ಚಿಕ್ಕಪ್ಪನ ಕ್ರಷರ್‌ಗೆ ರಸ್ತೆ ಮಾಡಲು ದಲಿತರ ಜಮೀನಿನಲ್ಲಿ ಫಸಲು ನಾಶ: ಶಾಸಕ ಗಣೇಶ್ ಪ್ರಸಾದ್ ವಿರುದ್ದ ಗಂಭೀರ ಆರೋಪ

By Govindaraj SFirst Published Sep 19, 2024, 6:24 PM IST
Highlights

ಚಿಕ್ಕಪ್ಪನ ಕ್ರಷರ್ಗಾಗಿ  ಅಧಿಕಾರ ದುರ್ಬಳಕೆ  ಮಾಡಿಕೊಂಡು ದಲಿತರ ಜಮೀನುಗಳ ಮೇಲೆ ರಸ್ತೆ ನಿರ್ಮಾಣ ಮಾಡಲು ಗುಂಡ್ಲುಪೇಟೆ ಕಾಂಗ್ರೆಸ್ ಶಾಸಕ ಎಚ್.ಎಸ್ ಗಣೇಶ್ ಮುಂದಾಗಿದ್ದಾರೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ. 

ವರದಿ: ಪುಟ್ಟರಾಜು.ಆರ್.ಸಿ, ಏಷಿಯಾನೆಟ್ ಸುವರ್ಣ ನ್ಯೂಸ್, ಚಾಮರಾಜನಗರ

ಚಾಮರಾಜನಗರ (ಸೆ.19): ಚಿಕ್ಕಪ್ಪನ ಕ್ರಷರ್ಗಾಗಿ  ಅಧಿಕಾರ ದುರ್ಬಳಕೆ  ಮಾಡಿಕೊಂಡು ದಲಿತರ ಜಮೀನುಗಳ ಮೇಲೆ ರಸ್ತೆ ನಿರ್ಮಾಣ ಮಾಡಲು ಗುಂಡ್ಲುಪೇಟೆ ಕಾಂಗ್ರೆಸ್ ಶಾಸಕ ಎಚ್.ಎಸ್ ಗಣೇಶ್ ಮುಂದಾಗಿದ್ದಾರೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ. ಬಂಡೀದಾರಿ ಹೆಸರಿನಲ್ಲಿ  ದಬ್ಬಾಳಿಕೆಯಿಂದ ದಲಿತ ಜಮೀನುಗಳ ಮೇಲೆ 2 ಕಿಲೊಮೀಟರ್ ರಸ್ತೆ ನಿರ್ಮಾಣ ಮಾಡಲಾಗುತ್ತಿದೆ, ರಸ್ತೆ ನಿರ್ಮಾಣಕ್ಕಾಗಿ ಜಮೀನುಗಳಲ್ಲಿ ಬೆಳೆದಿದ್ದ ಫಸಲನ್ನು ನಾಶಮಾಡಲಾಗಿದೆ ಎಂದು ಶಾಸಕ ಗಣೇಶಪ್ರಸಾದ್ಗೆ ಇಲ್ಲಿನ ರೈತರ ಹಿಡಿಶಾಪ ಹಾಕ್ತಿದ್ದಾರೆ. ಇದರ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ ನೋಡಿ

Latest Videos

ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ಕಾಂಗ್ರೆಸ್ ಶಾಸಕ ಗಣೇಶಪ್ರಸಾದ್  ಅವರ ಚಿಕ್ಕಪ್ಪ ನಂಜುಂಡಪ್ರಸಾದ್ ದೊಡ್ಡಹುಂಡಿ ಬಳಿ ಕ್ರಷರ್ ನಡೆಸುತ್ತಿದ್ದಾರೆ. ಈ ಕ್ರಷರ್ಗೆ ದಾರಿ ಮಾಡಿಕೊಡುವ ಉದ್ದೇಶದಿಂದ ಬಂಡೀದಾರಿ ಹೆಸರಿನಲ್ಲಿ ಈ ಭಾಗದ ದಲಿತರಿಗೆ ಸೇರಿದ ಜಮೀನುಗಳ ಮೇಲೆ ರಸ್ತೆ ನಿರ್ಮಾಣ ಮಾಡಲಾಗುತ್ತಿದೆ. ನಾವು ಅನಾದಿ ಕಾಲದಿಂದಲೂ ನಮ್ಮ ಜಮೀನಿನಲ್ಲಿ ಸಾಗುವಳಿ ಮಾಡಿಕೊಂಡು ಬರುತ್ತಿದ್ದು ಇಲ್ಲಿ ಯಾವುದೇ ರಸ್ತೆ, ಕಾಲು ದಾರಿ ಇರುವುದಿಲ್ಲ ಜಿಲ್ಲಿ ಕ್ರಶರ್ ಗೆ ರಸ್ತೆ ಮಾಡಿಕೊಡುವ ಸಲುವಾಗಿ ನಮ್ಮ ಜಮೀನುಗಳಲ್ಲಿ ಬೆಳೆದಿದ್ದ ಹುರುಳು ಸೂರ್ಯಕಾಂತಿ, ಜೋಳ ಮತ್ತಿತರ ಬೆಳೆ ನಾಶಪಡಿಸಲಾಗಿದೆ.

