ರಾಷ್ಟ್ರೀಯತೆ ಎನ್ನುವುದು ತಾಯಿ ಮಕ್ಕಳ ಸಂಬಂಧ ಇದ್ದಂತೆ: ಸಿ.ಟಿ.ರವಿ ಹೇಳಿದ್ದೇನು?

Published : May 23, 2026, 07:36 PM IST
CT Ravi

ಸಾರಾಂಶ

ಭಾರತೀಯ ಜನತಾ ಪಕ್ಷ ಎನ್ನುವುದು ಕೇವಲ ಒಂದು ರಾಜಕೀಯ ಪಕ್ಷವಲ್ಲ. ಅದು ಒಂದು ಸೈದ್ದಾಂತಿಕ ಆಂದೋಲನ. ಗಂಗೋತ್ರಿಯಿಂದ ಗಂಗಾಸಾಗರದವರೆಗೆ ಹರಡಿದೆ ಎಂದು ವಿಧಾನ ಪರಿಷತ್ತು ಸದಸ್ಯ ಸಿ.ಟಿ.ರವಿ ಹೇಳಿದ್ದಾರೆ.

ತರೀಕೆರೆ (ಮೇ.23): ಭಾರತೀಯ ಜನತಾ ಪಕ್ಷ ಎನ್ನುವುದು ಕೇವಲ ಒಂದು ರಾಜಕೀಯ ಪಕ್ಷವಲ್ಲ. ಅದು ಒಂದು ಸೈದ್ದಾಂತಿಕ ಆಂದೋಲನ. ಗಂಗೋತ್ರಿಯಿಂದ ಗಂಗಾಸಾಗರದವರೆಗೆ ಹರಡಿದೆ. ಭಾರತೀಯ ಚಿಂತನೆಗಳು ಜಗತ್ತಿನ ಕಲ್ಯಾಣ ಬಯಸುತ್ತದೆ ಎಂದು ವಿಧಾನ ಪರಿಷತ್ತು ಸದಸ್ಯ ಸಿ.ಟಿ.ರವಿ ಹೇಳಿದ್ದಾರೆ. ಸಮೀಪದ ಲಿಂಗದಹಳ್ಳಿ ಬಳಿ ಪ್ರಕೃತಿ ಪಬ್ಲಿಕ್ ಶಾಲೆ ಸಭಾಂಗಣದಲ್ಲಿ ನಡೆದ 2 ದಿನಗಳ ಬಿಜೆಪಿ ಕರ್ನಾಟಕ ಪ್ರಶಿಕ್ಷಣ ಮಹಾಭಿಯಾನ ಚಿಕ್ಕಮಗಳೂರು-ಜಿಲ್ಲಾ ಮಟ್ಟದ ಪ್ರಶಿಕ್ಷಣ ವರ್ಗ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.

ಬಿಜೆಪಿ ಜಗತ್ತಿನ ಅತ್ಯಂತ ದೊಡ್ಡ ಪಕ್ಷ. 17 ಕೋಟಿ ಸದಸ್ಯರನ್ನು ಹೊಂದಿರುವ ಈ ಪಕ್ಷ 1850ಕ್ಕೂ ಹೆಚ್ಚು ಶಾಸಕರು, ಸಂಸದರನ್ನು ಹೊಂದಿದೆ. ಬಿಜೆಪಿ ಸೈದ್ದಾಂತಿಕ ಆಂದೋಲನ ಹಂತ ಹಂತವಾಗಿ ಬೆಳೆದಂತೆ ನಾಯಕತ್ವವೂ ಬೆಳೆದಿದೆ. ಈ ಬಗ್ಗೆ ಹೆಚ್ಚು ಅರಿವು ಮೂಡಿಸಲು ಈ ಪ್ರಶಿಕ್ಷಣದ ಮಹಾಭಿಯಾನ. ಸೈದ್ದಾಂತಿಕ ಪ್ರಕ್ರಿಯೆಯೇ ಈ ಕಾರ್ಯಕ್ರಮದ ಉದ್ದೇಶ.

ಸರ್ವೇ ಜನೋ ಸುಖಿನೋ ಭವಂತು

ಅಧಿಕಾರ ಒಂದು ಸಾಧನ ಅಷ್ಟೇ, ಅದೇ ಪ್ರಮುಖ ಅಲ್ಲ, ಸಾಮಾಜಿಕ, ಆರ್ಥಿಕ, ಶೈಕ್ಷಣಿಕವಾಗಿ ಭಾರತ ವಿಶ್ವಗುರು ವಾಗಬೇಕು ಎನ್ನುವುದು ಪ್ರಮುಖ ಉದ್ದೇಶವಾಗಿದೆ ಎಂದು ಹೇಳಿದರು. ಸೈದ್ದಾಂತಿಕ ಪುನರುತ್ಥಾನ ಆಗಬೇಕು. ಸರ್ವೇ ಜನೋ ಸುಖಿನೋ ಭವಂತು ಎಂಬುದು ನಮ್ಮ ಉದ್ದೇಶ, ಅರ್ಥಿಕ ಬದಲಾವಣೆ ಸರ್ವವ್ಯಾಪಿಯಾಗಬೇಕು. ಪ್ರತಿಯೊಬ್ಬರೂ ಸ್ವಾವಲಂಬಿ, ಅತ್ಮನಿರ್ಬರರಾಗಬೇಕು. ಕಟ್ಟ ಕಡೆ ವ್ಯಕ್ತಿಗೂ ಶಕ್ತಿ ತುಂಬಬೇಕು. ರಾಷ್ಟ್ರೀಯತೆ ಎನ್ನುವುದು ತಾಯಿ ಮಕ್ಕಳ ಸಂಬಂಧ ಇದ್ದಂತೆ, ರಾಷ್ಟ್ರ ಮೊದಲು ಎನ್ನುವದು ನಮ್ಮ ಸಿದ್ದಾಂತ.

