ಚಿಕ್ಕಮಗಳೂರು: ಮಲೆನಾಡಲ್ಲಿ ಧಾರಾಕಾರ ಮಳೆ, ಹಿರೇಕೊಳಲೆ ಕೆರೆಗೆ ಬಾಗಿನ ಅರ್ಪಿಸಿದ ಸಿ.ಟಿ ರವಿ

By Girish Goudar  |  First Published Jul 6, 2022, 11:30 PM IST

*   ಕೆರೆ ತುಂಬಿ ಕೋಡಿ ಬಿದ್ದ ಹಿರೇಕೊಳಲೆ ಕೆರೆ
*   ಚಿಕ್ಕಮಗಳೂರು ತಾಲೂಕಿನ ಹಿರೇಕೊಳಲೆ ಕೆರೆ
*   ಪತ್ನಿ ಪಲ್ಲವಿ ಜೊತೆ ಹೋಗಿ ಬಾಗಿನ ಅರ್ಪಿಸಿದ ಸಿ.ಟಿ ರವಿ
 


ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ 

ಚಿಕ್ಕಮಗಳೂರು(ಜು.06): ಮಲೆನಾಡಿನಲ್ಲಿ ಕಳೆದ ಮೂರು ನಾಲ್ಕು ದಿನಗಳಿಂದ ಭಾರೀ ಮಳೆ ಆಗುತ್ತಿದೆ. ಅದರಲ್ಲೂ ಚಿಕ್ಕಮಗಳೂರಿನ ಗಿರಿ ಪ್ರದೇಶದಲ್ಲಿ ಭಾರೀ ಮಳೆ ಆಗುತ್ತಿರುವ ಹಿನ್ನಲೆಯಲ್ಲಿ  ಹಿರೇಕೊಳಲೆ ಕೆರೆ ತುಂಬಿ ಕೋಡಿ ಬಿದ್ದಿದೆ. ಈ ಹಿನ್ನೆಲೆ ಚಿಕ್ಕಮಗಳೂರು ಶಾಸಕ ಸಿ.ಟಿ ರವಿ ಪತ್ನಿ ಪಲ್ಲವಿ ಜೊತೆಗೆ ತೆರಳಿ ಕೆರೆಗೆ ಪೂಜೆ ಸಲ್ಲಿಸಿ, ಬಾಗಿನ ಸಂರ್ಪಣೆ ಮಾಡಿದ್ದರು. ಚಿಕ್ಕಮಗಳೂರು ನಗರದ ಕುಡಿಯುವ ನೀರಿನ ಮೂಲದ ಕೆರೆ ಆಗಿರುವ ಹಿರೇಕೊಳಲೆ ಕೆರೆ ಜುಲೈ ತಿಂಗಳಿನಲ್ಲೇ ಕೋಡಿ ಬಿದ್ದಿರುವುದು ಕಳೆದ ಹಲವು ವರ್ಷಗಳೇ ಮೊದಲಾಗಿದೆ.  

Tap to resize

Latest Videos

ಸಿದ್ರಾಮೋತ್ಸವ ಕಾಂಗ್ರೆಸ್‌ನಲ್ಲೇ ತಳಮಳ 

ಚಿಕ್ಕಮಗಳೂರು ತಾಲ್ಲೂಕಿನ ಹಿರೇಕೊಳಲೆ ಕೆರೆಗೆ ಬಾಗಿ ಅರ್ಪಣೆ ಮಾಡಿದ ಬಳಿಕ ಮಾತಾಡಿದ ಶಾಸಕ ಸಿ.,ಟಿ ರವಿ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಸಿದ್ರಾಮೋತ್ಸವ ಅಚರಿಸಿಕೊಂಡರೆ ಅದಕ್ಕೆ ನಮಗೇನೂ ದುಃಖವಿಲ್ಲ. ಅದರಿಂದ ಕಾಂಗ್ರೆಸ್ನಲ್ಲಿ ತಳಮಳ ಆಗುತ್ತಿದೆ ಅದಕ್ಕೆ ನಾವು ಮೂಗು ತೂರಿಸುವುದಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದರು.75 ವರ್ಷದ ಸಿದ್ದರಾಮಯ್ಯ ಅವರು ನೂರು ವರ್ಷ ಬದುಕಲಿ ಎಂದು ಶುಭ ಹಾರೈಸುತ್ತೇವೆ. ಅವರ ಇಚ್ಛೆಗಳೆಲ್ಲವೂ ನೆರವೇರಲಿ.ವೈಯಕ್ತಿಕ ಜೀವನದಲ್ಲಿ ಖುಷಿಯಾಗಿರಲಿ ಆದರೆ ರಾಜಕೀಯ ಅಧಿಕಾರ ಬಿಜೆಪಿ ಕೈಯಲ್ಲಿ ಇರಲಿ ಎಂದರು.ದೇಶದ ಹಿತ, ರಾಜ್ಯದ ಹಿತದ ದೃಷ್ಠಿಯಿಂದ ಕಾಂಗ್ರೆಸ್ ಕೈಗೆ ಅಧಿಕಾರ ಹೋಗಬಾರದು. ಕಾಂಗ್ರೆಸ್ ನಿಲುವು ರಾಷ್ಟ್ರಘಾತಕ ನಿಲುವುಗಳು ಎಂದರು.

ಚಿಕ್ಕಮಗಳೂರು ಜಿಲ್ಲೆಯಲ್ಲಿ ಮುಂದುವರೆದ ಭಾರೀ ಮಳೆ: ಇನ್ನೂ ನಾಲ್ಕು ದಿನ ಆರೆಂಜ್ ಅಲರ್ಟ್

ಕಾಳಿಕಾ ಮಾತೆಗೆ ಅಪಮಾನ: ಸಿ.ಟಿ ರವಿ ಕಿಡಿ 

ಕೆಲವರು ನಮ್ಮ ಸಹನೇಯೆ ನಮ್ಮ ದೌರ್ಬಲ್ಯ ಅಂದುಕೊಂಡಿದ್ದಾರೆ. ಕಾಳಿಕಾ ಮಾತೆ ಮಾಂಸ ಸ್ವೀಕಾರ ಮಾಡವುದು ಮಾತ್ರವಲ್ಲ ರಾಕ್ಷಸರ ರುಂಡವನ್ನೂ ಚಲ್ಲಾಡಿದ್ದಾಳೆ. ದುಷ್ಟರ ನಿಗ್ರಹ ಮಾಡುವ ರುಂಡ ಮಾಲಿನಿ ಆಕೆ  ಎನ್ನುವುದು ನೆನಪಿರಲಿ ಎಂದರು.ಯಾರು ದೇಶಕ್ಕೆ ಶತ್ರುಗಳಿದ್ದಾರೆ, ಧರ್ಮ ವಿರೋಧಿಗಳಿದ್ದಾರೆ,ಅವರ ರುಂಡವನ್ನ ಕೂಡ ಚೆಂಡಾಡುವಂತ ಶಕ್ತಿ ಕಾಳಿ ಮಾತೆಗಿದೆ. ದುಷ್ಟತನ ಮಾಡುವವರಿಗೆ ಒಂದು ದಿನ ರುಂಡಮಾಲಿನಿಯಾಗಿಯೇ ಬರುತ್ತಾಳೆ ಎಂದರು.
 

click me!