ಚಿಕ್ಕಬಳ್ಳಾಪುರ: ಚೌಲ್ಟ್ರಿ ನೀಡದ್ದಕ್ಕೆ ಅದರೆದುರೇ ದಲಿತ ಜೋಡಿ ಮದುವೆ..!

By Kannadaprabha News  |  First Published Nov 6, 2022, 8:30 AM IST

ಶುಕ್ರವಾರ ಕಲ್ಯಾಣ ಮಂಟಪದಲ್ಲಿ ಯಾವುದೇ ಮದುವೆ ಇರಲಿಲ್ಲ. ತಾವು ದಲಿತರು ಎಂಬ ಕಾರಣಕ್ಕೆ ಉದ್ದೇಶ ಪೂರ್ವಕವಾಗಿ ಕಲ್ಯಾಣ ಮಂಟಪ ಕೊಟ್ಟಿಲ್ಲ ಎಂದು ಆವುಲುಕೊಂಡಪ್ಪ ಆರೋಪ 


ಚಿಕ್ಕಬಳ್ಳಾಪುರ(ನ.06): ದಲಿತರೆಂಬ ಕಾರಣಕ್ಕಾಗಿ ಮುಜರಾಯಿ ಇಲಾಖೆಗೆ ಸೇರಿದ ದೇವಾಲಯದ ಕಲ್ಯಾಣ ಮಂಟಪದಲ್ಲಿ ಮದುವೆಗೆ ನಿರಾಕರಿಸಿದ ದೇವಾಲಯದ ಆಡಳಿತ ಮಂಡಳಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೂಚಿಸಿ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಗುಡಿಬಂಡೆ ತಹಸೀಲ್ದಾರ್‌ಗೆ ಶನಿವಾರ ದೂರು ನೀಡಿದ್ದಾರೆ. ಇದೇ ವೇಳೆ, ದಲಿತ ಕುಟುಂಬದವರು ಪ್ರತಿಭಟನಾರ್ಥ ಲಕ್ಷ್ಮೀ ವೆಂಕಟೇಶ್ವರ ದೇವಾಲಯದ ಮುಂದೆಯೇ ಮದುವೆ ಮಾಡಿದ್ದಾರೆ.

ಗುಡಿಬಂಡೆ ತಾಲೂಕಿನ ಬ್ರಾಹ್ಮಣರಹಳ್ಳಿಯ ನಿವಾಸಿ ಅವುಲುಕೊಂಡಪ್ಪ ಎಂಬುವರು, ಮಹೇಶ್‌ ಹಾಗೂ ವೆಂಕಟಲಕ್ಷ್ಮೇ ಎಂಬುವರ ಮದುವೆಗಾಗಿ ವೆಂಕಟೇಶ್ವರ ದೇವಾಲಯದ ಕಲ್ಯಾಣ ಮಂಟಪ ಬುಕ್‌ ಮಾಡಲು ತೆರಳಿದ್ದಾಗ, ಬೇರೊಂದು ಮದುವೆ ನಿಗದಿಯಾಗಿದೆಯೆಂದು ಹೇಳಿ ಕಲ್ಯಾಣ ಮಂಟಪದ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ವ್ಯವಸ್ಥಾಪಕರು ಬುಕಿಂಗ್‌ ನಿರಾಕರಿಸಿದ್ದರು. 

Tap to resize

Latest Videos

ಭಾರತ ಸಂವಿಧಾನದ ಆಶೋತ್ತರದ ಜೀವನ ಎಲ್ಲರಿಗೂ ಸಿಗಲಿ: ಉಪಲೋಕಾಯುಕ್ತ ಕೆ.ಎನ್.ಫಣೀಂದ್ರ

ಆದರೆ, ಶುಕ್ರವಾರ ಕಲ್ಯಾಣ ಮಂಟಪದಲ್ಲಿ ಯಾವುದೇ ಮದುವೆ ಇರಲಿಲ್ಲ. ತಾವು ದಲಿತರು ಎಂಬ ಕಾರಣಕ್ಕೆ ಉದ್ದೇಶ ಪೂರ್ವಕವಾಗಿ ಕಲ್ಯಾಣ ಮಂಟಪ ಕೊಟ್ಟಿಲ್ಲ ಎಂದು ಆವುಲುಕೊಂಡಪ್ಪ ಆರೋಪಿಸಿದ್ದು, ಈ ಬಗ್ಗೆ ತಹಸೀಲ್ದಾರ್‌ಗೆ ದೂರು ನೀಡಿದ್ದರು. ಅಲ್ಲದೆ, ಶುಕ್ರವಾರ ದೇವಾಲಯದ ಮುಂದೆಯೇ ಮದುವೆ ಮಾಡಿದ್ದರು. ವಿಷಯ ತಿಳಿದು ಶನಿವಾರ ಬ್ರಾಹ್ಮಣರಹಳ್ಳಿಗೆ ಭೇಟಿ ನೀಡಿ, ಪರಿಶೀಲನೆ ನಡೆಸಿದ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು, ತಹಶೀಲ್ದಾರ್‌ಗೆ ದೂರು ನೀಡಿ, ಸೂಕ್ತ ಕ್ರಮಕ್ಕೆ ಆಗ್ರಹಿಸಿದ್ದಾರೆ.
 

click me!