ಕೊರೋನಾ ಅಟ್ಟಹಾಸಕ್ಕೆ ದಕ್ಷಿಣ ಕನ್ನಡದಲ್ಲಿ ಓರ್ವ ಮಹಿಳೆ ಬಲಿ..!

Published : Apr 19, 2020, 06:38 PM ISTUpdated : Apr 19, 2020, 07:02 PM IST
ಕೊರೋನಾ ಅಟ್ಟಹಾಸಕ್ಕೆ ದಕ್ಷಿಣ ಕನ್ನಡದಲ್ಲಿ ಓರ್ವ ಮಹಿಳೆ ಬಲಿ..!

ಸಾರಾಂಶ

ಭಾನುವಾರ ಬೆಂಗಳೂರಿನಲ್ಲಿ ಕೊರೋನಾಗೆ ಓರ್ವ ಮಹಿಳೆ ಬಲಿಯಾದ ಬೆನ್ನಲ್ಲೇ ಇದೀಗ ದಕ್ಷಿಣ ಕನ್ನಡದಲ್ಲೂ ಸಹ ಒಂದು ಸಾವಾಗಿದೆ.

ಬೆಂಗಳೂರು, (ಏ.19) : ರಾಜ್ಯದಲ್ಲಿ ಇಂದು (ಭಾನುವಾರ) ಕೊರೊನಾಗೆ ಮತ್ತೊಂದು ಬಲಿಯಾಗಿದೆ. ದಕ್ಷಿಣ ಕನ್ನಡದಲ್ಲಿ ಶ್ವಾಸಕೋಶದ ತೊಂದರೆ ಬಳಲುತ್ತಿದ್ದ 50 ವರ್ಷದ ಮಹಿಳೆಯೊಬ್ಬರು ಕೊರೋನಾ ಸೋಂಕಿನಿಂದ ಬಲಿಯಾಗಿದ್ದಾರೆ. 

"

ಈ ಮೂಲಕ ರಾಜ್ಯದಲ್ಲಿ ಕೊರೋನಾಗೆ ಬಲಿಯಾದವರ ಸಂಖ್ಯೆ 16ಕ್ಕೆ ಏರಿಕೆಯಾಗಿದೆ. ಬಂಟ್ವಾಳದ ಕಸ್ಬಾ ನಿವಾಸಿಯಾಗಿರುವ ಮಹಿಳೆ ದಿನಾಂಕ 18/04/2020ರಂದು ತೀವ್ರ ಶ್ವಾಸಕೋಶದ ತೊಂದರೆ ಇರುವುದಾಗಿ ವೆನ್ಲಾಕ್ ಆಸ್ಪತ್ರೆಗೆ ದಾಖಲಾಗಿದ್ದರು. 

ಹೊಸ ಆದೇಶದಿಂದ ಕುಡುಕರಿಗೆ ಬೇಸರ, ದೂರವಾಯ್ತಾ ರಾಬರ್ಟ್ ರಾಣಿ ಸಡಗರ? ಏ.19ರ ಟಾಪ್ 10 ಸುದ್ದಿ!

ಬಳಿಕ ಇವರನ್ನು ತೀವ್ರ ನಿಗಾ ಘಟಕಟದಲ್ಲಿ ಚಿಕಿತ್ಸೆ ನೀಡಲಾಗಿತ್ತು. ಅಷ್ಟೇ ಅಲ್ಲದೇ ಇವರ ಗಂಟಲು ದ್ರವವನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಆದ್ರೆ, ವರದಿ ನಿರೀಕ್ಷೆಯಲ್ಲಿರುವಾಗೇ ಮಹಿಳೆ ಮೃತಪಟ್ಟಿದ್ದಾರೆ.

ಮೃತ ಮಹಿಳೆಗೆ ಕೋವಿಡ್-19 ದೃಢಪಟ್ಟಿರುವ ಹಿನ್ನೆಲೆಯಲ್ಲಿ ವೈದ್ಯಕೀಯ ಶಿಷ್ಠಾಷಾರದಂತೆ ಜಿಲ್ಲಾ ಆರೋಗ್ಯ ಅಧಿಕಾರಿಗಳ ತಂಡದ ನೇತೃತ್ವದಲ್ಲಿ ಅಂತ್ಯ ಕ್ರಿಯೆ ನಡೆಯಲಿದೆ.

 ಮೃತ ಮಹಿಳೆ ಪತಿ ಮತ್ತು ಮಗನನ್ನು ಕ್ವಾರಂಟೈನ್‌ನಲ್ಲಿ ಇರಿಸಲಾಗಿದ್ದು, ಇವರ ಗಂಟಲು ದ್ರವವನ್ನು ಪರೀಕ್ಷೆಗೆ ಕಳುಹಿಸಲಾಗಿದೆ.  ಇನ್ನು  ಬಂಟ್ವಾಳದಲ್ಲಿ ತೀವ್ರ ನಿಗಾ ವಹಿಸಲಾಗಿದ್ದು, ಸಂಪರ್ಣವಾಗಿ ಸೀಲ್‌ಡೌನ್ ಮಾಡಲಾಗಿದೆ.

ಮನೆಯಿಂದ ಯಾರು ಹೊರಗಡೆ ಬರಬಾರದು ಎಂದು ಪೊಲೀಸರು ಮೈಕ್‌ನಲ್ಲಿ ಅನೌನ್ಸ್ ಮಾಡುವ ಮೂಲಕ ಮನವಿ ಮಾಡಿದ್ದಾರೆ.

PREV
click me!

Recommended Stories

ದ್ವೇಷ ಭಾಷಣ ಪ್ರಕರಣ; ಆರ್‌ಎಸ್‌ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್‌ಗೆ ನಿರೀಕ್ಷಣಾ ಜಾಮೀನು!
Uttara Kannada: ಆಸ್ಪತ್ರೆಗೆ ಹೋಗಿದ್ದ ಗರ್ಭಿಣಿ ಹುಟ್ಟುಹಬ್ಬದಂದೇ ಸಾವು; ಹೊಟ್ಟೆಯಲ್ಲೇ ಅಸುನೀಗದ ಮಗು!