ಪ್ರಯಾಣಿಕ ಕೋಳಿಮಾಂಸ ತಂದಿದ್ದಕ್ಕೆ ಬಸ್ ಸೀದಾ ಪೊಲೀಸ್ ಠಾಣೆಗೆ ತೆಗೆದುಕೊಂಡು ಹೋದ ಚಾಲಕ!

By Ravi Janekal  |  First Published Oct 15, 2023, 3:13 PM IST

ಪ್ರಯಾಣಿಕನೋರ್ವ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಕೋಳಿ ಮಾಂಸ ತಂದಿದ್ದಕ್ಕೆ  ಚಾಲಕ ಬಸ್ ಪೊಲೀಸ್ ಠಾಣೆಗೆ ತೆಗೆದುಕೊಂಡು ಹೋದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ತುಂಬೆ ಗ್ರಾಮದಲ್ಲಿ ನಡೆದಿದೆ.


ದಕ್ಷಿಣ ಕನ್ನಡ (ಅ.15) : ಪ್ರಯಾಣಿಕನೋರ್ವ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಕೋಳಿ ಮಾಂಸ ತಂದಿದ್ದಕ್ಕೆ  ಚಾಲಕ ಬಸ್ ಪೊಲೀಸ್ ಠಾಣೆಗೆ ತೆಗೆದುಕೊಂಡು ಹೋದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ತುಂಬೆ ಗ್ರಾಮದಲ್ಲಿ ನಡೆದಿದೆ.

ಪ್ರಯಾಣಿಕ ಸುರೇಶ್ ಎಂಬವರು ತುಂಬೆಯಲ್ಲಿ ಸ್ಟೇಟ್ ಬ್ಯಾಂಕ್- ಪುತ್ತೂರು ಬಸ್ ಹತ್ತಿದ್ದರು. ಹತ್ತುವ ವೇಳೆ ಕೈ ಚೀಲದಲ್ಲಿ ಕೋಳಿ ಮಾಂಸ ಹಿಡಿದುಕೊಂಡು ಬಸ್ ಹತ್ತಿದ್ದ. ಈ ವೇಳೆ ಮಾಂಸದ ವಾಸನೆ ಬಂದಿದೆ. ಕೋಳಿ ಮಾಂಸ ಬಸ್‌ನಲ್ಲಿ ತರಲು ಅವಕಾಶವಿಲ್ಲ, ಕೆಳಗಿಳಿಯುವಂತೆ ಕಂಡಕ್ಟರ್ ಸೂಚಿಸಿದ್ದಾನೆ ಈ ವೇಳೆ ಕಂಡಕ್ಟರ್ ಮತ್ತು ಪ್ರಯಾಣಿಕನ ನಡುವೆ ವಾಗ್ವಾದ ಆಗಿದೆ. ಪ್ರಯಾಣಿಕನಿಗೆ ನಿರ್ವಾಹಕ ಅವಾಚ್ಯ ಶಬ್ದದಿಂದ ಬೈದಿದ್ದಾನೆ. ಪ್ರಯಾಣಿಕ ಬಸ್ ನಿಂದ ಇಳಿಯದ ಕಾರಣ ಪ್ರಯಾಣಿಕನ ಸಮೇತ ಚಾಲಕ ಸೀದಾ ಬಂಟ್ವಾಳ ಪೊಲೀಸ್ ಠಾಣೆಗೆ ತಂದಿದ್ದಾನೆ. ಠಾಣೆಯಲ್ಲಿ ಎಸ್‌ಐ ರಾಮಕೃಷ್ಣರಿಂದ ಸಾರಿಗೆ ಚಾಲಕ ಮತ್ತು ನಿರ್ವಾಹಕನಿಗೆ ಬುದ್ಧಿ ಮಾತು ಕಳಿಸಿದ್ದಾರೆ.

Tap to resize

Latest Videos

ಬೆಂಗಳೂರಲ್ಲಿ ನಾಯಿದು ಕಬಾಬ್‌, ನಾಯಿದು ಮಂಚೂರಿ ಮಾರಾಟ: ಈ ಹೋಟೆಲ್‌ಗೆ ಹೋಗೋ ಮುನ್ನ ಎಚ್ಚರ!

ಈ ಬಗ್ಗೆ ಕೆಎಸ್‌ಆರ್‌ಟಿಸಿ ಬಂಟ್ವಾಳ ವಿಭಾಗೀಯ ಅಧಿಕಾರಿ ಶ್ರೀಶ ಭಟ್ ಅವರನ್ನು ವಿಚಾರಿಸಿದಾಗ, ಕೋಳಿ,ಮೀನು ಮಾಂಸ  ಬಸ್ ನಲ್ಲಿ ತರುವಂತಿಲ್ಲ ಎಂಬ ಆದೇಶವಿದೆ. ಜೀವ ಇರುವ ವಸ್ತುವನ್ನು ತರಬಹುದು, ಮಾಂಸ ಇತರ ಪ್ರಯಾಣಿಕರಿಗೆ ವಾಸನೆ ಬರುತ್ತದೆ ಎಂಬ ಕಾರಣಕ್ಕೆ ನಿಷಿದ್ದವಾಗಿದೆ ಎಂದು ಮಾಹಿತಿ ನೀಡಿದರು.

click me!