ಕಬ್ಬಿನ ಗದ್ದೆಯಲ್ಲಿ ಸಿಕ್ಕಿತು ಮುದ್ದು ಮರಿ..!

By Suvarna NewsFirst Published Jan 31, 2020, 1:53 PM IST
Highlights

ಮೈಸೂರು, ತುಮಕೂರು ಭಾಗಗಳಲ್ಲಿ ಚಿರತೆ ದಾಳಿ ಹೆಚ್ಚಾಗಿದ್ದು, ಕಾಡಿನಿಂದ ಚಿರತೆಗಳು ನಾಡಿನತ್ತ ಲಗ್ಗೆ ಇಡುತ್ತಿವೆ. ಮೈಸೂರಿನ ಕೆ.ಆರ್. ನಗರದಲ್ಲಿ ಕಬ್ಬಿನ ಗದ್ದೆಯಲ್ಲಿ ಮುದ್ದಾಗ ಚಿರತೆ ಮರಿಯೊಂದು ಸಿಕ್ಕಿದೆ.

ಮೈಸೂರು(ಜ.31): ಮೈಸೂರು, ತುಮಕೂರು ಭಾಗಗಳಲ್ಲಿ ಚಿರತೆ ದಾಳಿ ಹೆಚ್ಚಾಗಿದ್ದು, ಕಾಡಿನಿಂದ ಚಿರತೆಗಳು ನಾಡಿನತ್ತ ಲಗ್ಗೆ ಇಡುತ್ತಿವೆ. ಮೈಸೂರಿನ ಕೆ.ಆರ್. ನಗರದಲ್ಲಿ ಕಬ್ಬಿನ ಗದ್ದೆಯಲ್ಲಿ ಮುದ್ದಾಗ ಚಿರತೆ ಮರಿಯೊಂದು ಸಿಕ್ಕಿದೆ.

ಕಬ್ಬಿನ ಗದ್ದೆಯಲ್ಲಿ ಮುದ್ದು ಮರಿ ಸಿಕ್ಕಿದ್ದು, ಚಿರತೆ ಮರಿಯನ್ನು ಗ್ರಾಮಸ್ಥರು ಎತ್ತಿ ಮುದ್ದಾಡಿದ್ದಾರೆ. ರೈತರು ಕಬ್ಬು ಕಟಾವು ಮಾಡುವ ವೇಳೆ ಚಿರತೆ ಮರಿ ಪತ್ತೆಯಾಗಿದೆ. ಗದ್ದೆಯಲ್ಲಿ ಸಿಕ್ಕಿರುವ ಚಿರತೆ ಮರಿಗೆ ಒಂದು ತಿಂಗಳು ಪ್ರಾಯವಿರಬಹುದೆಂದು ಅಂದಾಜಿಸಲಾಗಿದ್ದು, ಗಂಡು ಚಿರತೆ ಮರಿಯನ್ನು ರಕ್ಷಿಸಲಾಗಿದೆ.

ಕತ್ತಲಲ್ಲಿ ಕಪ್ಪು ಕರಡಿ: ಗ್ರಾಮದೊಳಗೆ ಇವುಗಳ ಸಂಚಾರ ನೋಡಿ

ಕೆ.ಆರ್.ನಗರ ತಾಲೂಕಿನ ಮಿರ್ಲೆ ಗ್ರಾಮದಲ್ಲಿ ಘಟನೆ ನಡೆದಿದ್ದು, ಸಂತೋಷ್ ಎಂಬವರ ಕಬ್ಬಿನ ಗದ್ದೆಯಲ್ಲಿ ಪುಟ್ಟ ಚಿರತೆ ಮರಿ ಕಾಣಿಸಿಕೊಂಡಿದೆ. ಕಬ್ಬು ಕಟಾವು ಮಾಡುತ್ತಿದ್ದವರು ಚಿರತೆ ಸಿಕ್ಕಿರುವ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಚಿರತೆ ಮರಿಯನ್ನು ವಶಪಡಿಸಿಕೊಂಡಿದ್ದಾರೆ.

click me!