ಬಿಜೆಪಿಯವರಿಗೆ ತಾಕತ್ತಿದ್ದರೆ ಕಾಂಗ್ರೆಸ್‌ನ ಗ್ಯಾರಂಟಿ ಕಿತ್ತಾಕಲಿ: ಡಿ.ಕೆ.ಸುರೇಶ್ ಸವಾಲು

ಇದರಿಂದ ಬೇಸತ್ತ ರೈತರು ರಸ್ತೆ ನಿರ್ಮಾಣ  ಕಾಮಗಾರಿ ತಡೆಗಟ್ಟಲು ಮುಂದಾಗಿದ್ದಾರೆ.  ಈ ವೇಳೆ ಅಧಿಕಾರಿಗಳು ತಮ್ಮನ್ನು ಹೆದರಿಸಿ ಬೆದರಿಸಿ  ಮೇಲೆ ದಬ್ಬಾಳಿಕೆಯಿಂದ ರಸ್ತೆ ನಿರ್ಮಾಣ ಮಾಡಲು ಮುಂದಾಗಿದ್ದಾರೆ ಎಂದು ರೈತರು ಆರೋಪಿಸಿದ್ದಾರೆ.  ಗ್ರಾಮಸ್ಥರಿಗೆ ತಿರುಗಾಡಲು ಚಿಕ್ಕಹುಂಡಿ ಗ್ರಾಮದಿಂದ ಬರುವ ಓಣಿ ರಸ್ತೆಯನ್ನು ಸರಿಪಡಿಸಿ ಎಂದು ಸುಮಾರು 25 ವರ್ಷಗಳಿಂದಲೂ ಕೇಳುತ್ತಿದ್ದರೂ ಅದನ್ನು ಮಾಡದೇ ನಮಗೆ ಬೇಡವಾದ ಈ ರಸ್ತೆಯನ್ನು ಮಾತ್ರ ತರಾತುರಿಯಲ್ಲಿ ಮಾಡಲು ಹೊರಟಿರುವುದು ಎಷ್ಟು ಸರಿ ಎಂದು ರಸ್ತೆ ನಿರ್ಮಾಣ ಪರಿಶೀಲನೆಗೆ ಬಂದ ಗುಂಡ್ಲುಪೇಟೆ ತಹಸೀಲ್ದಾರ್ ರಮೇಶ್ಬಾಬು ಅವರನ್ನುಸಹ ಅವರು ತರಾಟೆಗೆ ತೆಗೆದುಕೊಂಡಿದ್ದಾರೆ

ನಾವ್ಯಾರು ಬಂಡೀದಾರಿ ಕೇಳಿಲ್ಲ ತಲೆ ತಲೆಂತೆಗಳಿಂದ ಉಳುಮೆ ಮಾಡಿಕೊಂಡು ಬರುತ್ತಿದ್ದೇವೆ. ಆದರೆ ಬಂಡೀದಾರಿ ಹೆಸರಿನಲ್ಲಿ ರಸ್ತೆ ನಿರ್ಮಾಣ ಮಾಡಿ ಶಾಸಕರ ಚಿಕ್ಕಪ್ಪ ನಂಜುಂಡಪ್ರಸಾದ್ಗೆ ಸೇರಿದ ಕ್ರಷರ್ ಗೆ ದಾರಿ ಮಾಡಿಕೊಡಲು ಅಧಿಕಾರಿಗಳ ಮುಂದಾಗಿದ್ದಾರೆ ಎಂದು ರೈತರ ಆರೋಪಿಸಿದ್ದಾರೆ. ನಮಗೆ ಇರುವುದೇ ಅರ್ಧ ಎಕರೆ, ಒಂದು ಎಕರೆ  ಜಮೀನುಗಳು ಅದರಲ್ಲಿ ರಸ್ತೆ ನಿರ್ಮಾಣ ಮಾಡಿದರೆ ನಮಗೆ ಜಮೀನೇ ಉಳಿಯಲ್ಲ, ಅಲ್ಲದೆ ಕ್ರಷರ್ ಲಾರಿಗಳ ಸಂಚಾರದಿಂದ  ಧೂಳು ಆವೃತವಾಗಿ ಬೆಳೆಗಳಿಗೆ ಹಾನಿಯಾಗುತ್ತದೆ ಎಂದು ರೈತರು ಅಲವತ್ತುಕೊಂಡಿದ್ದಾರೆ.

ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ: ಛಲವಾದಿ ನಾರಾಯಣಸ್ವಾಮಿ

2018 ರಲ್ಲು ಇದೇ ರೀತಿ ರಸ್ತೆ ನಿರ್ಮಾಣ ಮಾಡಲು ಹೊರಟಾಗ ಪರಿಶಿಷ್ಟ ಜಾತಿ ಆಯೋಗಕ್ಕೆ ಹಾಗು ಅಂದಿನ ಜಿಲ್ಲಾಧಿಕಾರಿಗೆ ದೂರು ನೀಡಿ ರಸ್ತೆ ನಿರ್ಮಾಣ ತಡೆಗಟ್ಟಿದ್ದರು. ಆದರೆ ಇದೀಗ ಕಾಂಗ್ರೆಸ್ ಸರ್ಕಾರ ಇರುವುದರಿಂದ ಅಧಿಕಾರದ ಬಲದಿಂದ ನಮ್ಮ ಮೇಲೆ ದೌರ್ಜನ್ಯ ನಡೆಸಿ ಬಂಡೀದಾರಿ  ಹೆಸರಿನಲ್ಲಿ ನಿರ್ಮಿಸಲಾಗುತ್ತಿದೆ. ನಮಗೆ ಯಾವುದೇ ಬಂಡೀದಾರಿ ಬೇಡ ಎಂಬುದು ರೈತರ ಆಗ್ರಹವಾಗಿದೆ.

click me!