‘ಎಪಿಎಂಸಿ ಸೆಸ್‌ನಿಂದ ಕೊಬ್ಬರಿಗೆ ಬೆಲೆ ನೀಡಿ ’

By Kannadaprabha News  |  First Published Mar 15, 2023, 5:08 AM IST

ಸರ್ಕಾರ ತನ್ನ ಬೊಕ್ಕಸದ ಜೊತೆಗೆ ಕೊಬ್ಬರಿ ವರ್ತಕರು ಸರ್ಕಾರಕ್ಕೆ ಕೊಡುವ ತೆರಿಗೆ ಹಾಗೂ ಎಪಿಎಂಸಿ ಸೆಸ್‌ನಿಂದ ಕೊಬ್ಬರಿಗೆ ಬೆಂಬಲ ನೀಡಿ ಎಂದು ಕೊಬ್ಬರಿ ವರ್ತಕರ ಸಂಘದ ಅಧ್ಯಕ್ಷ ಜಹೇಶ್‌ ಮೆಹತಾ ಒತ್ತಾಯಿಸಿದರು.


  ತಿಪಟೂರು :  ಸರ್ಕಾರ ತನ್ನ ಬೊಕ್ಕಸದ ಜೊತೆಗೆ ಕೊಬ್ಬರಿ ವರ್ತಕರು ಸರ್ಕಾರಕ್ಕೆ ಕೊಡುವ ತೆರಿಗೆ ಹಾಗೂ ಎಪಿಎಂಸಿ ಸೆಸ್‌ನಿಂದ ಕೊಬ್ಬರಿಗೆ ಬೆಂಬಲ ನೀಡಿ ಎಂದು ಕೊಬ್ಬರಿ ವರ್ತಕರ ಸಂಘದ ಅಧ್ಯಕ್ಷ ಜಹೇಶ್‌ ಮೆಹತಾ ಒತ್ತಾಯಿಸಿದರು.

ನಗರದ ಉಪವಿಭಾಗಾಧಿಕಾರಿಗಳ ಕಚೇರಿ ಮುಂದೆ ಬೆಳೆಗಾರರ ಹೋರಾಟ ಸಮಿತಿ, ಹಸಿರು ಸೇನೆ, ರೈತ ಸಂಘದ ವತಿಯಿಂದ ಕ್ವಿಂಟಲ್‌ ಕೊಬ್ಬರಿಗೆ 20 ಸಾವಿರ ರು.ಬೆಂಬಲ ಬೆಲೆ ನಿಗದಿಪಡಿಸುವಂತೆ ಆಗ್ರಹಿಸಿ ಹಮ್ಮಿಕೊಂಡಿರುವ ಅನಿರ್ದಿಷ್ಟಾವಧಿ ಧರಣಿ 23ನೇ ದಿನಕ್ಕೆ ಕಾಲಿಟ್ಟಿದ್ದು, ಇಂದಿನ ಧರಣಿಗೆ ತಿಪಟೂರು ಕೊಬ್ಬರಿ ವರ್ತಕರ ಸಂಘ, ಕೌಟು ವ್ಯಾಪಾರಿಗಳು ಹಾಗೂ ಜಾಗೃತಿ ಯುವ ಕ್ರಾಂತಿ ಪಡೆಯು ಬೆಂಬಲ ವ್ಯಕ್ತಪಡಿಸಿತು.

