Shivamogga News: ಮರಗಳ ಮಾರಣಹೋಮ: ಗ್ರಾಮಸ್ಥರಲ್ಲಿ ಹೊತ್ತಿದ ಹೋರಾಟದ ಕಿಚ್ಚು

Published : Jan 08, 2023, 03:18 PM ISTUpdated : Jan 08, 2023, 03:19 PM IST
Shivamogga News: ಮರಗಳ ಮಾರಣಹೋಮ: ಗ್ರಾಮಸ್ಥರಲ್ಲಿ ಹೊತ್ತಿದ ಹೋರಾಟದ ಕಿಚ್ಚು

ಸಾರಾಂಶ

ಇಪ್ಪತ್ತು ವರ್ಷಗಳಿಂದ ಸಂರಕ್ಷಿಸಿದ್ದ ಬೃಹತ್‌ ಮರಗಳನ್ನು ಕೇವಲ ಇಪ್ಪತ್ತು ನಿಮಿಷದಲ್ಲಿ ಧರೆಗುರುಳಿಸಿ ಅಟ್ಟಹಾಸ ಮೆರೆದ ಭೂ ಕಬಳಿಕೆಯ ಕಾಡುಗಳ್ಳರಿಂದ ಅರಣ್ಯ ರಕ್ಷಣೆಯ ಹೊಣೆ ಯಾರದ್ದು ಎನ್ನುವ ಪ್ರಶ್ನೆ ಸೊರಬ ತಾಲೂಕಿನ ಗಡಿಯಂಚಿನ ಕ್ಯಾಸನೂರು, ಬರಿಗೆ, ಹಲಸಿನಕೊಪ್ಪ ಭಾಗದ ಗ್ರಾಮಸ್ಥರಲ್ಲಿ ಮೂಡಿದ್ದು, ಈಗ ಹೋರಾಟದ ಕಿಚ್ಚು​ಹೊ​ತ್ತಿ​ದೆ.

- ಎಚ್‌.ಕೆ.ಬಿ. ಸ್ವಾಮಿ

ಸೊರಬ (ಜ.8) : ಇಪ್ಪತ್ತು ವರ್ಷಗಳಿಂದ ಸಂರಕ್ಷಿಸಿದ್ದ ಬೃಹತ್‌ ಮರಗಳನ್ನು ಕೇವಲ ಇಪ್ಪತ್ತು ನಿಮಿಷದಲ್ಲಿ ಧರೆಗುರುಳಿಸಿ ಅಟ್ಟಹಾಸ ಮೆರೆದ ಭೂ ಕಬಳಿಕೆಯ ಕಾಡುಗಳ್ಳರಿಂದ ಅರಣ್ಯ ರಕ್ಷಣೆಯ ಹೊಣೆ ಯಾರದ್ದು ಎನ್ನುವ ಪ್ರಶ್ನೆ ಸೊರಬ ತಾಲೂಕಿನ ಗಡಿಯಂಚಿನ ಕ್ಯಾಸನೂರು, ಬರಿಗೆ, ಹಲಸಿನಕೊಪ್ಪ ಭಾಗದ ಗ್ರಾಮಸ್ಥರಲ್ಲಿ ಮೂಡಿದ್ದು, ಈಗ ಹೋರಾಟದ ಕಿಚ್ಚು​ಹೊ​ತ್ತಿ​ದೆ.

ಹಲಸಿನಕೊಪ್ಪ(halasinakoppa village) ಗ್ರಾಮದ ಸರ್ವೆ ನಂ.4ರಲ್ಲಿ ಮೀಸಲಾಗಿದ್ದ ಗೋಮಾಳ ಮತ್ತು ಕ್ಯಾಸನೂರು(kyasanuru), ಬರಿಗೆ ಗ್ರಾಮಗಳ ಅನನ್ಯ ಸಮೃದ್ಧ ಕಾಡಿನ ಮರ-ಗಿಡಗಳನ್ನು ಗ್ರಾಮಸ್ಥರು 20 ವರ್ಷಗಳಿಂದ ಸರತಿಯಲ್ಲಿ ಕಾದು ರಕ್ಷಿಸಿದ್ದರು. ಆದರೆ, ಪಕ್ಕದ ತಾಲೂಕಿನ ಕೆಲವು ಗ್ರಾಮಸ್ಥರು ಬಗರ್‌ಹುಕುಂ ಹೆಸರಿನಲ್ಲಿ ಈಗಾಗಲೇ 3 ಎಕರೆಯಷ್ಟುಕಾಡು ಕಡಿದು ಬೆಳೆ ಬೆಳೆಯಲು ಮುಂದಾಗಿದ್ದಾರೆ. ಅಡಕೆ, ತೆಂಗಿನ ಸಸಿಗಳನ್ನು ನೆಟ್ಟಿದ್ದಾರೆ. ಬೆಲೆ ಬಾಳುವ ಮರ ಮತ್ತು ಆಯುರ್ವೇದ ಗುಣವುಳ್ಳ ಗಿಡಗಳನ್ನು ನಾಶ ಮಾಡಿದ್ದಾರೆ. ಬೃಹತ್‌ ಮರಗಳ ತೊಗಟೆ ಚಿವುಟಿ ಇಂಗು ಸಿಂಪಡಿಸಿ ಮರ ಒಣಗಿ ಧರೆಗುರುಳುವಂತೆ ಮಾಡಿದ್ದಾರೆ.

