ಅನ್ನದಾತರ ಕೈ ಹಿಡಿದ ಹೈನುಗಾರಿಕೆ: ಶಾಸಕ ಎಂ.ವಿ.ವೀರಭದ್ರಯ್ಯ

By Kannadaprabha News  |  First Published Mar 15, 2023, 5:18 AM IST

ಹಿಂದುಳಿದ ಪ್ರದೇಶದಲ್ಲಿ ಹೈನುಗಾರಿಕೆ ರೈತರ ಕೈಹಿಡಿದಿದೆ ಎಂದು ಶಾಸಕ ಎಂ.ವಿ.ವೀರಭದ್ರಯ್ಯ ತಿಳಿಸಿದರು.


 ಮಧುಗಿರಿ :  ಹಿಂದುಳಿದ ಪ್ರದೇಶದಲ್ಲಿ ಹೈನುಗಾರಿಕೆ ರೈತರ ಕೈಹಿಡಿದಿದೆ ಎಂದು ಶಾಸಕ ಎಂ.ವಿ.ವೀರಭದ್ರಯ್ಯ ತಿಳಿಸಿದರು.

ಮಧುಗಿರಿ ತಾಲೂಕಿನ ಮಾಲಿಮರಿಯಪ್ಪ ರಂಗ ಮಂದಿರದಲ್ಲಿ ತುಮಕೂರು ಹಾಲು ಒಕ್ಕೂಟ, ತುಮಕೂರು ಜಿಲ್ಲಾ ರೈತರ ಮತ್ತು ಎಂಪಿಸಿಎಸ್‌ ನೌಕರರ ಹಾಗೂ ರೈತ ಕಲ್ಯಾಣ ಟ್ರಸ್ಟ್‌ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ಅರ್ಹ ಫಲಾನುಭವಿಗಳಿಗೆ ಚೆಕ್‌ ವಿತರಣಾ ಸಮಾರಂಭ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

Tap to resize

Latest Videos

ಬರಗಾಲದಿಂದ ತತ್ತರಿಸಿದ್ದ ತಾಲೂಕಿನ ಜನತೆಗೆಕೈ ಹಿಡಿದಿದೆ. ರೈತ ಕಲ್ಯಾಣ ಟ್ರಸ್ಟ್‌ ವತಿಯಿಂದ ನೀಡುವ ಸವಲತ್ತುಗಳನ್ನು ಫಲಾನುಭವಿಗಳು ಸದುಪಯೋಗಪಡಿಸಿಕೊಂಡು ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸಕ್ಕೆ ಪೋ›ತ್ಸಾಹ ನೀಡಬೇಕು. ಬಿಜೆಪಿ ಸರ್ಕಾರ ನಮ್ಮನ್ನು ಮಲತಾಯಿಧೋರಣೆಯಿಂದ ನೋಡುತ್ತಿದ್ದು ಅನುದಾನ ಬಿಡುಗಡೆಯಲ್ಲಿ ತಾರತಮ್ಯ ಎಸಗಿದೆ. ಆದರೂ ಪ್ರಾಮಾಣಿಕವಾಗಿ ಪ್ರಯತ್ನಪಟ್ಟು ಸಾವಿರ ಕೋಟಿಗೂ ಹೆಚ್ಚು ಅನುದಾನ ತಂದು ಕ್ಷೇತ್ರವನ್ನು ಅಭಿವೃದ್ಧಿಪಡಿಸಿರುವ ತೃಪ್ತಿ ನನಗಿದ್ದು ಮತ್ತೊಮ್ಮೆ ನಿಮ್ಮ ಆಶೀರ್ವಾದ ಬಯಸಿದ್ದೇನೆಂದರು.

… ಹಾಲಿ ನಿರ್ದೇಶಕ ಕೊಂಡವಾಡಿ ಚಂದ್ರಶೇಖರ್‌ ಮಾತನಾಡಿ, ಇಂದು 1 ಕೋಟಿ ರು. ಗಳ ಚೆಕ್‌ಗಳನ್ನು ಸುಮಾರು 300 ಫಲಾನುಭವಿಗಳಿಗೆ ವಿತರಿಸಲಾಗುತ್ತಿದ್ದು, ಚೆಕ್‌ ವಿತರಣಾ ಕಾರ್ಯಕ್ರಮದ ವಿರುದ್ಧ ಕೆಲವರು ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಫಲಾನುಭವಿಗಳಿಗೆ ಸವಲತ್ತುಗಳನ್ನು ವಿತರಿಸುತ್ತಿದ್ದು, ಆರೋಪ ಮಾಡುವವರು ಖುದ್ದಾಗಿ ಫಲಾನುಭವಿಗಳ ಬಳಿ ವಿಚಾರಿಸಬಹುದು ಎಂದರು. ಹಾಲು ಉತ್ಪಾದಕರ ಸಂಘಗಳಿಗೆ ಶಾಸಕ ಎಂ.ವಿ.ವೀರಭದ್ರಯ್ಯರವರು ತಾಲೂಕಿನ ಹಾಲು ಉತ್ಪಾದಕರ ಸಹಕಾರ ಸಂಘಗಳ ನೂತನ ಕಟ್ಟಡಗಳ ನಿರ್ಮಾಣಕ್ಕೆ ತಲಾ 3 ಲಕ್ಷ ಅನುದಾನ ನೀಡಿದ್ದಾರೆ ಎಂದರು.