Tap to resize

Latest Videos

ತುಮಕೂರು ಜಾಗೃತಿ ಯುವ ಕ್ರಾಂತಿ ಪಡೆ ಅಧ್ಯಕ್ಷ ಆರ್‌. ವಿನಯ್‌ ಪ್ರಸಾದ್‌ ಮಾತನಾಡಿ, ಸರ್ಕಾರ ಒಂದು ಜಿಲ್ಲೆ ಒಂದು ಉತ್ಪನ್ನ ಎಂದು ಹೇಳಿ ಘೋಷಣೆ ಮಾಡಿದ್ದು ಆದರೆ ಈ ಭಾಗದಲ್ಲಿ ಪ್ರಮುಖ ಬೆಳೆ ಕೊಬ್ಬರಿಗೇಕೆ ಬೆಲೆ ಇಲ್ಲ. ಸರ್ಕಾರದ ಘೋಷಣೆಗಳು ಕೇವಲ ಘೋಷಣೆಗಳಾಗಿಯೇ ಉಳಿಯುತ್ತಿವೆ. ದೇಶ ಕಾಯುವ ಸೈನಿಕ, ಅನ್ನದಾತ ರೈತ ನಿಶ್ಚಿಂತೆಯಿಂದ ಬದುಕಿದಾಗ ಮಾತ್ರ ದೇಶ ಸುಭಿಕ್ಷವಾಗಲಿದೆ. ಆದರೆ ಸರ್ಕಾರಗಳು ಕೋಮುಸೌಹಾರ್ದವನ್ನು ಹಾಳು ಮಾಡುತ್ತಾ ಸಮಾಜದಲ್ಲಿ ಅಶಾಂತಿಯನ್ನುಂಟು ಮಾಡುತ್ತಿವೆ. ರೈತರ ಕಷ್ಟವನ್ನು ಅರ್ಥಮಾಡಿಕೊಳ್ಳದ, ಆಲಿಸದ ಸರ್ಕಾರಕ್ಕೆ ರೈತರೇ ತಕ್ಕ ಪಾಠ ಕಲಿಸಬೇಕು. ಈಗಲಾದರೂ ಸರ್ಕಾರ ಮಧ್ಯಪ್ರವೇಶಿಸಿ ತೆಂಗು ಬೆಳೆಗಾರರ ಸಮಸ್ಯೆಗೆ ಸ್ಪಂದಿಸಿ ಕ್ವಿಂಟಲ್‌ ಕೊಬ್ಬರಿಗೆ 20 ಸಾವಿರ ರು.ಬೆಂಬಲ ಬೆಲೆ ಹಾಗೂ 3 ಸಾವಿರ ರು. ಪೋ›ತ್ಸಾಹ ಧನ ಘೋಷಿಸಬೇಕೆಂದು ಒತ್ತಾಯಿಸಿದರು.

ಧರಣಿಯಲ್ಲಿ ಕೊಬ್ಬರಿ ವರ್ತಕರ ಸಂಘದ ಸಂಪಿಗೆ ಶಿವಣ್ಣ, ಎಸ್‌.ಎಸ್‌.ಕುಮಾರ್‌, ಸೋನುಗೋಯಲ್‌, ಕುಮಾರ್‌ ಲೋಕೇಶ್ವರ, ಎಸ್‌ಆರ್‌ವಿ ಸಂತೋಷ್‌, ಧನಂಜಯ್‌, ರಾಜಶೇಖರ್‌, ಶಿವಕುಮಾರ್‌, ಮಂಜುನಾಥ್‌, ಮಂಜು, ತುಮಕೂರು ಜಾಗೃತಿ ಯುವ ಕ್ರಾಂತಿ ಪಡೆ ಕಾರ್ಯದರ್ಶಿ ಬಿ.ಎಸ್‌. ಸಿದ್ದು, ದೇವರಾಜು, ಸುರೇಶ್‌, ಕನಕರಾಜು, ಕೊಬ್ಬರಿ ಬೆಳೆಗಾರರ ಹೋರಾಟ ಸಮಿತಿ ಅಧ್ಯಕ್ಷ ಬಿ. ಯೋಗೀಶ್ವರಸ್ವಾಮಿ, ಕಾರ್ಯದರ್ಶಿ ಜಯಚಂದ್ರ ಶರ್ಮ, ಮನೋಹರ್‌ ಪಟೇಲ್‌, ಸಿದ್ದಯ್ಯ, ಶ್ರೀಹರ್ಷ ಹಾಗೂ ವಿವಿಧ ಗ್ರಾಮಗಳ ರೈತರು ಭಾಗವಹಿಸಿದ್ದರು.

