ಭಾರೀ ಅವ್ಯವಹಾರದಲ್ಲಿ ರಾಜೀನಾಮೆ ಕೊಟ್ಟ ಸೆಂಥಿಲ್?

By Web DeskFirst Published Sep 8, 2019, 7:44 PM IST
Highlights

ರಾಜೀನಾಮೆ ಕೊಟ್ಟ ಐಎಎಸ್ ಅಧಿಕಾರಿ ಸಸಿಕಾಂತ್ ಸೆಂಥಿಲ್ ಮೇಲೆ ಅವ್ಯವಹಾರದ ಆರೋಪ/ ದಕ್ಷಿಣ ಕನ್ನಡ ಲಾರಿ ಮಾಲಿಕರ ಸಂಘಗಳ ಒಕ್ಕೂಟದಿಂದ ಲೋಕಾಯುಕ್ತ ಮೊರೆ ಹೋಗಲು ತೀರ್ಮಾನ? 

ಮಂಗಳೂರು[ಸೆ. 08]  ವೈಯಕ್ತಿಕ ಕಾರಣಕ್ಕೆ ರಾಜೀನಾಮೆ ಕೊಟ್ಟಿರುವ ಐಎಎಸ್ ಅಧಿಕಾರಿ ಸಸಿಕಾಂತ್ ಸೆಂಥಿಲ್ ವಿರುದ್ದ ಭಾರೀ ಅವ್ಯವಹಾರದ ಆರೋಪ ಕೇಳಿಬಂದಿದೆ.

ಸ್ಯಾಂಡ್ ಬಝಾರ್ ಆ್ಯಪ್ ಮೂಲಕ ಸೆಂಥಿಲ್  ಅವ್ಯವಹಾರ ನಡೆಸಿದ್ದಾರೆ. ಒಂದೇ ಪರ್ಮಿಟ್ ಗೆ  ಹಲವು ಕಡೆ ಮರಳು ತೆಗೆಯಲು ಒಪ್ಪಿಗೆ ನೀಡಿದ್ದಾರೆ. ತುಂಬೆ ಡ್ರೆಜ್ಜಿಂಗ್ ನಲ್ಲೂ ಅವ್ಯವಹಾರ ಮಾಡಿದ್ದಾರೆ. ದಿಲ್ಲಿ ಕಂಪೆನಿಗೆ ಡ್ರೆಜ್ಜಿಂಗ್ ಮಾಡಲು ಟೆಂಡರ್ ಮಾಡಿದ್ದಾರೆ. ಮಾನದಂಡ ಇಲ್ಲದೆ ಕಂಪೆನಿಗೆ ಟೆಂಡರ್ ಕೊಟ್ಟಿದ್ದಾರೆ. ಟೆಂಡರ್ ನಿಯಮ ಮುರಿದು ಕೊಟ್ಟಿದ್ದಾರೆ ಎಂದು ದಕ್ಷಿಣ ಕನ್ನಡ ಲಾರಿ ಮಾಲಿಕರ ಸಂಘಗಳ ಒಕ್ಕೂಟ ಗಂಭೀರ ಆರೋಪ ಮಾಡಿದೆ.

ಸೆಂಥಿಲ್‌: ಹಠದಲ್ಲಿ ಅಧಿಕಾರಿಯಾಗಿ ಈಗ ಅಧಿಕಾರ ಬಿಟ್ಟರು..!

ಈ ಬಗ್ಗೆ ಹೈ ಕೋರ್ಟ್ ಗೆ ತಪ್ಪು ಮಾಹಿತಿ ನೀಡಿದ್ದಾರೆ. ಮರಳು ತೆಗೆಯೋದನ್ನು ಹೂಳೆತ್ತುದಾಗಿ ಮಾಹಿತಿ ನೀಡಿ ದಾರಿ ತಪ್ಪಿಸಿದ್ದಾರೆ. ಮೂರು ಸಾವಿರದ  ಮರಳನ್ನು 6 ಸಾವಿರಕ್ಕೆ ಮಾರಾಟ ಮಾಡಿದ್ದಾರೆ. ಇದರ ಬಗ್ಗೆ ತನಿಖೆ ಆಗಬೇಕು ಎಂದು ಒತ್ತಾಯಿಸಲಾಗಿದೆ.

ಲಾರಿಗಳಿಗೆ GPS ಅಳವಡಿಸಲು ಟೆಂಡರ್ ಕರೆದಿದ್ದಾರೆ. ಉಡುಪಿ ಜಿಲ್ಲೆಯಲ್ಲಿ ಬ್ಲಾಕ್ ಲೀಸ್ಟ್ ನಲ್ಲಿರುವ ಕಂಪನಿಗೆ ಟೆಂಡರ್  ನೀಡಲಾಗಿದೆ. T4U ಎಂಬ ಕಂಪೆನಿಗೆ ಟೆಂಡರ್ ಕೊಟ್ಟಿದ್ದಾರೆ.  ಸೀಝ್ ಆದ ಮರಳನ್ನು ಒಂದೇ ಕಂಪೆನಿಗೆ ಕೊಟ್ಟಿದ್ದಾರೆ. ಓಷಿಯನ್ ಟೆಕ್ಕಿ ಎಂಬ ಕಂಪೆನಿಗೆ ಕೊಟ್ಟಿದ್ದಾರೆ. ಸಸಿಕಾಂತ್ ಸೆಂಥಿಲ್ ವಿರುದ್ದ ಲೋಕಾಯುಕ್ತ ಕ್ಕೆ ದೂರು ನೀಡಲಾಗುತ್ತದೆ ಎಂದು  ದಕ್ಷಿಣ ಕನ್ನಡ ಲಾರಿ ಮಾಲಿಕರ ಸಂಘಗಳ ಒಕ್ಕೂಟ ಹೇಳಿದೆ.

click me!