ಸೈದ್ದಾಂತಿಕ ಬದ್ಧತೆಯಿಂದ ಜನನಾಯಕತ್ವ ಬೆಳೆಸಬೇಕು. ಅದು ಜನಪರ ಹೋರಾಟದ ಮೂಲಕ ಬೆಳೆಯಬೇಕು ಎಂದರು. ಪ್ರಶಿಕ್ಷಣ ವರ್ಗದಲ್ಲಿ ಖಾಲಿ ಪಾತ್ರೆಯಂತೆ ಕುಳಿತು ವಿಚಾರಗಳನ್ನು ಮನನ ಮಾಡಿಕೊಳ್ಳಬೇಕು ಎಂದ ಅವರು ಈಗಿನ ಸರ್ಕಾರದ ಪ್ರಚಾರ ಪರ ಇದೆ. ಗ್ಯಾರಂಟಿಗಳ ಜಾಹಿರಾತುಗಳ ಭರಾಟೆಯಲ್ಲಿ ಇದೆ. ಜನರ ಬದುಕು ಶೂನ್ಯವಾಗಿದೆ. ರೈತರ ಆತ್ಮ*ಹತ್ಯೆಯಲ್ಲಿ ರಾಜ್ಯಕ್ಕೆ 2ನೇ ಸ್ಥಾನ ಇದೆ ಎಂದು ಆರೋಪಿಸಿದರು.

ಬಿಜೆಪಿ ಜಿಲ್ಲಾಧ್ಯಕ್ಷ ದೇವರಾಜ ಶೆಟ್ರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ 9 ಮಂಡಲದಲ್ಲಿ ಪ್ರಶಿಕ್ಷಣ ವರ್ಗ ಕಾರ್ಯಕ್ರಮ ನಡೆದಿದೆ. ಭಾರತೀಯ ಜನತಾ ಪಕ್ಷ ಇತರ ಪಕ್ಷಗಳಿಗಿಂತ ವಿಭಿನ್ನ. ರಾಷ್ಟ್ರೀಯತೆ ಎತ್ತಿ ಹಿಡಿಯುತ್ತದೆ. ಆನಂತರವೇ ಪಕ್ಷ, ಪ್ರಶಿಕ್ಷಣ ವರ್ಗದಲ್ಲಿ 2 ದಿನಗಳು ಏನನ್ನು ಕಲಿತುಕೊಳ್ಳುತ್ತೇವೆಯೋ ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು. ಪ್ರಶಿಕ್ಷಣ ವರ್ಗದಲ್ಲಿ ಬಹಳಷ್ಟು ವಿಚಾರಗಳು ಚರ್ಚೆಗೆ ಬರುತ್ತದೆ. ಪಕ್ಷದ ಸಾಮಾಜಿಕ ಉದ್ದೇಶ ಮತ್ತು ವ್ಯಕ್ತಿತ್ವ ಹೇಗೆ ರೂಪಿಸಕೊಳ್ಳಬೇಕು ಇತ್ಯಾದಿಗಳು ಖುಷಿಯಿಂದ ಪ್ರಶಿಕ್ಷ ಣ ವರ್ಗ ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರಶಿಕ್ಷಣ ವರ್ಗದಲ್ಲಿ ವಿದ್ಯಾರ್ಥಿಗಳ ರೀತಿ ಕುಳಿತುಕೊಳ್ಳಬೇಕು ಎಂದು ಹೇಳಿದರು.

PREV
Read more Articles on
click me!

Recommended Stories

ಮಕ್ಕಳನ್ನು ಪ್ರಾಣಿಗಳಂತ ತಿಳ್ಕೊಂಡಿದಿರೇನ್ರೀ: ಅಧಿಕಾರಿಗಳ ವಿರುದ್ಧ ಉಪ ಲೋಕಾಯುಕ್ತ ಬಿ.ವೀರಪ್ಪ ಆಕ್ರೋಶ
ಮೆಟ್ರಿಮೋನಿಯಲ್​ ಸೈಟ್​ನಲ್ಲಿ 'ಹ್ಯಾಂಡ್​ಸಮ್​ ಡಾಕ್ಟರ್​': ಲಕ್ಷ ಲಕ್ಷ ಕಳಕೊಂಡ ಕರ್ನಾಟಕದ ಯುವತಿಯರು