ಶಿವಮೊಗ್ಗ: ವಿದ್ಯುತ್ ಅವಘಡದಲ್ಲಿ ಯುವಕ ಸಾವು, ಶವ ಇಟ್ಟು ಗ್ರಾಮಸ್ಥರ ಪ್ರತಿಭಟನೆ

ಕಂದಾಯ ಅಧಿಕಾರಿಗಳು, ಹಿರಿಯ ಅರಣ್ಯ ಅಧಿಕಾರಿಗಳು ಈ ಸ್ಥಳ ಪರಿಶೀಲಿಸಿದ್ದಾರೆ. ವೃಕ್ಷಲಕ್ಷ ಆಂದೋಲನದ ಮುಖಂಡರು ಜಿಲ್ಲಾಧಿಕಾರಿಗೆ ಕ್ರಮಕ್ಕೆ ಆಗ್ರಹಿಸಿದ್ದಾರೆ. ಹಲಸಿನಕೊಪ್ಪ ಗ್ರಾಪಂ ಗ್ರಾಮಸಭೆ ನಡೆಸಿ ಭೂ ಕಬಳಿಕೆ ತೆರವುಗೊಳಿಸಲು ನಿರ್ಣಯ ಕೈಗೊಂಡು, ತಹಸೀಲ್ದಾರ್‌ಗೆ ಪತ್ರ ಬರೆದಿದೆ. ಆದರೆ, ಈವರೆಗೆ ತಾಲೂಕು ಆಡಳಿತ ನೇರ ಕ್ರಮಕ್ಕೆ ಮುಂದಾಗಿಲ್ಲ. ಸ್ಥಳೀಯ ಶಾಸಕರ ಮೌನ ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.

ಕಾಡು ನಾಶ ಪ್ರಕರಣಕ್ಕೆ ಸಂಬಂಧಿಸಿದಂತೆ ಅರಣ್ಯ ಇಲಾಖೆ ಪ್ರಕರಣ ದಾಖಲಿಸಿದೆ. ಭೂ ಬಗರ್‌ಹುಕುಂ ಸಾಗುವಳಿ ಚೀಟಿಗಾಗಿ ಹಾಕಿದ ಅರ್ಜಿಗಳು ಸಹ ವಜಾ ಆಗಿವೆ. ಜಿಲ್ಲಾಧಿಕಾರಿ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ. ಇಷ್ಟೆಲ್ಲ ಇದ್ದೂ ಕಂದಾಯ, ಅರಣ್ಯ ಮತ್ತು ಪಂಚಾಯಿತಿ ಇಲಾಖೆ ಅಧಿಕಾರಿಗಳು ಭೂ ಕಬಳಿಕೆ ತೆರವು ಮಾಡಲು ಮುಂದಾಗುತ್ತಿಲ್ಲವೇಕೆ? ನೂರಾರು ವರ್ಷಗಳ ಇತಿಹಾಸವಿರುವ ವನದೇವತೆ, ಹಲಸಿನಕೊಪ್ಪ ಕಾನನದ ಮಧ್ಯೆ ನೆಲೆಸಿರುವ ಭೂತಪ್ಪನ ವೃಕ್ಷವಾದ ಆಲದ ಮರ​ವನ್ನೂ ಬಿಡದೇ ಕಿಡಿಗೇಡಿಗಳು ಕೊಡಲಿ ಏಟು ನೀಡಿ ಉರುಳಿಸಿದ್ದಾರೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸುತ್ತಾ​ರೆ.

