಾಗುತ್ತಿದೆ. ಪೆಟ್ರೋಲ್, ಡಿಸೇಲ್, ಎಲ್‌ಪಿಜಿ ದರ ನಿರಂತರವಾಗಿ ಗಗನಕ್ಕೆ ಏರುತ್ತಿದೆ. ಜಿಎಸ್‌ಟಿ, ಸೆಸ್ ಬರೆ ಬಡ ಜನರ ಮೇಲೆ ತೀವ್ರ ಪರಿಣಾಮ ಬೀರಿದೆ.
ಕೇಂದ್ರ, ರಾಜ್ಯ ಸರಕಾರಗಳು ಬಡವರ ಹೊಟ್ಟೆ ಮೇಲೆ ಹೊಡೆಯುತ್ತಿದೆ. ಆದರೆ, ಜನ ಮಾತ್ರ ಮೌನ ವಹಿಸಿರುವುದು ಏಕೆ ಎಂಬುದು ತಿಳಿಯುತ್ತಿಲ್ಲ. ದೇಶದ ಜನರ ರಕ್ಷಣೆಗೆ ಇರುವ ಸಂವಿಧಾನ, ಪ್ರಜಾಪ್ರಭುತ್ವ ಬದಲಾವಣೆಗೆ ಹುನ್ನಾರ ನಡೆಯುತ್ತಿದೆ. ಹೀಗಾದರೆ ಮುಂದೆ ಗುಲಾಮರಾಗಿ ಬದುಕು ನಡೆಸುವ ಪರಿಸ್ಥಿತಿ ತಲೆದೋರಲಿದೆ. ಇನ್ನಾದರೂ ಜನ ಒಗ್ಗಟ್ಟಾಗಿ ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕು ಎಂದರು.
ಕಲ್ಯಾಣ ಕರ್ನಾಟಕ ಭಾಗದ ಜನರಿಗೆ ಇರುವ ಸಮಸ್ಯೆಗಳನ್ನು ಅಂದಿನ ಪ್ರಧಾನಿ ಮನಮೋಹನಸಿಂಗ್, ಸೋನಿಯಾ ಗಾಂಧಿ ಅವರಿಗೆ ಮನವರಿಕೆ ಮಾಡಿಕೊಟ್ಟು 371(ಜೆ) ಕಾಯ್ದೆ ತಿದ್ದುಪಡಿ ತಂದಿರುವುದರಿಂದ ಈ ಭಾಗದವರಿಗೆ ಉದ್ಯೋಗ, ಶಿಕ್ಷಣದಲ್ಲಿ ಮೀಸಲಾತಿ ನೀಡಲಾಗುತ್ತಿದೆ ಎಂದು ಇದೇ ವೇಳೆ ಉಲ್ಲೇಖಿಸಿದರು.