ಸಿಎಂ ಮತ್ತು ಕಟೀಲ್ ನಡುವೆ ಭಿನ್ನಾಭಿಪ್ರಾಯ..ಎಲ್ಲಾ ಪ್ಲ್ಯಾಂಟರ್‌ಗಳ ಕೆಲ್ಸ!

By Web Desk  |  First Published Sep 8, 2019, 7:09 PM IST

ನನ್ನ ಮತ್ತು ಸಿಎಂ ನಡುವೆ ಭಿನ್ನಾಭಿಪ್ರಾಯ ಇಲ್ಲ/ ಇದೆಲ್ಲ ನ್ಯೂಸ್ ಫ್ಲ್ಯಾಂಟರ್ ಗಳ ಕೆಲಸ/ ಪಕ್ಷ ಸಂಘಟನೆಗೆ ಇಡೀ ರಾಜ್ಯ ಸುತ್ತುತ್ತೇನೆ/ ವಿಜಯಪುರದಲ್ಲಿ ನಳೀನ್ ಕುಮಾರ್ ಕಟೀಲ್


ವಿಜಯಪುರ[ಸೆ. 08]  ಸಿಎಂ ಬಿಎಸ್ ಯಡಿಯೂರಪ್ಪ  ಮತ್ತು ನನ್ನ ಮಧ್ಯೆ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ ಕಟೀಲ್ ಸ್ಪಷ್ಟಪಡಿಸಿದ್ದಾರೆ.

ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಸಿಎಂ ತಮ್ಮ ಮಧ್ಯೆ ಯಾವುದೇ ಭಿನ್ನಮತ ವ್ಯಕ್ತವಾಗಿಲ್ಲ. ಯಡಿಯೂರಪ್ಪ ನನಗೆ ಮಾರ್ಗದರ್ಶಕರು. ಪಕ್ಷ ಸಂಘಟಿಸುವ ಕುರಿತು ಉತ್ತಮ ಚರ್ಚೆಯಾಗಿದೆ. ನಮ್ಮ ಕಡೆ ಕಾಫಿ ಪ್ಲ್ಯಾಂಟರ್ ಥರ ನ್ಯೂಸ್ ಪ್ಲ್ಯಾಂಟರ್ ಈ ಸುದ್ದಿಯನ್ನು ಸೃಷ್ಟಿ ಮಾಡಿದ್ದಾರೆ ಎಂದರು.

Latest Videos

undefined

ಬಿಜೆಪಿಯಲ್ಲಿ ದುಃಖಿಗಳಿಲ್ಲ, ಎಲ್ಲರೂ ಸುಖಿ: ನಳಿನ್

ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್  ಕುರಿತು ಮಾಡಿರುವ ಟೀಕೆ ಟೀಕೆಯಲ್ಲ. ಅದು ಮಾರ್ಗದರ್ಶನ ಅವರು ಹೇಳಿದಂತೆ ನಾನು ಮಂಗಳೂರು, ಉಡುಪಿಯಲ್ಲಿ ಸಕ್ರಿಯನಾಗಿದ್ದೆ. ಕೇರಳ ಬಿಜೆಪಿ ಉಸ್ತುವಾರಿಯಾಗಿ ಕಾರ್ಯ ನಿರ್ವಹಿಸಿದ್ದೇನೆ. ಈಗ ಪಕ್ಷ ನನಗೆ ರಾಜ್ಯಾಧ್ಯಕ್ಷ ಸ್ಥಾನದ ಜವಾಬ್ದಾರಿ ನೀಡಿದ್ದಾರೆ. ಇನ್ನು ಮುಂದೆ ರಾಜ್ಯಾದ್ಯಂತ ಸಂಚರಿಸಿ ಪಕ್ಷ ಸಂಘಟಿಸುತ್ತೇನೆ ಎಂದರು.

ರಾಜ್ಯ ಮತ್ತು ಜಿಲ್ಲಾ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಅಕ್ಟೋಬರ್, ನವೆಂಬರ ವೇಳೆಗೆ ಪೂರ್ಣವಾಗಲಿದೆ. ಐಎಎಸ್ ಅಧಿಕಾರಿ ಸಸಿಕಾಂತ್ ಸೆಂಥಿಲ್ ವೈಯಕ್ತಿಕ ಕಾರಣಕ್ಕಾಗಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇದಕ್ಕೂ ಬಿಜೆಪಿಗೂ ಸಂಬಂಧವಿಲ್ಲ ಎಂದರು.

click me!