ಪುರಸಭಾ ಅಧ್ಯಕ್ಷ ತಿಮ್ಮರಾಜು, ಸದಸ್ಯರಾದ ಎಂ.ಆರ್‌.ಜಗನ್ನಾಥ್‌, ಎಂ.ಎಲ್….ಗಂಗರಾಜು , ಜಿ.ಪಂ ಮಾಜಿ ಸದಸ್ಯ ಎಚ್‌.ಕೆಂಚಮಾರಯ್ಯ ಪಿಎಲ್‌ಡಿ ಬ್ಯಾಂಕ್‌ ಮಾಜಿ ಅಧ್ಯಕ್ಷರಾದ ಚಿಕ್ಕೋಬಳ ರೆಡ್ಡಿ , ಮೂಡ್ಲಪ್ಪ , ತಾಲೂಕು ಪಂಚಾಯಿತಿ ಮಾಜಿ ಸದಸ್ಯರಾದ ದೊಡ್ಡಯ್ಯ, ಲಕ್ಷ್ಮೀ ನರಸಪ್ಪ , ಆನಂದ್‌, ಕಂಬಣ್ಣ , ಮುಖಂಡರಾದ ಬಿಜವರ ಶ್ರೀನಿವಾಸ್‌, ಸಿದ್ದಪ್ಪ ಹನುಮಂತರಾಯಪ್ಪ , ಗುಂಡಗಲ್ಲು ಶಿವಣ್ಣ , ತಿಮ್ಮಣ್ಣ , ಭೀಮರಾಜು , ಕರಿಯಣ್ಣ , ಸುಮುಖ… ಕೊಂಡವಾಡಿ , ತುಮುಲ… ಕಾರ್ಯನಿರ್ವಹಣಾಧಿಕಾರಿ ಡಾ.ಪ್ರಸಾದ್‌, ರೇಣುಕಾ ಪ್ರಸಾದ್‌, ವಿಸ್ತರಣಾಧಿಕಾರಿಗಳಾದ ಗಿರೀಶ್‌, ಶಂಕರ್‌ನಾಗ್‌, ದರ್ಶನ್‌, ಧರ್ಮವೀರ ಇತರರಿದ್ದರು. 

ಹೈನುಗಾರಿಕೆ ಆರ್ಥಿಕ ಸದೃಢತೆಗೆ ಸಹಕಾರಿ

 ಗುಬ್ಬಿ :  ಕೃಷಿ ಜೊತೆ ಹೈನುಗಾರಿಕೆ ಆರ್ಥಿಕ ಸದೃಢತೆಗೆ ಸಹಕಾರಿಯಾಗಿದೆ. ಕುಟುಂಬ ನಿರ್ವಹಣೆ ಮಾಡುವ ಮಹಿಳೆಯರಿಗೆ ಹಣಕಾಸು ವ್ಯವಸ್ಥೆಗೆ ಪಶು ಸಂಗೋಪನೆ ಉತ್ತಮ ದಾರಿಯಾಗಿದೆ ಎಂದು ತುರುವೇಕೆರೆ ಶಾಸಕ ಮಸಾಲಾ ಜಯರಾಮ್‌ ಅಭಿಪ್ರಾಯಪಟ್ಟರು.

ತಾಲೂಕಿನ ಸಿ.ಎಸ್‌.ಪುರ ಹೋಬಳಿ ಗದ್ದೇಹಳ್ಳಿ ಗ್ರಾಮದಲ್ಲಿಉತ್ಪಾದಕರ ಮಹಿಳಾ ಸಹಕಾರ ಸಂಘದ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿದ ಅವರು 29 ಲಕ್ಷ ರು. ಗಳಲ್ಲಿ ಸುಸಜ್ಜಿತ ಕಟ್ಟಡ ನಿರ್ಮಿಸಿಕೊಂಡ ಈ ಗ್ರಾಮದಲ್ಲಿ ಚುರುಕಿನ ಕೆಲಸ ಮಾಡುತ್ತಿದೆ. ಈ ಹೋಬಳಿಯಲ್ಲಿ ಅತೀ ಹೆಚ್ಚು ಹಾಲು ಉತ್ಪಾದನೆಯಾಗುತ್ತಿದೆ ಎಂಬುದು ಇಲ್ಲಿನ ರೈತರ ಹೆಮ್ಮೆ ವಿಚಾರ ಎಂದರು

click me!