20 ಸಾವಿರಕ್ಕೆ ಏರಿಸಲು ಆಗ್ರಹ

  ತುಮಕೂರು :  ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರ ಹಿತವನ್ನು ಕಡೆಗಣಿಸಿರುವ ಹಿನ್ನೆಲೆಯಲ್ಲಿ ಈ ಕೂಡಲೇ ಕೊಬ್ಬರಿಗೆ 20 ಸಾವಿರ ರು. ಬೆಂಬಲ ಬೆಲೆ ಘೋಷಿಸಬೇಕು. ಇಲ್ಲದಿದ್ದರೆ ರೈತ ವಿರೋಧಿ ಸರ್ಕಾರದ ವಿರುದ್ಧ ಅನಿರ್ದಿಷ್ಠಾವಧಿ ಧರಣಿ ನಡೆಸುವುದಾಗಿ ಜಿಲ್ಲಾ ಕಾಂಗ್ರೆಸ್‌ ಪ್ರಚಾರ ಸಮಿತಿ ಅಧ್ಯಕ್ಷ ರಾಯಸಂದ್ರ ರವಿಕುಮಾರ್‌ ಎಚ್ಚರಿಕೆ ನೀಡಿದರು.

ಕೊಬ್ಬರಿ ಬೆಲೆ ನೆಲ ಕಚ್ಚಿದೆ. ಡಬಲ್‌ ಎಂಜಿನ್‌ ಗಳು ಮೌನ ವಹಿಸಿವೆ. ನಮ್ಮನ್ನು ಆಳುತ್ತಿರುವ ಸರ್ಕಾರಗಳು ರೈತರ ಮೂಗಿಗೆ ತುಪ್ಪ ಸವರುವ ಕೆಲಸ ಮಾಡುತ್ತಿವೆ. ಕೇಂದ್ರದ ಬೆಲೆ ಏರಿಕೆ ನೀತಿಯಿಂದಾಗಿ ರೈತರ ಖರ್ಚು ವೆಚ್ಚ ಜಾಸ್ತಿಯಾಗಿದ್ದರೂ ಸಹ ಈ ಬಗ್ಗೆ ಡಬಲ್‌ ಎಂಜಿನ್‌ ಸರ್ಕಾರಗಳು ಗಮನ ಹರಿಸುತ್ತಿಲ್ಲ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ಶನಿವಶಾರ ಆಕ್ರೋಶ ವ್ಯಕ್ತಪಡಿಸಿದರು.

ರೈತರ ಪಂಪ್‌ಸೆಟ್‌ಗೆ ಪ್ರತಿನಿತ್ಯ ಕನಿಷ್ಠ 8 ರಿಂದ 9 ಗಂಟೆಯಾದರೂ ತ್ರಿಫೇಸ್‌ಪೂರೈಸಬೇಕು. ಆದರೆ 3 ಗಂಟೆ ವಿದ್ಯುತ್‌ ಸರಬರಾಜು ಮಾಡದೆ ರೈತರ ಬದುಕಿನ ಜತೆ ಚೆಲ್ಲಾಟವಾಡುತ್ತಿವೆ ಎಂದು ದೂರಿದರು.

ಸರ್ಕಾರ ಕೊಬ್ಬರಿಯನ್ನು ಖರೀದಿ ಮಾಡುವಾಗ ಗರಿಷ್ಠ ಖರೀದಿ ನಿಯಮವನ್ನು ಕೈಬಿಡಬೇಕು ಮತ್ತು ರೈತರು ಬೆಳೆದು ತಂದ ಉತ್ಪನ್ನವನ್ನು ಸಂಪೂರ್ಣವಾಗಿ ಖರೀದಿ ಮಾಡಿಕೊಳ್ಳಬೇಕು. ರೈತರು ಬೆಳೆದ ಬೆಳೆಗಳನ್ನು ಕಾಲ ಕಾಲಕ್ಕೆ ಬೆಳೆ ಸಮೀಕ್ಷೆಯಲ್ಲಿ (ಫä›ಟ್‌ ಐಡಿ) ಲೋಪವಾಗದಂತೆ ರೈತರ ಉಪಸ್ಥಿತಿಯಲ್ಲಿ ನೋಂದಣಿ ಮಾಡಿಕೊಳ್ಳಬೇಕು. ಸರ್ಕಾರವು ಸಕಾಲ ಕೇಂದ್ರಗಳಲ್ಲಿ ಪ್ರತಿ ಪಹಣಿಗೆ 25 ರುಪಾಯಿ ಸುಲಿಗೆ ಮಾಡುವುದನ್ನು ನಿಲ್ಲಿಸಿ, ಕೇವಲ 5 ರುಪಾಯಿ ಮಾತ್ರ ತೆಗೆದುಕೊಳ್ಳಬೇಕು ಎಂದು ಅವರು ಆಗ್ರಹಿಸಿದರು.

click me!