ವೃಕ್ಷಲಕ್ಷ ಆಂದೋಲನ ಸಮಿತಿ ಸಂಚಾ​ಲಕ ಶ್ರೀಪಾದ ಬಿಚ್ಚುಗತ್ತಿ ಈ ಕುರಿತು ಪ್ರತಿ​ಕ್ರಿ​ಯಿಸಿ, ಹಲಸಿನಕೊಪ್ಪ ಭೂ ಕಬಳಿಕೆಯಿಂದ ಜೀವವೈವಿಧ್ಯ ಕಾಯಿದೆ ಉಲ್ಲಂಘನೆಯಾಗಿದ್ದು, ಸೊರಬ ತಾಲೂಕು ಜೀವವೈವಿಧ್ಯ ಸಮಿತಿ ವತಿಯಿಂದ ರಾಜ್ಯ ಜೀವವೈವಿಧ್ಯ ಮಂಡಳಿಗೆ ದೂರು ಸಲ್ಲಿಸಲಾಗುವುದು ಎಂದಿ​ದ್ದಾರೆ.

ಕಂದಾಯ ಮತ್ತು ಅರಣ್ಯ ಕಾಯಿದೆಗಳ ಉಲ್ಲಂಘನೆ ನಡೆದಿದ್ದರೂ ಅಧಿಕಾರಿಗಳು ಯಾವುದೇ ರೀತಿಯ ಪ್ರತಿರೋಧ ವ್ಯಕ್ತಪಡಿಸದೇ ತಣ್ಣಗೆ ಕುಳಿತಿದ್ದಾರೆ. ಕೃತ್ಯ ನಡೆಸಿರುವವರ ವಿರುದ್ಧ ಕಾನೂನು ರೀತ್ಯಾ ಕ್ರಮ ತೆಗೆದುಕೊಳ್ಳದಿದ್ದರೆ ಭೂಮಿ ಉಳಿಸಿಕೊಳ್ಳಲು ನಮ್ಮ ಹೋರಾಟ ಮುಂದುವರೆಸುತ್ತೇವೆ. ಸೊರಬ ತಾಲೂಕು ಕಚೇರಿ ಎದುರು ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳುತ್ತೇವೆ

- ಹರಿಯಪ್ಪ, ರಮೇಶ, ಸದ​ಸ್ಯ, ರಾಜಾರಾಂ ಗ್ರಾಮಾಭಿವೃದ್ಧಿ ಸಮಿತಿ

ಭಾರತ ಸರ್ಕಾರದ ಅರಣ್ಯ ಮಂತ್ರಾಲಯದ ಗಮನ ಸೆಳೆಯಲ್ಲಿದ್ದೇವೆ. ಕ್ಯಾಸನೂರು ಜಂಗಲ್‌ ಎಂದೇ ಖ್ಯಾತಿ ಪಡೆದ ಹಲಸಿನಕೊಪ್ಪ, ಬರಿಗೆ ಅರಣ್ಯವನ್ನು ದೇವರಕಾಡು ಎಂದು ಮಾನ್ಯ ಮಾಡಬೇಕು. ಪರಂಪರಾಗತ ಔಷಧಿ ಮೂಲಿಕೆಗಳ ಸಂರಕ್ಷಿತ ಪ್ರದೇಶ ಎಂದು ಔಷಧಿ ಮೂಲಿಕಾ ಮಂಡಳಿ ಗುರುತಿಸಬೇಕು. ಡೀಮ್‌್ಡ ಅರಣ್ಯ ಪಟ್ಟಿಯಲ್ಲಿ ಇರುವ ಪಶ್ಚಿಮ ಘಟ್ಟದ ವಿಶಿಷ್ಟಅರಣ್ಯ ಪ್ರದೇಶ ಇದಾಗಿದೆ

- ಪ್ರೊ. ಬಿ.ಎಂ.​ಕು​ಮಾ​ರ​ಸ್ವಾಮಿ, ನಿರ್ದೇ​ಶ​ಕ, ಪಶ್ಚಿಮಘಟ್ಟಉಳಿಸಿ ಆಂದೋಲನ

PREV
Read more Articles on
click me!

Recommended Stories

ಚಿಕ್ಕಮಗಳೂರು ಕಾಂಗ್ರೆಸ್ ಕಾರ್ಯಕರ್ತ ಗಣೇಶ್ ಗೌಡ ಹಂತಕರನ್ನು ಸುಮ್ಮನೆ ಬಿಡಲ್ಲ: ಸಿಎಂ ಡಿಸಿಎಂ
4,808 ಕೋಟಿ ವೆಚ್ಚದಲ್ಲಿ ರಸ್ತೆಗಳ ಅಭಿವೃದ್ಧಿ